ಅತ್ತೂರಿನಲ್ಲಿ 15 ಅಡಿ ಎತ್ತರದ ಸಂತ ಲಾರೆನ್ಸ್ ಪ್ರತಿಮೆ ಅನಾವರಣ; ನೊವೆನಾ ಪ್ರಾರ್ಥನೆಗೆ ಚಾಲನೆ

Spread the love

ಅತ್ತೂರಿನಲ್ಲಿ 15 ಅಡಿ ಎತ್ತರದ ಸಂತ ಲಾರೆನ್ಸ್ ಪ್ರತಿಮೆ ಅನಾವರಣ; ನೊವೆನಾ ಪ್ರಾರ್ಥನೆಗೆ ಚಾಲನೆ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ 15 ಅಡಿ ಎತ್ತರದ ಸಂತ ಲಾರೆನ್ಸ್ ಶಿಲಾವಿಗ್ರಹವನ್ನು ಜ. 19ರಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೋ ಅನಾವರಣಗೊಳಿಸಿದರು.

ಸಹಾಯಕ ಧರ್ಮಗುರು ವಂ| ರೋಯ್ ಲೋಬೋ, ಅತ್ತೂರು ಬಸಿಲಿಕಾದ ನಿರ್ದೇಶಕ ವಂ| ಜಾರ್ಜ್ ಡಿ’ಸೊಜಾ, ಉಡುಪಿಯ ಧರ್ಮಗುರು ವಂ| ಸ್ಟೀಫನ್ ಡಿ’ಸೋಜಾ, ಜೋನ್ ಗ್ಲ್ಯಾಡಿಸ್ ಡಿ’ಸಿಲ್ವಾ ಉಪಸ್ಥಿತರಿದ್ದರು.

32 ಅಡಿಯ ಸ್ತಂಭ ಹಾಗೂ 15 ಅಡಿ ಎತ್ತರವಿರುವ ಈ ಏಕಶಿಲಾ ಪ್ರತಿಮೆಯನ್ನು ಕುಂಟಲ್ಪಾಡಿ ದಿ| ಲೀನಾ ಡಿ’ಸಿಲ್ವಾ ಅವರ ಸ್ಮರಣಾರ್ಥ ಅವರ ಕುಟುಂಬಸ್ಥರು ನಿರ್ಮಿಸಿದ್ದರು.

ತಾಲ್ಲೂಕಿನ ಭಾವೈಕ್ಯ ಕ್ಷೇತ್ರ ಅತ್ತೂರು ಸೇಂಟ್ ಲಾರೆನ್ಸ್ ಬೆಸಿಲಿಕಾದಲ್ಲಿ ಭಾನುವಾರ ವಾರ್ಷಿಕ ಮಹೋತ್ಸವ ಸಾಂತಮಾರಿಯ ನವದಿನಗಳ ಪ್ರಾರ್ಥನಾ ವಿಧಿಗೆ ಭಾನುವಾರ ಶಾಸಕ ವಿ.ಸುನಿಲ್ ಕುಮಾರ್ ಚಾಲನೆ ನೀಡಿದರು.
ರಾಜ್ಯ ಸರ್ಕಾರದ ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಾಯ್ಲಸ್ ಡಿಸೋಜ, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಷ್ಮಾಉದಯ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಬಿತಾ ಪೂಜಾರ್ತಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶುಭಹಾರೈಸಿದರು.

ಚರ್ಚಿನ ಧರ್ಮಗುರು ಜಾರ್ಜ ಡಿಸೋಜ ಪ್ರಾರ್ಥನಾ ವಿಧಿ ನೆರವೇರಿಸಿದರು. ಸಹಾಯಕ ಧರ್ಮಗುರು ರೋಯ್ ಲೋಬೋ ಸ್ವಾಗತಿಸಿದರು. ಪಾಲನಾ ಮಂಡಳಿ ಮೆಲ್ವಿನ್ ಕ್ಯಾಸ್ತಲಿನೋ ನಿರೂಪಿಸಿದರು. ಕಾರ್ಯದರ್ಶಿ ಲೀನಾ ಡಿಸಿಲ್ವ ವಂದಿಸಿದರು.

ಎಪಿಎಂಸಿ ಅಧ್ಯಕ್ಷ ನಕ್ರೆ ಅಂತೋನಿ ಡಿಸೋಜ, ಉಪಾಧ್ಯಕ್ಷ ಜಾನ್ ಡಿಸಿಲ್ವ, ಪಾಲನಾ ಮಂಡಳಿಯ ಸದಸ್ಯರು, ಸಂತೋಷ ಡಿಸಿಲ್ವ ಉಪಸ್ಥಿತರಿದ್ದರು.


Spread the love