ಹಲವು ಪ್ರಕರಣದಲ್ಲಿ ತಲೆ ಮರೆಸಿಕೊಂಡ ಆರೋಪಿಯ ಬಂಧನ

ಹಲವು ಪ್ರಕರಣದಲ್ಲಿ ತಲೆ ಮರೆಸಿಕೊಂಡ ಆರೋಪಿಯ ಬಂಧನ

ಮಂಗಳೂರು: ಮಂಗಳೂರು ನಗರದ ಮಂಗಳೂರು ಬೇರೆ ಬೇರೆ ಠಾಣೆಗಳಲ್ಲಿ ಜಾನುವಾರು ಕಳವು ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಯನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ನೇತೃತ್ವದ ರೌಡಿ ನಿಗ್ರಹ ದಳದ ಸಿಬಂದಿಯವರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಂಧಿತನನ್ನು ಕಸಬ ಬೆಂಗ್ರೆ ನಿವಾಸಿ ಅಬ್ದುಲ ಕಬೀರ್ @ ಪಾರಿವಾಳ ಕಬೀರ್ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ ಮೇಲೆ ಸುಮಾರು ಹದಿನಾಲ್ಕು ಪ್ರಕರಣಗಳು ದಾಖಲಾಗಿದ್ದು ಮಂಗಳೂರು ನಗರದ ಉಳ್ಳಾಲ, ಕಂಕನಾಡಿ, ಬಜ್ಪೆ ಠಾಣೆ, ಪಣಂಬೂರು ಠಾಣೆ, ಮಂಗಳೂರು ದಕ್ಷಿಣ ಠಾಣೆಗಳಲ್ಲಿ ಜಾನುವಾರು ಕಳವು ಪ್ರಕರಣ ಮಂಗಳೂರು ಉತ್ತರ, ಉಪ್ಪಿನಂಗಡಿ ಠಾಣೆ, ಮಂಗಳೂರು ಪೂರ್ವ ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿರುತ್ತದೆ. ಮಂಗಳೂರು ನಗರದ ಪಾಂಡೇಶ್ವರ ದೇವಸ್ಥಾನದ ದನ ಕಳವು ಪ್ರಕರಣದಲ್ಲಿ ಈತನು ಭಾಗಿಯಾಗಿದ್ದ. ಮಂಗಳೂರು ಉತ್ತರ ಠಾಣೆ, ಮಂಗಳೂರು ಪೂರ್ವ ಠಾಣೆಗಳಲ್ಲಿ ಕಳವು ಪ್ರಕರಣಗಳಲ್ಲಿ ದಸ್ತಗಿರಿಯಾದೆ ತಲೆ ಮರೆಸಿಕೊಂಡಿದ್ದನು. ಈತನ ಮೇಲೆ ಉಳ್ಳಾಲ ಠಾಣೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನ್ಯಾಯಲಯವು ದಸ್ತಗಿರಿ ವಾರಂಟ್ ಹೊರಡಿಸಿದೆ.

ಎಸಿಪಿ ರಾಮರಾವ್ ನೇತೃತ್ವದ ರೌಡಿ ನಿಗ್ರಹದಳದ ಸಿಬಂದಿ ಮಂಗಳೂರು ಕಸಬಾ ಬೆಂಗ್ರೆ ಬಳಿಯಿಂದ ವಶಕ್ಕೆ ಪಡೆದು ಉಳ್ಳಾಲ ಠಾಣೆಗೆ ಹಸ್ತಾಂತರಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.