ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹಿರಂಗ ಪ್ರಚಾರ ಅಂತ್ಯ

Spread the love

ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹಿರಂಗ ಪ್ರಚಾರ ಅಂತ್ಯ

ಮಂಗಳೂರು : ದ.ಕ. ಜಿಲ್ಲೆಯ ಬಂಟ್ವಾಳ ಪುರಸಭೆ, ಉಳ್ಳಾಲ ಮತ್ತು ಪುತ್ತೂರು ನಗರಸಭೆ ಚುನಾವಣೆಯ ಬಹಿರಂಗ ಪ್ರಚಾರವು ಬುಧವಾರ ಆಗಸ್ಟ್ 29 ರಂದು ಮುಂಜಾನೆ 7 ಗಂಟೆಗೆ ಅಂತ್ಯಗೊಳ್ಳಲಿದೆ.

ಕರ್ನಾಟಕ ಪೌರಸಭೆ ಅಧಿನಿಯಮ ರೀತ್ಯ ಸದಾಚಾರ ಸಂಹಿತೆಯಂತೆ ಮತದಾನ ದಿನವಾದ ಅಗಸ್ಟ 31 ರಂದು ಮುಂಚಿನ 48 ಗಂಟೆಗಳಲ್ಲಿ ರಾಜಕೀಯ ಪಕ್ಷಗಳು, ಮುಖಂಡರು, ತಾರಾ ಪ್ರಚಾರಕರು ಸ್ಪರ್ಧಿಸಿರುವ ಅಭ್ಯರ್ಥಿಗಳು ಬಹಿರಂಗ ಪ್ರಚಾರ ಅಂದರೆ ಸಭೆ, ಸಮಾರಂಭ,ಮೆರವಣಿಗೆ ಟಿವಿ, ಮುದ್ರಣ, ಪ್ರಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ . ಈ ಅವಧಿಯಲ್ಲಿ ಸಂಬಂಧಿತ ವಾರ್ಡಗಳಲ್ಲಿ ಮತದಾರರಲ್ಲದ ಪ್ರಚಾರಕರು, ಏಜೆಂಟರು, ದಿ. 29 ರಂದು ಮುಂಜಾನೆ 7 ಗಂಟೆಯೊಳಗಾಗಿ ವಾರ್ಡ ವ್ಯಾಪ್ತಿಯನ್ನು ಬಿಡಬೇಕು.

ಸಂಬಂಧಿತ ಎಲ್ಲರೂ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಚುನಾವಣೆಗಳನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಸಂಪೂರ್ಣ ಸಹಕಾರ ನೀಡಲು ಜಿಲ್ಲಾಧಿಕಾರಿಗಳು ಕೋರಿದ್ದಾರೆ.


Spread the love