ಅಡ್ಯಾರು ಬಳಿ ಅಕ್ರಮ ಮರಳು ದಾಸ್ತಾನು, 18 ಲಕ್ಷ ರೂ ಸೊತ್ತು ವಶ

Spread the love

ಅಡ್ಯಾರು ಬಳಿ ಅಕ್ರಮ ಮರಳು ದಾಸ್ತಾನು, 18 ಲಕ್ಷ ರೂ ಸೊತ್ತು ವಶ

ಮಂಗಳೂರು: ಅಡ್ಯಾರ್ ಪರಿಸರಂದಲ್ಲಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡಿದ ಸ್ಥಳಕ್ಕೆ ಪೋಲಿಸರು ಧಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಡ್ಯಾರು ಗ್ರಾಮದ ಅಡ್ಯಾರು ಕಟ್ಟೆ ಸಹ್ಯಾದ್ರಿ ಕಾಲೇಜು ಹಿಂದುಗಡೆ ನೇತ್ರಾವತಿ ನದಿ ತೀರದ ಸಿ ಆರ್ ಜೆಡ್ ಪ್ರದೇಶದಲ್ಲಿ ನದಿಯಲ್ಲಿ ಸುಮಾರು 18 ದೋಣಿಗಳಲ್ಲಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆದು ದೋಣಿಯಲ್ಲಿ ತುಂಬಿ ನದಿಯ ದಡದಲ್ಲಿ ಅಲ್ಲಲ್ಲಿ ಸುಮಾರು 20 ರಿಂದ 25 ಲೋಟು ಮರಳನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವುದು ಕಂಡು ಬಂದಿದ್ದು, ಈ ದಾಳಿ ನಡೆಸುವಾಗ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಪ್ರದೇಶದಲ್ಲಿದ್ದ ವ್ಯಕ್ತಿಗಳು ನದಿ ದಡದಿಂದ ಒಡಿ ಪರಾರಿಯಾಗಿರುತ್ತಾರೆ.

ಸದ್ರಿ ಸ್ಥಳದಲ್ಲಿ ಇದ್ದ ಸುಮಾರು 20 ರಿಂದ 25 ಲೋಡು ಅಕ್ರಮ ದಾಸ್ತಾನು ಮಾಡಿದ ಮರಳು ಹಾಗೂ ನದಿಯಿಂದ ಮರಳನ್ನು ತೆಗೆಯಲು ಉಪಯೋಗಿಸಿದ 17 ದೋಣಿಗಳನ್ನು ಮುಂದಿನ ಕ್ರಮಕ್ಕಾಗಿ ಉಪನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳೂರು ಇವರಿಗೆ ಹಸ್ತಾಂತರಿಸಲಾಗಿದೆ. ವಶಪಡಿಸಿಕೊಂಡ ಅಕ್ರಮ ದಾಸ್ತಾನು ಮರಳಿನ ಅಂದಾಜು ಮೌಲ್ಯ ಸುಮಾರು ರೂ 1 ಲಕ್ಷ ಮತ್ತು 17 ದೋಣಿಗಳ ಮೌಲ್ಯ 17 ಲಕ್ಷ ರೂ ಒಟ್ಟು ರೂ18 ಲಕ್ಷ ರೂಪಾಯಿ ಆಗಬಹುದು/


Spread the love