ಸಾವರ್ಕರ್ ಅವರ ಕಾಲಿನ ಧೂಳಿಗೂ ಸಿದ್ದರಾಮಯ್ಯ ಸಮವಲ್ಲ – ಶಾಸಕ ಸುನೀಲ್ ಕುಮಾರ್

ಸಾವರ್ಕರ್ ಅವರ ಕಾಲಿನ ಧೂಳಿಗೂ ಸಿದ್ದರಾಮಯ್ಯ ಸಮವಲ್ಲ – ಶಾಸಕ ಸುನೀಲ್ ಕುಮಾರ್

ಕಾರ್ಕಳ: ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ವಿಚಾರದಲ್ಲಿ ಅಗೌರವದ ಮಾತನಾಡಿದ್ದು, ಸಿದ್ದರಾಮಯ್ಯ ಸಾವರ್ಕರ್ ಅವರ ಕಾಲಿನ ಧೂಳಿಗೂ ಸಮವಲ್ಲ ಎಂದು ಕಾರ್ಕಳ ಶಾಸಕ ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ವೀರ ಸಾವರ್ಕರ್ ಬಗ್ಗೆ ಆಡಿದ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಸಾವರ್ಕರ್ ಅವರ ಹೋರಾಟ ಇಡೀ ದೇಶಕ್ಕೆ ಮಾದರಿ ಮತ್ತು ಪ್ರೇರಣೆಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಹೇಗೂ ಮೊದಲೇ ದೇಶಾಭಿಮಾನವಿಲ್ಲ ಅಲ್ಲದೆ ದೇಶಕ್ಕೆ ಬಲಿದಾನ ಮಾಡಿದವರಿಗೂ ಗೌರವ ನೀಡುವುದಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಕೊಡುವ ಗುಣ ಅವರ ರಕ್ತದಲ್ಲೇ ಇಲ್ಲ. ತಮ್ಮ ಆಡಳಿತ ಅವಧಿಯಲ್ಲಿ ನೂರಾರು ಹೋರಾಟಗಾರರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ. ಮಾಜಿ ಮುಖ್ಯಮಂತ್ರಿ ಇತಿಹಾಸ ತಿಳಿಯದೇ ಉಡಾಫೆಯಿಂದ ಇತಿಹಾಸ ತಿಳಿಯದೆ ಮಾತನಾಡುವ ವ್ಯಕ್ತಿ ಆದ್ದರಿಂದ ಅವರು ಕೂಡಲೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಶುಕ್ರವಾರ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವೀರ್ ಸಾವರ್ಕರ್ ಅವರು ಗಾಂಧೀಜಿಯ ಹತ್ಯೆ ಸ್ಕೆಚ್ ಹಾಕಿದ್ದರು ಎಂದು ಹೇಳಿಕೆ ನೀಡಿದ್ದರು.