ಹಣದ ಸಮಸ್ಯೆ ವಿವಾಹಿತ ವ್ಯಕ್ತಿ ಆತ್ಮಹತ್ಯೆ

Spread the love

ಉಳ್ಳಾಲ: ಹಣದ ಸಮಸ್ಯೆ ವಿವಾಹಿತ ವ್ಯಕ್ತಿ ಆತ್ಮಹತ್ಯೆ

ಉಳ್ಳಾಲ: ಇಬ್ಬರು ಮಕ್ಕಳ ತಂದೆ ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಕುಂಪಲ ಹನುಮಾನ್ ನಗರ ಎಂಬಲ್ಲಿ ಸಂಭವಿಸಿದೆ. ಘಟನೆ ಬೆನ್ನಲ್ಲೇ ಪತ್ನಿಯೂ ಆತ್ಮಹತ್ಯೆ ಗೆ ಯತ್ನಿಸುತ್ತಿರುವುದನ್ನು ಸ್ಥಳೀಯರು ತಡೆಹಿಡಿದಿದ್ದಾರೆ.ಸ್ವಸಹಾಯ ಸಂಘಕ್ಕೆ ಸಂಬಂಧಿಸಿದ ಹಣ ಬಾಕಿಯಿಂದ ನೊಂದು ಆತ್ಮಹತ್ಯೆ ಗೈದಿರುವುದಾಗಿ ತಿಳಿದುಬಂದಿದೆ.

ಕುಂಪಲ ಹನುಮಾನ್ ನಗರ ನಿವಾಸಿ ಯೋಗೀಶ್(44)ಆತ್ಮಹತ್ಯೆಗೈದವರು

ಸೆಂಟ್ರಿಂಗ್ ಕೆಲಸ ನಿರ್ವಹಿತ್ತಿದ್ದ ಯೋಗೀಶ್ ಇಂದು ಬೆಳಿಗ್ಗೆ ತಮ್ಮ ಮನೆಗೆ ತಾಗಿಕೊಂಡಿರುವ ಶೌಚಾಲಯದ ಮರದ ಪಕ್ಕಾಸಿಗೆ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದಾರೆ.

ಯೋಗೀಶ್ ಸ್ವಸಹಾಯ ಗುಂಪೊಂದರ ಸದಸ್ಯರಾಗಿದ್ದು ಸಂಘದ ನಲ್ವತ್ತು ಸಾವಿರ ರೂ. ಬ್ಯಾಂಕಿಗೆ ಕಟ್ಟದೆ ಖರ್ಚು ಮಾಡಿದ್ದರಂತೆ.ಈ ಬಗ್ಗೆ ಸಂಘದ ಉಳಿದ ಸದಸ್ಯರು ಭಾನುವಾರ ಬೆಳಿಗ್ಗೆ ಮತ್ತು ಸಂಜೆ ಯೋಗೀಶ್ ಅವರ ಮನೆಗೆ ತೆರಳಿ ಹಣ ಕಟ್ಟುವಂತೆ ತಿಳಿಸಿದ್ದಾರೆ.ಇದೇ ಅವಮಾನದಲ್ಲಿ ಯೋಗೀಶ್ ಆತ್ಮಹತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ. ಉಳ್ಳಾಲ ಠಾಣಾ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.
ಯೋಗೀಶ್ ಪತ್ನಿಯೂ ಆತ್ಮಹತ್ಯೆಗೆ ಯತ್ನ;
ಯೋಗೀಶ್ ಸಾವನ್ನಪ್ಪಿದನ್ನು ಕಂಡ ಪತ್ನಿಯೂ ನೇಣು ಬಿಗಿದು ಆತ್ಮ ಹತ್ಯೆಗೈಯಲು ಮುಂದಾಗಿದ್ದಾರೆ.ಘಟನಾ ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರು ಆಕೆಯನ್ನ ತಡೆದು ಸಂತೈಸಿದ್ದಾರೆ.ಮೃತ ಯೋಗೀಶ್ ಇಬ್ಬರು ಪುಟ್ಟ ಗಂಡು ಮಕ್ಕಳು,ಪತ್ನಿ,ತಾಯಿಯನ್ನು ಅಗಲಿದ್ದಾರೆ.


Spread the love

Leave a Reply