ಸಮೀಕ್ಷೆಗೆ ಬಾಕಿ: ನಗರಪಾಲಿಕೆ ಸಹಾಯವಾಣಿ ಸಂಪರ್ಕಿಸಲು ಸೂಚನೆ

Spread the love

ಸಮೀಕ್ಷೆಗೆ ಬಾಕಿ: ನಗರಪಾಲಿಕೆ ಸಹಾಯವಾಣಿ ಸಂಪರ್ಕಿಸಲು ಸೂಚನೆ

ಮಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಮಂಗಳೂರು ತಾಲೂಕಿನಾದ್ಯಂತ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಅದರಂತೆ ಸಮೀಕ್ಷೆಯಲ್ಲಿ ಭಾಗವಹಿಸದ ಸಾರ್ವಜನಿಕರು ಪಾಲಿಕೆಯ ಮನವಿಗೆ ಸ್ಪಂದಿಸಿ ಸಹಾಯವಾಣಿಗೆ ಸಂಪರ್ಕಿಸುವ ಮೂಲಕ ಬಹಳಷ್ಟು ನಾಗರೀಕರು ಗಣತಿ ಕಾರ್ಯಕ್ಕೆ ಮಾಹಿತಿ ನೀಡಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.

ಅಕ್ಟೋಬರ್ 18 ರ ಒಳಗಾಗಿ ಬಾಕಿ ಉಳಿದಿರುವ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿದ್ದು ಹಾಗೂ ಕೊನೆಯ 3 ದಿನಗಳು ಬಾಕಿ ಉಳಿದಿರುವುದರಿಂದ ಗಣತಿ ಕಾರ್ಯಕ್ಕೆ ಮಾಹಿತಿ ನೀಡದಿರುವ ನಾಗರೀಕರು ಗಣತಿ ಮಾಡಿಸಿಕೊಳ್ಳುವ ಸಲುವಾಗಿ ಪಾಲಿಕೆಯ ಸಹಾಯವಾಣಿ ಸಂಖ್ಯೆ 0824-2220306 ಅಥವಾ ವಾಟ್ಸ್ಯಾಪ್ ಸಂಖ್ಯೆ 9449007722 ತ್ವರಿತವಾಗಿ ಸಂಪರ್ಕಿಸಿ ಸಮೀಕ್ಷೆಯಲ್ಲಿ ಭಾಗಿಯಾಗಿ ಸಹಕಾರ ನೀಡಬೇಕು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments