ಅಕ್ರಮ ಮರಳು ಸಾಗಾಟ ದಂಧೆ ನಡೆಯುತ್ತಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ – ಪೊಲೀಸ್ ಆಯುಕ್ತ ವಿಕಾಸ್ ಕುಮಾರ್

Spread the love

ಅಕ್ರಮ ಮರಳು ಸಾಗಾಟ ದಂಧೆ ನಡೆಯುತ್ತಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ – ಪೊಲೀಸ್ ಆಯುಕ್ತ ವಿಕಾಸ್ ಕುಮಾರ್

ಮಂಗಳೂರು: 2020ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಮೊಲೀಸ್ ಠಾಣಾ ಸರಹದ್ದಿನಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗಳಿಗೆ ದಾಳಿ ಮಾಡಿ ಒಟ್ಟು 13 ಪ್ರಕರಣಗಳನ್ನು ದಾಖಲಿಸಿ 10 ಆರೋಪಿಗಳನ್ನು ದಸ್ತಗಿರಿ ಮಾಡಿ 14 ಮರಳು ಸಾಗಾಟ ವಾಹನ ಮತ್ತು 2 ಡಬ್ಬಿಂಗ್ ಮಿಷನ್ ಗಳನ್ನು ಸ್ವಾಧೀನಪಡಿಸಿಕೊಂಡು ರೂ 7128500 /- ವಶಪಡಿಸಿಕೊಳ್ಳಲಾಗಿದೆ.

2020ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಮಾದಕ ದ್ರವ್ಯಗಳ ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 10 ಆರೋಪಿಗಳನ್ನು ದಸ್ತಗಿರಿ ಮಾಡಿ ರೂ. 1480000 /- ಮಾಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು,

ಸಾರ್ವಜನಿಕರಿಗೆ ಮಾಹಿತಿ
ಮಾದಕ ವಸ್ತುಗಳ ಮಾರಾಟ ಅಥವಾ ಸಾಗಾಟ ದಂಧೆ ಮತ್ತು ಅಕ್ರಮ ಮರಳು ಸಾಗಾಟ ದಂಧೆಯ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಕೋರಿದೆ, ಈ ಆಕ್ರಮಗಳ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವವರ ಬಗ್ಗೆ ಮಾಹಿತಿಯನ್ನು ಅರುನಾಂಗ್ಸು ಗಿರಿ, ಐ.ಪಿ.ಎಸ್, ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ. [ಮೊಬೈಲ್ ನಂ: 9480802304]: ಶ್ರೀ ವಿನಯ ಫ, ಗಾಂವ್ಕರ್, ಡಿ.ಸಿ.ಪಿ. ಅಪರಾಧ ಮತ್ತು ಸಂಚಾರ, ಮೊಬೈಲ್ ನಂ: 9480802305 ಮತ್ತು ನಗರ ಪೊಲೀಸ್ ಕಂಟ್ರೋಲ್ ರೂಂ ಮೊಬೈಲ್ ನಂ: 9480802321 ದೂರವಾಣಿ ಸಂ: 0824-2220800 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ವಿಕಾಸ್ ಸಿ.ಪಿ.ಎಸ. ಅವರು ಸಾರ್ವಜನಿಕರನ್ನು ಕೋರಿರುತ್ತಾರೆ:


Spread the love