ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

Spread the love

ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಗಳೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಇಕೊನಾಮಿಕ್ & ನಾರ್ಕೋಟಿಕ್ ಕ್ರೈಂ ಠಾಣಾ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತನ್ನು ಅನೀಷ್ ಅಶ್ರಫ್ ಎಂದು ಗುರುತಿಸಲಾಗಿದೆ. ಶುಕ್ರವಾರ ಮಂಗಳೂರು ನಗರದ ಕುದ್ರೋಳಿ ಕರ್ನಲ್ ಗಾರ್ಡನ್ ನ ಕೆನರಾ ಐಸ್ & ಕೋಲ್ಡ್ ಸ್ಟೋರೆಜ್ ಬಳಿಗೆ ಇಕೊನಾಮಿಕ್ & ನಾರ್ಕೋಟಿಕ್ ಕ್ರೈಂ ಠಾಣಾ ಪೋಲಿಸ್ ನಿರೀಕ್ಷಕರು ಸಿಬಂದಿಗಳೊಂದಿಗೆ ಧಾಳಿ ನಡೆಸಿ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಲಕೋಟೆಯಲ್ಲಿ ಗಾಂಜಾ ತುಂಬಿಸಿ ಮಾರಾಟ ಮಾಡುತ್ತಿದ್ದ ವೇಳೆಯಲ್ಲಿ ಆರೋಪಿಯನ್ನು ಬಂಧಿಸಿ ಆತನ ಕೈಯಲ್ಲಿದ್ದ 6300 ರೂಪಾಯಿ ಬೆಲೆಯ 270 ಗ್ರಾಂ ಗಾಂಜಾವನ್ನು ಮತ್ತು ಗಾಂಜಾ ಮಾರಾಟ ಮಾಡಿದ ನಗದು ಹಣ ರೂಪಾಯಿ 700ನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ನಗರ ಪೋಲಿಸ್ ಆಯುಕ್ತಾರದ ಟಿ ಸುರೇಶ್ ಆದೇಶದಂತೆ ಹನುಮಂತರಾಯ ಡಿಸಿಪಿ ಕಾನೂನು ಸುವ್ಯವಸ್ಥೆ, ಉಮಾಪ್ರಶಾಂತ್ ಡಿಸಿಪಿ ಕ್ರೈ ಮತ್ತು ಸಂಚಾರರವರ ನಿರ್ದೇಶನ ಹಾಗೂ ವೆಲೆಂಟೈನ್ ಡಿಸೋಜಾ ಎಸಿಪಿ ಸಿಸಿಆರ್ ಬಿರವರ ಮಾರ್ಗದರ್ಶನದಲ್ಲಿ ಪೋಲಿಸ್ ನಿರೀಕ್ಷಕರಾದ ಮಹಮ್ಮದ್ ಷರೀಪ್, ಸಿಬಂಧಿಗಳಾದ ಜಗದೀಶ್, ಶಾಜು ನಾಯ್, ಕಿಶೋರ್ ಪೂಜಾರಿ ಮತ್ತು ಭಾಸ್ಕರ್ ರವರು ಭಾಗವಹಿಸಿದ್ದಾರೆ.


Spread the love