ಅರಫಾ ಮಂಚಿಯವರ `ಪ್ರತಿರೋಧ ಇಸ್ಲಾಮಿನಲ್ಲಿ’ ಪುಸ್ತಕ ಬಿಡುಗಡೆ

Spread the love

ಅರಫಾ ಮಂಚಿಯವರ `ಪ್ರತಿರೋಧ ಇಸ್ಲಾಮಿನಲ್ಲಿ’ ಪುಸ್ತಕ ಬಿಡುಗಡೆ

ಮಂಗಳೂರು: ಸನ್ಮಾರ್ಗ ವಾರಪತ್ರಿಕೆಯ ಉಪಸಂಪಾದಕ ಹಾಗೂ ಲೇಖಕ ಅರಫಾ ಮಂಚಿಯವರು ಬರೆದಿರುವ `ಪ್ರತಿರೋಧ ಇಸ್ಲಾಮಿನಲ್ಲಿ’ ಎಂಬ ಪುಸ್ತಕವನ್ನು ಕೇರಳ ಜಮಾಅತೆ ಇಸ್ಲಾಮೀ ಹಿಂದ್ ಉಪಾಧ್ಯಕ್ಷ ವಿ.ಟಿ. ಅಬ್ದುಲ್ಲಾ ಕೋಯ ತಂಙಳ್ ಬಿಡುಗೊಳಿಸಿದರು.

ಉಪ್ಪಿನಂಗಡಿಯ ಹೆಚ್.ಎಂ. ಆಡಿಟೋರಿಯಂನಲ್ಲಿ ಇತ್ತೀಚೆಗೆ ನಡೆದ ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾ ಸಮಾವೇಶದಲ್ಲಿ ಅವರು ಬಿಡುಗಡೆಗೊಳಿಸಿದರು.

jamath-e-islami-book-release

ಇಂದು ಧರ್ಮ ಮತ್ತು ಧಾರ್ಮಿಕ ವಿಶ್ವಾಸಾಚಾರಗಳು ತಪ್ಪು ಕಲ್ಪನೆಯ ಪರಾಕಾಷ್ಠೆಗೆ ತಲುಪಿದೆ. ಅದರಲ್ಲೂ ಇಸ್ಲಾಂ ಧರ್ಮ ತೀವ್ರ ಆರೋಪ ಮತ್ತು ತಪ್ಪು ತಿಳುವಳಿಕೆಗೆ ಹಾಗೂ ವೈಚಾರಿಕ ಆಕ್ರಮಣಗಳಿಗೆ ಅತ್ಯಧಿಕವಾಗಿ ತುತ್ತಾಗಿದೆ. ಇದರ ಪ್ರಭಾವ ಮುಸ್ಲಿಂ ಸಮುದಾಯದ ಮೇಲೂ ಗೋಚರಿಸಿದೆ. ಬಹುಸಂಸ್ಕøತಿಯ ಸಮಾಜದಲ್ಲಿ ಇಸ್ಲಾಮೀ ಮೇರೆಯೊಳಗಿದ್ದು ಹೇಗೆ ಇವುಗಳನ್ನು ಪ್ರತಿರೋಧಿಸಬೇಕು ಹಾಗೂ ಇಸ್ಲಾಮನ್ನು ಹೇಗೆ ಪ್ರತಿನಿಧಿಸಬೇಕು ಎಂಬುವುದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವಾಗಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ ಎಂದು ಅಮನ್ ಪ್ರಕಾಶನ ಸಂಸ್ಥೆ ತಿಳಿಸಿದೆ.
ಪುಸ್ತಕ ಕೊಂಡುಕೊಳ್ಳಲು ಆಸಕ್ತಿ ಇರುವವರು ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಬಂದರ್, ಮಂಗಳೂರು ಅಥವಾ ದೂ.ಸಂ. 0824-2410358 ಅನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.


Spread the love