ಅತ್ಯಾಚಾರ ಸಂತ್ರಸ್ತೆ ಮಹಿಳೆಯ ಮೇಲೆ ಆ್ಯಸಿಡ್ ದಾಳಿ: ನ್ಯಾಷನಲ್ ವಿಮೆನ್ಸ್ ಫ್ರಂಟ್ ಖಂಡನೆ

Spread the love

ಅತ್ಯಾಚಾರ ಸಂತ್ರಸ್ತೆ ಮಹಿಳೆಯ ಮೇಲೆ ಆ್ಯಸಿಡ್ ದಾಳಿ: ನ್ಯಾಷನಲ್ ವಿಮೆನ್ಸ್ ಫ್ರಂಟ್ ಖಂಡನೆ

ಮಂಗಳೂರು: ಆ್ಯಸಿಡ್ ದಾಳಿಯಿಂದ ಮಹಿಳೆಯರನ್ನು ರಕ್ಷಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಎನ್‍ಡಬ್ಲೂಎಫ್ ಅಧ್ಯಕ್ಷೆ ಎ.ಎಸ್.ಝೈನಬಾರವರು ಕರೆ ನೀಡಿದ್ದಾರೆ.

ಸಾಮೂಹಿಕ ಅತ್ಯಾಚಾರ ಮತ್ತು ಆ್ಯಸಿಡ್ ದಾಳಿಯ ಸಂತ್ರಸ್ತ ಮಹಿಳೆಯ ಮೇಲೆ ಮತ್ತೆ ಆ್ಯಸಿಡ್ ದಾಳಿ ಮಾಡಿದ ಹೀನ ಕತ್ಯವನ್ನು ಅವರು ಖಂಡಿಸಿದ್ದಾರೆ. ವರದಿಯ ಪ್ರಕಾರ, ಇದು ಆಕೆಯ ಮೇಲೆ ಐದನೇ ಬಾರಿ ನಡೆದ ದಾಳಿಯಾಗಿದ್ದು, ಇಂತಹ ಘಟನೆಯು ನಮ್ಮಂತಹ ಪ್ರಜಾಪ್ರಭುತ್ವ ಮತ್ತು ಸಭ್ಯ ನಾಗರಿಕ ಸಮಾಜಕ್ಕೆ ಬಹಳ ದೊಡ್ಡ ಅವಮಾನವಾಗಿದೆ. ಅಲ್ಲದೆ ಪಿತಪ್ರಧಾನ ಸಮಾಜದಲ್ಲಿ ಈ ದಾಳಿಯನ್ನು ಸಮಸ್ಯೆಯೆಂದು ಪರಿಗಣಿಸಲಾಗದಿರುವುದು ದುರದಷ್ಟಕರ ಸಂಗತಿಯಾಗಿದೆ. ತಮ್ಮ ಸ್ವರಕ್ಷಣೆಗಾಗಿ ಎದ್ದು ನಿಲ್ಲುವ ಮಹಿಳೆಯರನ್ನು ಬೆದರಿಕೆ ಎಂದು ಭಾವಿಸುವ ಮತ್ತು ಅವರು ಹೀಗೆ ಮಾಡುವುದಕ್ಕಾಗಿ ಅವರಲ್ಲಿ ಪ್ರತೀಕಾರ ತೀರಿಸುವ ಒಂದು ವಿಭಾಗವು ನಮ್ಮ ಸಮಾಜದಲ್ಲಿದೆ. ಸಂತ್ರಸ್ತರು ಮಹಿಳೆಯರಾಗಿದ್ದರೆ, ಅದರಲ್ಲೂ ಬಡ ಮತ್ತು ಕೆಳವರ್ಗದಿಂದ ಬಂದ ಮಹಿಳೆಯರಾಗಿದ್ದರೆ ಈ ಅಪರಾಧಿಗಳು ಯಾವಾಗಲೂ ತಮ್ಮ ಅಪರಾಧ ಕತ್ಯಗಳಲ್ಲಿ ಭಾಗಿಯಾಗುವ ಸನ್ನಿವೇಶ ನಮ್ಮ ದೇಶದಲ್ಲಿದೆ.

ಇಂತಹ ಅಪರಾಧಗಳ ಪುನರಾವರ್ತಿತ ಘಟನೆಗಳ ಕುರಿತು ಅಧಿಕಾರಿಗಳು ನೀಡುವ ಸಮಾಧಾನ ಚಿತ್ತದ ಪ್ರತಿಕ್ರಿಯೆಯು ಈ ಅಪರಾಧಿಗಳಿಗೆ ಉತ್ತೇಜನ ನೀಡುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈ ದಾಳಿಯ ಸಂತ್ರಸ್ತ ಮಹಿಳೆಗೆ ಶೀಘ್ರ ನ್ಯಾಯ ಒದಗಿಸಬೇಕು ಹಾಗೂ ಅಪರಾಧಿಗಳ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿ ಅವರನ್ನು ಜೈಲಿನ ಕಂಬಿಗಳ ಹಿಂದೆ ತಳ್ಳಿ ದೇಶದಲ್ಲಿ ಮಹಿಳೆಯರಿಗೆ ಸುರಕ್ಷಿತವಾದ ವಾತಾವರಣವನ್ನು ಸಷ್ಟಿಸಬೇಕೆಂದು ನಾವು ಆಗ್ರಹಿಸುತ್ತೇವೆ


Spread the love