ಸಿಎಫ್ ಸಿ ಯುವ ವೇದಿಕೆ ವತಿಯಿಂದ ಕೋಟಿ ಚೆನ್ನಯ ಟ್ರೋಫಿ 2019 ಕ್ರಿಕೆಟ್ ಪಂದ್ಯಾಟ
ಉಡುಪಿ: ಚಾಂತಾರು ಫ್ರೆಂಡ್ಸ್ ಯುವ ವೇದಿಕೆ ಚಾಂತಾರು ಪಂಚ ಸಂಭ್ರಮದ ಪ್ರಯುಕ್ತ ಕೋಟಿ ಚೆನ್ನಯ ಟ್ರೋಫಿ 2019 ಉದ್ಘಾಟನೆಯು ಚಾಂತರಿನ ಗ್ಲೋಬಲ್ ಕ್ರೀಡಾಂಗಣದಲ್ಲಿ ನಡೆಯಿತು. ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ರಘುರಾಮ ಮಧ್ಯಸ್ಥ ಧರ್ಮದರ್ಶಿಗಳು ನೀಲಾವರ ಮಹಿಷಮರ್ದಿನಿ ದೇವಸ್ಥಾನ ಇವರು ನೆರವೇರಿಸಿದರು.

ಬಳಿಕ ಮಾತನಾಡಿದ ರಘುರಾಮ ಮಧ್ಯಸ್ಥ ಕ್ರೀಡೆಯು ಉತ್ತಮವಾದ ಜೀವನದ ಪಾಠವನ್ನು ಕಲಿಸುತ್ತದೆ ಶಿಸ್ತು ಮತ್ತು ದೈಹಿಕ ಸಾಮರ್ಥ್ಯವನ್ನು ಕ್ರೀಡೆ ಹೆಚ್ಚಿಸುತ್ತದೆ ಗ್ರಾಮೀಣ ಮಟ್ಟದಲ್ಲಿ ಇಂತಹ ಪಂದ್ಯಾಕೂಟ ನಡೆಯುವುದು ಬಹಳಷ್ಟು ಉತ್ತಮ ಬೆಳವಣಿಗೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ ಶೆಟ್ಟಿ ಬಿರ್ತಿ ಪ್ರಮೋದ್ ಶೆಟ್ಟಿ ಪುರುಷೋತ್ತಮ ಮಂಜುನಾಥ್ ನಾಯಕ್ ಸರಸ್ವತಿ ವಿ ನಾಯಕ್ ಬಿ ಎನ್ ಶಂಕರ ಪೂಜಾರಿ ಪ್ರಣವ್ ಶೆಟ್ಟಿ ತಿಮ್ಮಯ್ಯ ನಾಯಕ್ ನಿತ್ಯಾನಂದ ಪೂಜಾರಿ ರಾಮ ಪೂಜಾರಿ ಉಪಸ್ಥಿತರಿದ್ದರು ರಾಜಶೇಖರ ಉಡುಪಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು













