ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧನ

Spread the love

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಯ ಮೇಲೆ ಆತ್ಮರಕ್ಷಣೆಗಾಗಿ ಪೊಲೀಸರಿಂದ ಗುಂಡಿನ ದಾಳಿ ನಡೆಸಿ ಬಂಧಿಸಿದ ಘಟನೆ , ಶ್ರೀರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿ  ದಿನೇಶ್

ಬಂಧಿತ ಆರೋಪಿಯನ್ನು ದಿನೇಶ್ (32) ಎಂದು ಗುರುತಿಸಲಾಗಿದೆ.

ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು 6-7 ವರ್ಷದಿಂದ ಚಿಕ್ಕ ಮಕ್ಕಳ ಆಟದ ಸಾಮಾನು ಮಾರಾಟ ಮಾಡುವ ವ್ಯಾಪಾರ ಮಾಡಿಕೊಂಡು ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದ ಹಿಂಭಾಗದ ಗೇಟ್ ಬಳಿ ವಾಸವಾಗಿದ್ದು, ದಿನಾಂಕ 10-10-2020 ರಂದು ರಾತ್ರಿ 8-30 ಗಂಟೆಯಲ್ಲಿ ಎಂದಿನಂತೆ ವ್ಯಾಪಾರ ಮುಗಿಸಿಕೊಂಡು ಹೊರಾದಿ, ತನ್ನ ಪತ್ನಿ ಮತ್ತು 4 ವರ್ಷದ ಮಗಳೊಂದಿಗೆ ಊಟ ಮುಗಿಸಿಕೊಂಡು ಮಳೆ ಬೀಳುತ್ತಿದ್ದರಿಂದ ಎಲ್ಲರನ್ನೂ ಕರೆದುಕೊಂಡು, ಸಿಟಿ ರೈಲ್ವೆ ನಿಲ್ದಾಣದ ಟಿಕೆಟ್ ಕಾಯ್ದಿರಿಸುವ ಜಾಗದಲ್ಲಿ ಮಲಗಿದ್ದು, ಮಧ್ಯರಾತ್ರಿ ಆತನ ಮಗು ಕಾಣೆಯಾಗಿದ್ದು ಎಷ್ಟೇ ಹುಡುಕಾಡಿದರೂ ಪತ್ತೆಯಾಗಿಲ್ಲ. ಅಕ್ಟೋಬರ್ 11 ರಂದು ಬೆಳಿಗ್ಗೆ ಆತನ ಮಗಳನ್ನು ಕೆ ಸಿ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿರುವ ವಿಷಯ ತಿಳೀದು ನೋಡಿದಾಗ ಅದು ಆತನ 4 ವರ್ಷದ ಮಗಳು ಎಂದು ಗೊತ್ತಾಗಿದ್ದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು ಆರೋಪಿಯನ್ನು ಬಂಧಿಸುವಂತೆ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸುನೀಲ್ ಎಸ್ ನಾಯ್ಕ್ ಪೊಲೀಸ್ ಇನ್ಸ್ಪೆಕ್ಟರ್, ಶ್ರೀರಾಮಪುರ ಪೊಲೀಸ್ ಠಾಣೆ

ಈ ಪ್ರಕರಣದಲ್ಲಿ  ಸುನೀಲ್ ಎಸ್ ನಾಯ್ಕ್ ಪೊಲೀಸ್ ಇನ್ಸ್ಪೆಕ್ಟರ್, ಶ್ರೀರಾಮಪುರ ಪೊಲೀಸ್ ಠಾಣೆ ರವರು ತನಿಖೆ ಕೈಗೊಂಡು, ತಮ್ಮ ಸಿಬ್ಬಂದಿಯೊಂದಿಗೆ ಆರೋಪಿಯ ಪತ್ತೆ ಕಾರ್ಯದಲ್ಲಿದ್ದಾಗ  ಆರೋಪಿಯು ಓಕಳೀಪುರಂ, ಆರ್.ಆರ್.ಕೆ ಜಂಕ್ಷನ್ ಬಳಿ ಇರುವುದಾಗಿ ಮಾಹಿತಿ ಮೇರೆಗೆ ಸುನೀಲ್ ಎಸ್ ನಾಯ್ಕ್ ಮತ್ತು ವೆಂಕಟಪ್ಪ ಎಎಸ್ ಐ ಹಾಗೂ ಸಿಬಂದಿಗಳು ಆರೋಪಿಯನ್ನು ಬಂಧಿಸಲು ತೆರಳಿದ ವೇಳೆ ಆರೋಪಿಯು ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ  ವೆಂಕಟಪ್ಪ, ಎಎಸ್ಐ ರವರ ಮೇಲೆ ಚಾಕುವಿನಿಂದ ಏಕಾಏಕಿ ಹಲ್ಲೆ ಮಾಡಿದ್ದು, ಸುನೀಲ್ ನಾಯ್ಕ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ , ಆರೋಪಿಯನ್ನು ಶರಣಾಗುವಂತೆ ಸೂಚಿಸಿದ್ದರೂ ಕೂಡ ಆರೋಪಿಯು ಪೊಲೀಸರ ಮೇಲೆ ಹಲ್ಲೆಯನ್ನು ಮುಂದುವರಿಸಿದಾಗ ಸುನೀಲ್ ಎಸ್ ನಾಯ್ಕ್ ಅವರು, ತಮ್ಮ ಮತ್ತು ತಮ್ಮ ಸಿಬ್ಬಂದಿಯವರ ಆತ್ಮರಕ್ಷಣೆಗಾಗಿ ಆರೋಪಿ ದಿನೇಶ್, ಮೊಣಕಾಲಿನ ಕೆಳಗೆ ಬಲಗಾಲಿಗೆ ಗುಂಡಿನ ದಾಳಿ ನಡೆಸುತ್ತಾರೆ. ತಕ್ಷಣ ಗಾಯಗೊಂಡ ಆರೋಪಿ ದಿನೇಶ್ ಮತ್ತು ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯ ಅವರನ್ನು ಚಿಕಿತ್ಸೆಗಾಗಿ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ,

ಆರೋಪಿಯಾದ ದಿನೇಶ್, 32 ವರ್ಷ ಎಂಬುವರು ಇನ್ನೂ ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.


Spread the love