ಅಲೋಶಿಯಸ್ ವಿವಿಯ ದಿಶೆಲ್ ಲೆವಿನ್ಸ್ ಫೆರ್ನಾಂಡಿಸ್ ಅವರಿಗೆ ಪಿಎಚ್‌ಡಿ ಪದವಿ

Spread the love

ಅಲೋಶಿಯಸ್ ವಿವಿಯ ದಿಶೆಲ್ ಲೆವಿನ್ಸ್ ಫೆರ್ನಾಂಡಿಸ್ ಅವರಿಗೆ ಪಿಎಚ್‌ಡಿ ಪದವಿ

ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ವಾಣಿಜ್ಯ, ಹಣಕಾಸು ಮತ್ತು ಲೆಕ್ಕಶಾಸ್ತ್ರ ಶಾಲೆಯ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಡಿಶೆಲ್ ಲೆವಿನ್ಸ್ ಫೆರ್ನಾಂಡಿಸ್ ಅವರ “ಉಡುಪಿ ಜಿಲ್ಲೆಯ ಯುವಜನರ ಜೀವನಶೈಲಿ ಉತ್ಪನ್ನಗಳ ಆನ್‌ಲೈನ್ ಖರೀದಿ ನಿರ್ಣಯಗಳಲ್ಲಿ ಉದ್ಭವಿಸುತ್ತಿರುವ ಪ್ರವೃತ್ತಿಗಳ ಅಧ್ಯಯನ” ಎಂಬ ಮಹಾಪ್ರಬಂಧಕ್ಕಾಗಿ ಶ್ರೀನಿವಾಸ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿಯನ್ನು ನೀಡಿ ಗೌರವಿಸಿದೆ.

ಅವರು ಮಂಗಳೂರು ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಾಮರ್ಸ್‍ನ ಸಂಶೋಧನಾ ಪ್ರಾಧ್ಯಾಪಕಿ ಡಾ. ಶೈಲಶ್ರೀ ವಿ.ಟಿ. ಇವರ ಮಾರ್ಗದರ್ಶನದಲ್ಲಿ ತಮ್ಮ ಸಂಶೋಧನೆಯನ್ನು ಮಂಡಿಸಿದ್ದರು.

ಡಿಶೆಲ್ ಲೆವಿನ್ಸ್ ಫೆರ್ನಾಂಡಿಸ್ ರವರು ಕುಂದಾಪುರದ ಹಂಗಳೂರಿನ ಪ್ಯಾಟ್ರಿಕ್ ಮತ್ತು ಲೆನ್ನಿ ಫೆರ್ನಾಂಡಿಸ್ ಇವರ ಪುತ್ರಿ ಹಾಗೂ ಮಂಗಳೂರಿನ ಕುಲಶೇಖರದ ಎಲ್ಸನ್ ಡೆನ್ಸಿಲ್ ಡಿಸಿಲ್ವಾ ಅವರ ಪತ್ನಿ.


Spread the love
Subscribe
Notify of

0 Comments
Inline Feedbacks
View all comments