ಸ್ವಚ್ಛ, ಪ್ರಾಮಾಣಿಕ ರಾಜಕಾರಣಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ – ರವಿಕೃಷ್ಣಾ ರೆಡ್ಡಿ

Spread the love

ಸ್ವಚ್ಛ, ಪ್ರಾಮಾಣಿಕ ರಾಜಕಾರಣಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ – ರವಿಕೃಷ್ಣಾ ರೆಡ್ಡಿ

ಉಡುಪಿ: ಸ್ವಚ್ಛ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣಕ್ಕಾಗಿ ರಾಜ್ಯದಲ್ಲಿ ಉದಯವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮುಂದಿನ ಎಲ್ಲ ಚುನಾವಣೆಯಲ್ಲೂ ಭಾಗವಹಿಸಲಿದೆ ಎಂದು ಪಕ್ಷದ ರಾಜಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದರು.

ಅವರು ಬುಧವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ, ಕನ್ನಡ ಮತ್ತು ನಾಡಿನ ಜನ,ನೆಲ,ಜಲದ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಪಕ್ಷದ ಪ್ರಮುಖ ಧ್ಯೇಯವಾಗಿದೆ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಪಕ್ಷವು ಅನೇಕ ಹೋರಾಟ ಮತ್ತು ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದೆ.

ರಾಜ್ಯದಲ್ಲಿ ಕುಟುಂಬ ರಾಜಕಾರಣ ಮಾಡುವ ಮೂಲಕ ಪ್ರತಿಯೊಬ್ಬ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇವತ್ತು ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ. ಅವರನ್ನು ಕಿತ್ತೆಸೆಯಲು ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ಈ ಕರ್ನಾಟಕ ರಾಷ್ಟ್ರ ಸಮಿತಿ ಎಂಬ ಸಂಘಟನೆ ಹುಟ್ಟು ಹಾಕಲಾಗಿದೆ. ಇದರ ಮೂಲಕ ಕುಟುಂಬ ರಾಜಕಾರಣವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

ರಾಜ್ಯದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಜೆಸಿಬಿ ಇದ್ದಂತೆ. ಅಗೆದು ಅಗೆದು ಹಣ ಲೂಟಿ ಮಾಡುವ ಮೂಲಕ ಜನರನ್ನು ದಿವಾಳಿ ಎಬ್ಬಿಸುತ್ತಿದ್ದಾರೆ. ರಾಜ್ಯದಲ್ಲಿ ಬರ, ನಿರುದ್ಯೋಗ ಸಮಸ್ಯೆ, ಶಿಕ್ಷಣ ಬಗ್ಗೆ ಚಿಂತನೆ ಮಾಡದೆ ತಮ್ಮ ಮಕ್ಕಳ ಭವಿಷ್ಯ ತಮ್ಮಗಳ ಬಗ್ಗೆ ಯೋಚಿಸುತ್ತಿದ್ದಾರೆ.  ಚುನಾವಣೆಯಲ್ಲಿ ಜನರಿಗೆ ಮದ್ಯ, ಹಣ ಆಮಿಷ ಒಡ್ಡಿ ಮತದಾರರ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಕರ್ನಾಟಕ ರಾಷ್ಟ್ರ ಸಮಿತಿಯಿಂದ ಯಾವುದೇ ನಯಾಪೈಸೆ ಲಾಭವಿಲ್ಲದೆ ನಿಸ್ವಾರ್ಥ ಜನಸೇವೆ ಮಾಡುವವರು ಮಾತ್ರ ಸ್ಪರ್ಧಿಸಲಿದ್ದಾರೆ. ಅಂತವರನ್ನು ಮಾತ್ರ ನಮ್ಮ ಸಂಘಟನೆಯಲ್ಲಿ ಇರುತ್ತಾರೆ ಎಂದರು. ಬರುವ ದಿನಗಳಲ್ಲಿ ಗ್ರಾ.ಪಂ. ತಾ.ಪಂ. ಜಿ.ಪಂ. ತಳಮಟ್ಟದಿಂದ ಸಂಘಟನೆ ಕಟ್ಟುವ ಮೂಲಕ ಸಂಘಟನೆಯನ್ನು ಬಲಿಷ್ಠಗೊಳಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲಾ ಘಟಕವನ್ನು ಕೂಡ ರಚನೆ ಮಾಡಲಾಗುವುದು ಎಂದರು.

ಸುದ್ದಿಗೋಷ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಎಸ್. ಎಚ್, ಅಮೃತ್ ಶೆಣೈ, ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ ಎನ್, ರಾಜ್ಯ ಖಜಾಂಚಿ ಅರವಿಂದ್ ಕೆ ಬಿ, ಪಾಪಣ್ಣ ಉಪಸ್ಥಿತರಿದ್ದರು.


Spread the love