ಸಾಮೂಹಿಕ ಅತ್ಯಾಚಾರದ ವೀಡಿಯೊ ಹಂಚಿಕೆ ಪ್ರಕರಣ ; 8 ಮಂದಿಯ ಬಂಧನ

ಸಾಮೂಹಿಕ ಅತ್ಯಾಚಾರದ ವೀಡಿಯೊ ಹಂಚಿಕೆ ಪ್ರಕರಣ ; 8 ಮಂದಿಯ ಬಂಧನ

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅದರ ಅಶ್ಲೀಲ ವೀಡಿಯೊವನ್ನು ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ ಆರೋಪದಲ್ಲಿ ಪೋಲಿಸರು ಇನ್ನೂ 8 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮುರಳಿಧರ್ (29) ಕಸಬಾ ಪುತ್ತೂರು, ಚಂದ್ರಶೇಖರ್ ಮಯ್ಯ (47), ಶ್ರೈನ್ಯಾಸ್ (20), ಪೂವಪ್ಪ ಕೆ (26), ಪವನ್ ಕುಮಾರ್ (19), ಮೊಹೀತ್ ಪಿ ಜಿ (18), ಧ್ಯಾನ್ (18) ಮತ್ತು ಅದ್ವೈತ್ ಕುಮಾರ್ ನಾಯಕ್ (19) ಎಂದು ಗುರುತಿಸಲಾಗಿದೆ.