ಲಾಕ್ ಡೌನ್ ತೆರವು ಹಿನ್ನಲೆ ; ಜಿಲ್ಲೆಯಲ್ಲಿ ಸೀಲ್ಡೌನ್ ತೆರವು, ಬುಧವಾರದಿಂದ ಬಸ್ ಸಂಚಾರ ಆರಂಭ – ಜಿಲ್ಲಾಧಿಕಾರಿ ಜಿ ಜಗದೀಶ್

Spread the love

ಲಾಕ್ ಡೌನ್ ತೆರವು ಹಿನ್ನಲೆ ; ಜಿಲ್ಲೆಯಲ್ಲಿ ಸೀಲ್ಡೌನ್ ತೆರವು, ಬುಧವಾರದಿಂದ ಬಸ್ ಸಂಚಾರ ಆರಂಭ – ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ : ಲಾಕ್ಡೌನ್ ಸಂಬಂಧ ಮುಖ್ಯಮಂತ್ರಿಗಳ ಸೂಚನೆಯ ಹಿನ್ನೆಲೆಯಲ್ಲಿ ಜು.22ರಿಂದ ಉಡುಪಿ ಜಿಲ್ಲೆಯ ಗಡಿಗಳಲ್ಲಿನ ಸೀಲ್ಡೌನ್ ರದ್ದು ಪಡಿಸಲಾಗಿದ್ದು ಬಸ್ ಸಂಚಾರವನ್ನು ಮತ್ತೆ ಪುನಃ ಆರಂಭಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.

ಈ ಬಗ್ಗೆ ತಮ್ಮ ವೀಡಿಯೋ ಸಂದೇಶದಲ್ಲಿ ಮಾಹಿತಿ ನೀಡಿರುವ ಅವರು ಕೆಎಸ್ಆರ್ಟಿಸಿ ಬಸ್ಗಳು ನಾಳೆಯಿಂದ ಜಿಲ್ಲೆಯಾದ್ಯಂತ ಸಂಚಾರ ಆರಂಭಿಸಲಿದ್ದು, ಖಾಸಗಿ ಬಸ್ ಮಾಲಕರ ಸಭೆಯನ್ನು ನಾಳೆ ಕರೆಯಲಾಗುತ್ತದೆ. ಒಂದು ವೇಳೆ ಖಾಸಗಿಯವರು ಬಸ್ ಓಡಿಸಲು ನಿರಾಕರಿಸಿದರೆ ಆ ಎಲ್ಲ ಮಾರ್ಗಗಳಲ್ಲಿ ಸರಕಾರಿ ಬಸ್ಗಳನ್ನು ಓಡಿಸಲಾಗುವುದು. ಎಲ್ಲ ಬಸ್ ಗಳಲ್ಲೂ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರ ಅನಾವಶ್ಯಕ ಓಡಾಟವನ್ನು ತಡೆಯುವ ಉದ್ದೇಶದಿಂದ ಜಿಲ್ಲೆಯ ಗಡಿಗಳಲ್ಲಿ ಚೆಕ್ ಪೋಸ್ಟ್ಗಳು ಮುಂದುವರೆಸಲಾಗುವುದು. ಆದುದರಿಂದ ತುರ್ತು ಅಗತ್ಯ ಇರುವವರು ಮಾತ್ರ ಜಿಲ್ಲೆಗೆ ಬರಬಹುದು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.


Spread the love