ಅತ್ಯಾಚಾರ ಆರೋಪಿಗಳನ್ನು ಎನ್ ಕೌಂಟರ್ ಮಾಡಿದ ತೆಲಂಗಾಣ ಪೊಲೀಸರ ಇತರ ರಾಜ್ಯಗಳಿಗೆ ಮಾದರಿ – ರೋಶನಿ ಒಲಿವೇರ್

Spread the love

ಅತ್ಯಾಚಾರ ಆರೋಪಿಗಳನ್ನು ಎನ್ ಕೌಂಟರ್ ಮಾಡಿದ ತೆಲಂಗಾಣ ಪೊಲೀಸರ ಇತರ ರಾಜ್ಯಗಳಿಗೆ ಮಾದರಿ – ರೋಶನಿ ಒಲಿವೇರ್

ಉಡುಪಿ: ತೆಲಂಗಾಣದ ಸುಮಾರು 27 ವರ್ಷದ ಪಶುವೈದ್ಯೆಯ ಮೇಲಿನ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಿರುವ ತೆಲಂಗಾಣ ಪೊಲೀಸರ ಕ್ರಮ ಅಭಿನಂದನೀಯ ಹಾಗೆಯೇ ಈ ಪ್ರಕರಣ ಉಳಿದ ರಾಜ್ಯಗಳ ಪೊಲೀಸರಿಗೆ ಮಾದರಿಯಾಗಲಿ ಎಂದು ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹೇಳಿದೆ.

ಅದೇ ರೀತಿಯಲ್ಲಿ ಸರಣಿ ಹತ್ಯಾ ಯತ್ನಗಳಿಂದ ಪಾರಾಗಿದ್ದ ಉತ್ತರ ಪ್ರದೇಶದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಮೇಲೆ ಗುರುವಾರ ಇಡೀ ದೇಶವೇ ನಾಚಿಸುವಂತೆ ಭೀಕರ ಕೊಲೆ ಯತ್ನ ನಡೆದಿದೆ. ಈ ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಐವರು ಆರೋಪಿಗಳು ಸಂತ್ರಸ್ತೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಯಿಸಲು ಯತ್ನಿಸಿದ್ದು ಪಾತಕ ಕೃತ್ಯದಲ್ಲಿ ಸಂತ್ರಸ್ಥೆಗೆ ಶೇ90% ಸುಟ್ಟ ಗಾಯಗಳಾಗಿವೆ.

ತೆಲಂಗಾಣ ಪಶುವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ನಂತರ ದೇಶದಾದ್ಯಂತ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕೆಂಬ ಆಗ್ರಹದ ಮಧ್ಯೆಯೇ ನಡೆದ ಈ ದಾರುಣ ಪೈಶಾಚಿಕ ಕೃತ್ಯವನ್ನು ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ.

ಈಗಿನ ಪರಿಸ್ಥಿತಿ ಅವಲೋಕಿಸಿದರೆ ಮಹಾತ್ಮಾಗಾಂಧಿ ಕಂಡ ಮಹಿಳೆಯರ ಬಗೆಗಿನ ರಾಮರಾಜ್ಯದ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ನಮ್ಮಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿ ಇದೆ. ಈ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ತ್ವರಿತಗತಿಯಲ್ಲಿ ವಿಚಾರಣೆಗೆ ಒಳಪಡಿಸಿ ಗಲ್ಲು ಶಿಕ್ಷೆಯನ್ನು ವಿಧಿಸುವಂತೆ ರಾಷ್ಟ್ರಪತಿ ಹಾಗೂ ಪ್ರಧಾನಿಯವರನ್ನು ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವೇರಾ ಆಗ್ರಹಿಸಿದ್ದಾರೆ.


Spread the love