ಅಂತರಾಜ್ಯ ರೌಡಿ ನಪ್ಪಾಟೆ ರಫೀಕ್ ಬಂಧನ

Spread the love

ಅಂತರಾಜ್ಯ ರೌಡಿ ನಪ್ಪಾಟೆ ರಫೀಕ್ ಬಂಧನ

ಮಂಗಳೂರು : ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹದಳದ ತಂಡದವರು ಅಂತರಾಜ್ಯ ರೌಡಿಯನ್ನು ದಸ್ತಗಿರಿ ಮಾಡುವಲ್ಲಿ ಯಶ್ವಸ್ವಿಯಾಗಿರುತ್ತಾರೆ.

ಬಂಧಿತನ್ನು ಕಾಸರಗೊಡು ಜಿಲ್ಲೆಯ ಉಪ್ಪಳ ನಿವಾಸಿ ಮಹಮ್ಮದ್ ರಪೀಕ್ @ನಪ್ಪಾಟೆ ರಪೀಕ್ (29) ಎಂದು ಗುರುತಿಸಲಾಗಿದೆ

ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ಸಹಾಯಕ ಪೊಲೀಸ್ ಆಯುಕ್ತರಿಗೆ ಬಂದ  ಖಚಿತ ಮಾಹಿತಿಯ ಮೇರೆಗೆ ಈ ಆರೋಪಿಯನ್ನು ಕೆಸಿ ರೋಡ್ ಎಂಬಲ್ಲಿ ದಸ್ತಗಿರಿ ಮಾಡಿರುವುದಾಗಿದೆ.

ಈತನ ಮೇಲೆ ಸೊಮೇಶ್ವರ ಗ್ರಾಮದ ಕುತ್ತಾರು ಪದವಿನ ಸಿಲಿಕೋನಿಯ ಅಪಾರ್ಟಮೆಂಟಿನ ಪ್ಲಾಟಿಗೆ ತನ್ನ ಸಹಚರರೊಂದಿಗೆ ಅಕ್ರಮ ಪ್ರವೇಶಮಾಡಿ ಮಹಿಳೆಗೆ ಅವ್ಯಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿರುತ್ತದೆ.

ಮಹಮ್ಮದ್ ರಪೀಕ್ @ ನಪ್ಪಟೆ ರಫೀಕ್ ಕುಖ್ಯಾತ ರೌಡಿಯಾಗಿದ್ದು ಈತನ ವಿರುದ್ದ ಮೂರು ಕೊಲೆ ಪ್ರಕರಣ ಹಾಗು ಕೊಲೆ ಯತ್ನ, ಕಿಡ್ನಾಪ್ ಸೇರಿದಂತೆ ಒಟ್ಟು 13 ಪ್ರಕರಣಗಳು ಧಾಖಲಾಗಿರುತ್ತದೆ.ಈತನ ವಿರಿದ್ದ ಪುತ್ತೂರು ನಗರ ಹಾಗೊ ಪುತ್ತೂರು ಗ್ರಾಮಂತರ ಠಾಣೆಯಲ್ಲಿ ದಸ್ತಗಿರಿ ವಾರೆಂಟ್ ಬಾಕಿ ಇದ್ದು ನ್ಯಾಯಲಯಕ್ಕೆ ಹಾಜರಾಗದೇ ತಲೆಮರಸಿಕೊಂಡಿರುತ್ತಾನೆ,

 ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಎ.ಸಿ.ಪಿ. ಮತ್ತು ಉಳ್ಳಾಲ ಠಾಣಾ ಪಿ.ಐ.  ಹಾಗೂ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಬಾಗವಹಿಸಿರುತ್ತಾರೆ.


Spread the love