ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ನಾಯಕತ್ವ ಶಿಬಿರಗಳು ತಳಪಾಯ – ವಿವೇಕ್ ಆಳ್ವ

Spread the love

ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ನಾಯಕತ್ವ ಶಿಬಿರಗಳು ತಳಪಾಯ – ವಿವೇಕ್ ಆಳ್ವ

ಮೂಡಬಿದಿರೆ: ರಾಷ್ಟ್ರೀಯ ಭಾವೈಕ್ಯತೆಯ ಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಉದ್ದೀಪನಗೊಳಿಸುವುದರ ಜೊತೆಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಇಂತಹ ನಾಯಕತ್ವ ಶಿಬಿರಗಳು ತಳಪಾಯವಿದ್ದಂತೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ನುಡಿದರು.

ಆಳ್ವಾಸ್ ಕಾಲೇಜಿನ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಜನವರಿ 22 ರಿಂದ 25 ರ ವರೆಗೆ ಜರುಗುವ ‘’ನಾಯಕತ್ವ ಶಿಬಿರ’’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.

ಎನ್‍ಸಿಸಿಯ ಕೆಡೆಟ್‍ಗಳು ಸಮವಸ್ತ್ರ ಧರಿಸಿದಾಗ ಮಾತ್ರ ಶಿಸ್ತಿನಿಂದ ಇರುವುದಲ್ಲದೆ, ತಮ್ಮ ದಿನನಿತ್ಯದ ಜೀವನದಲ್ಲೂ ಶಿಸ್ತುನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಮಾತನಾಡಿ, ಶಿಸ್ತು ಪ್ರತಿಯೊಬ್ಬರ ಜೀವನದಲ್ಲೂ ಅಗತ್ಯವಾಗಿದ್ದು, ನಮ್ಮ ನಡವಳಿಕೆಯನ್ನು ಪ್ರತಿಬಿಂಬಿಸುವ ಸಾಧನವಾಗಿದೆ. ಎನ್.ಸಿ.ಸಿ ವಿದ್ಯಾರ್ಥಿಗಳ ಪ್ರಮುಖವಾಗಿ ತನ್ನ ಕರ್ತವ್ಯವನ್ನು ಅರಿತುಕೊಂಡು ಜವಾಬ್ದಾರಿಯನ್ನು ನಿರ್ವಹಿಸಬೇಕು ಆಗ ಮಾತ್ರ ಸಾಮಾಜಿಕವಾಗಿ ಶಿಸ್ತನ್ನು ಹಾಗೂ ನಾಗರಿಕ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ.

ಈ ನಾಯಕತ್ವ ಶಿಬಿರದಲ್ಲಿ ರಾಜ್ಯದ ವಿವಿಧ ಶಾಲಾ ಕಾಲೇಜುಗಳಿಂದ 1850 ಕೆಡೆಟ್‍ಗಳು 6 ಗ್ರೂಪ್ ನಿಂದ ಆಗಮಿಸಿದ್ದಾರೆ. ಬೆಂಗಳೂರು ಎ, ಬೆಂಗಳೂರು ಬಿ, ಬೆಳಗಾವಿ, ಬಳ್ಳಾರಿ, ಮೈಸೂರು, ಮಂಗಳೂರು ಗ್ರೂಪ್‍ನಿಂದ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಉಡುಪಿಯ 30 ಶಿಕ್ಷಣ ಸಂಸ್ಥೆಯಿಂದ 350 ಎನ್ ಸಿ ಸಿ ಮಕ್ಕಳು, ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ 18ನೇ ಬ್ಯಾಟೆಲಿಯನ್‍ಗೆ ಒಳಪಟ್ಟ ಶಾಲಾ ಕಾಲೇಜುಗಳಿಂದ 1000ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಈ ಶಿಬಿರದಲ್ಲಿ ಶಾರೀರಿಕ ತರಬೇತಿ, ಡ್ರಿಲ್, ವೆಪನ್ ತರಬೇತಿ, ವಿಶೇಷ ಉಪನ್ಯಾಸ, ಸಂಜೆ ಸಂಗೀತ ರಸ ಮಂಜರಿ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಸಾಂಪ್ರದಾಯಿಕ ಪಥಸಂಚಲನದ ಅಭ್ಯಾಸವನ್ನ ನಡೆಸಲಿದ್ದಾರೆ. ಈ ಎಲ್ಲಾ ಎನ್.ಸಿ.ಸಿ ಕೆಡೆಟ್‍ಗಳು ಜನವರಿ 26ರಂದು ಆಳ್ವಾಸ್‍ನಲ್ಲಿ ಜರುಗುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕ್ಯಾಂಪ್ ಕಮಾಂಡೆಂಟ್ ಕರ್ನಲ್ ಗ್ರೇಷಿಯಸ್ ಸಿಕ್ವೇರಾ, ಆಳ್ವಾಸ್ ಕಾಲೇಜಿನ ಎನ್‍ಸಿಸಿ ಅಧಿಕಾರ ಕರ್ನಲ್ ಡಾ ರಾಜೇಶ್, ಪ್ಲೈಯಿಂಗದ ಆಫೀಸರ್ ಪರ್ವೇಝ್ ಇನ್ನಿತರರು ಉಪಸ್ಥಿತರಿದ್ದರು.


Spread the love