ಸಮುದ್ರಕ್ಕೆ ಇಳಿದು ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಪತ್ತೆ

ಸಮುದ್ರಕ್ಕೆ ಇಳಿದು ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಪತ್ತೆ

ಮಂಗಳೂರು: ಸಮುದ್ರಕ್ಕೆ ಇಳಿದು ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಬೆಂಗರೆ ನಿವಾಸಿ ಅಲ್ತಾಫ್ ಎಂಬರ ಪುತ್ರ ಶಾಹಿಲ್ (16) ತನ್ನ ಸ್ನೇಹಿತರರೊಂದಿಗೆ ಸೋಮವಾರ ಮಧ್ಯಾಹ್ನ ಸ್ನಾನಕ್ಕಾಗಿ ಸಮುದ್ರಕ್ಕೆ ಇಳಿದು ನಂತರ ನಾಪತ್ತೆಯಾಗಿದ್ದು, ಇದೀಗ ಬಾಲಕ ಮೃತದೇಹ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಮೃತ ಬಾಲಕ ಕಸಬ ಬೆಂಗ್ರೆಯ ಶಾಹಿಲ್ ಕಾರ್ ಸ್ಟ್ರೀಟ್ ಪ್ರೌಢ ಶಾಲೆಯಲ್ಲಿ 10ನೆ ತರಗತಿಯ ವಿದ್ಯಾರ್ಥಿಯಾಗಿದ್ದ.

ಶಾಲೆಗೆ ರಜೆ ಇದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಬೆಂಗರೆಯಲ್ಲಿ ಸಮುದ್ರಕ್ಕೆ ಸ್ನಾನಕ್ಕೆ ಇಳಿದು ನಂತರ ನಾಪತ್ತೆಯಾಗಿದ್ದ ಎಂದು ತಿಳಿದುಬಂದಿದ್ದು, ಈತನಿಗಾಗಿ ಹುಡುಕಾಟ ನಡೆಸಲಾಗಿತ್ತು.

ಇಂದು ಬೆಳಗ್ಗೆ ಆತನ ಮೃತದೇಹ ಕಸಬ ಬೆಂಗ್ರೆ ಸಮೀಪದ ಸಮುದ್ರದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.