ಅಶ್ರಫ್ ಕಲಾಯಿ ಕೊಲೆ ಆರೋಪಿಗಳ ಬಂಧನ; ಎಸ್.ಡಿ.ಎ.ಯು ಅಭಿನಂದನೆ

Spread the love

ಅಶ್ರಫ್ ಕಲಾಯಿ ಕೊಲೆ ಆರೋಪಿಗಳ ಬಂಧನ; ಎಸ್.ಡಿ.ಎ.ಯು ಅಭಿನಂದನೆ

ಮಂಗಳೂರು: ಬಂಟ್ವಾಳ ತಾಲೂಕಿನ ಬೆಂಜನ ಪದವು ಗ್ರಾಮದ ರಾಮನಗರ ಎಂಬಲ್ಲಿ ಹಾಡು ಹಗಲೇ ದುಷ್ಕರ್ಮಿಗಳು ಒಟ್ಟು ಸೇರಿಕೊಂಡು ಕಲಾಯಿ ನಿವಾಸಿ ಅಶ್ರಫ್ ಎಂಬ ರಿಕ್ಷಾ ಚಾಲಕನನ್ನು ಕೋಮು ದ್ವೇಷದಿಂದ ಬರ್ಬರವಾಗಿ ಹತ್ಯೆ ಮಾಡಿರುತ್ತಾರೆ ಈ ಹತ್ಯೆಯನ್ನು ಎಸ್.ಡಿ.ಎ.ಯು ಖಂಡಿಸುತ್ತದೆ ಮಾತ್ರವಲ್ಲದೆ ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ನೈಜ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಿ ಪಡಿಸಿರುವುದನನ್ನು ಎಸ್.ಡಿ.ಎ.ಯು ಅಭಿನಂದಿಸಿದೆ.

ಆದರೆ ಹತ್ಯೆಯಲ್ಲಿ ನೇರ ಬಾಗಿದಾರರು ಹಾಗೂ ಹತ್ಯೆಗೆ ರುವಾರಿ ಎಂಬ ಹೆಸರಿನಲ್ಲಿ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರಿಪಡಿಸಿರುವುದು, ಈ ಹತ್ಯೆಗೆ ಪ್ರಚೋದನೆ ನೀಡಿದವರು ಹಾಗೂ ಹತ್ಯೆಗೆ ಹಿಂದಿನ ಬಾಗಿಲಿನಲ್ಲಿ ಸಹಕಾರ ನೀಡಿದವರನ್ನು ಹಾಗೂ ಆರೋಪಿಗಳಿಗೆ ವಿವಿಧ ರೀತಿಯ ಸಹಾಯ ಹಸ್ತ ನೀಡಿದವರನ್ನು ಕೂಡಾ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕೆಂದು ಎಸ್.ಡಿ.ಎ.ಯು ಆಗ್ರಹಿಸುತ್ತದೆ, ಮಾತ್ರವಲ್ಲದೆ ಕೋಮುದ್ವೇಷಕ್ಕೆ ಬಲಿಯಾದ ರಿಕ್ಷಾ ಚಾಲಕ ಅಶ್ರಫ್ ಕಲಾಯಿಯವರ ಕುಟುಂಬಕ್ಕೆ  ಸೂಕ್ತ ರೀತಿಯ ಪರಿಹಾರ ನೀಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತದೆ.

ಬಹಳ ಪ್ರಮುಖವಾಗಿ ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿಕೊಳ್ಳುವುದೇನಂದರೆ ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ಅಟೋ ಚಾಲಕರ ಮೇಲೆ ಹಲ್ಲೆ, ಹತ್ಯೆಗಳು ನಡೆಯುತ್ತಿರುವುದರಿಂದ, ರಿಕ್ಷಾ ಚಾಲಕರು ಭಯದ ವಾತಾವರಣದಲ್ಲಿ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ, ಮಾತ್ರವಲ್ಲ ಯಾವುದೇ ರೀತಿಯ ಕೋಮು ದ್ವೇಷಗಳು ಜಿಲ್ಲೆಯಲ್ಲಿ ಆವರಿಸಿದಾಗ ದುಷ್ಕರ್ಮಿಗಳಿಗೆ ಬಹಳ ಸುಲಭವಾಗಿ ಹಲ್ಲೆ,ಕೊಲೆ ನಡೆಸಲು ಸಿಗುವಂತವÀರು ಅಟೋವನ್ನೇ ನಂಬಿ ಜೀವನ ನಡೆಸುತ್ತಿರುವ ಅಟೋ ಚಾಲಕರಾಗಿರುತ್ತಾರೆ. ಆದುದರಿಂದ ರಿಕ್ಷಾ ಚಾಲಕರ ಜೀವನದ ದುಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಅಟೋದಲ್ಲಿ ಅಟೋ ಚಾಲಕರಿಗೆ ಸೂಕ್ತ ಭದ್ರತೆಗಾಗಿ ವ್ಯವಸ್ಥೆ ಕಲ್ಪಸಿ ಕೊಡಬೇಕಾಗಿ ಸಂಭಂದಪಟ್ಟ ಇಲಾಖೆಗಳಿಗೆ ಸೂಚಿಸಿ ಕ್ರಮ ಕೈಗೊಳ್ಳಲು ತಮ್ಮಲ್ಲಿ ಕಳ ಕಳಿಯಿಂದ ವಿನಂತಿಸಿಕೊಳ್ಳುತ್ತೇವೆ.


Spread the love