ಅ 15 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಪಿಎಫ್.ಐ ವತಿಯಿಂದ “ನಮಗೂ ಹೇಳಲಿಕ್ಕಿದೆ”ಸಮಾವೇಶ

Spread the love

ಅ 15 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಪಿ.ಎಫ್.ಐ ವತಿಯಿಂದ “ನಮಗೂ ಹೇಳಲಿಕ್ಕಿದೆ”ಸಮಾವೇಶ

ಮಂಗಳೂರು: ಪಾಪ್ಯುಲರ್ ಫ್ರಂಟ್ ಸಂಘಟನೆಯನ್ನು ಎನ್ ಐ ಎ ತನಿಖಾ ತಂಡವನ್ನು ದುರುಪಯೋಗಪಡಿಸಿ ಕೆಲವೊಂದು ಮಾಧ್ಯಮಗಳ ಮೂಲಕ ಸುಳ್ಳಾರೋಪವನ್ನು ಹೊರಿಸಲಾಗುತ್ತಿದೆ. ಇದನ್ನು ವಿರೋಧಿಸಿ ದೇಶದ ಪ್ರಮುಖ ಕೇಂದ್ರಗಳಲ್ಲಿ  “ನಮಗೂ ಹೇಳಲಿಕ್ಕಿದೆ” ಎಂಬ ಘೋಷಣೆಯೊಂದಿಗೆ ಆಕ್ಟೋಬರ್ 15 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಹಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಸಾಮಾಜಿಕವಾಗಿ ಅತ್ಯಂತ ತುಳಿತಕ್ಕೊಳಗಾದ ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಸಬಲೀಕರಣಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರೂಪುಗೊಂಡಿದೆ. ಲಕ್ಷಕ್ಕೂ ಮಿಕ್ಕಿದ ಕಾರ್ಯಕರ್ತರು ಮತ್ತು ಲಕ್ಷಾಂತರ ಬೆಂಬಲಿಗರನ್ನು ಪಾಪ್ಯುಲರ್ ಫ್ರಂಟ್ ಹೊಂದಿದೆ.ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯ ರಂಗದಲ್ಲಿ ತೊಡಗಿಸಿ ಮುಸ್ಲಿಮ್ ಸಮುದಾಯವನ್ನು ಶಕ್ತಗೊಳಿಸುವುದೇ ಈ ಚಳುವಳಿಯ ಉದ್ದೇಶ. ಅದರೊಂದಿಗೆ ದೇಶದ ಸಾಂವಿಧಾನಿಕ ಹಕ್ಕುಗಳಿಗೆ ತಡೆಯೊಡ್ಡುವ ಮತ್ತು ದ್ವೇಷವನ್ನು ಹರಡುವ ಫ್ಯಾಶಿಸ್ಟ್ ಕೋಮುವಾದಿ ಶಕ್ತಿಗಳ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟಗಳನ್ನು ದಶಕಗಳಿಂದ ಸಂಘಟನೆ ನಡೆಸುತ್ತಾ ಬಂದಿದೆ.

ಸಂವಿಧಾನವು ಕೊಡಮಾಡಿದ ಹಕ್ಕುಗಳನ್ನು ಜಾರಿಗೊಳಿಸಿ ಸಮಾನತೆಯ ಸಮಾಜವನ್ನು ನಿರ್ಮಿಸುವಂತೆ ನೋಡಿಕೊಳ್ಳವುದು ಪ್ರಭುತ್ವದ ಹೊಣೆಗಾರಿಕೆಯಾಗಿದೆ. ಆದರೆ ಪ್ರಭುತ್ವವು ಹೆಚ್ಚಿನ ವೇಳೆ ನ್ಯಾಯ ಮತ್ತು ಹಕ್ಕುಗಳನ್ನು ನೀಡುವುದರ ಬಗ್ಗೆ ನಕಾರಾತ್ಮಕ ನಿಲುವನ್ನು ತೋರುತ್ತಿರುತ್ತದೆ. ಆದರಲ್ಲೂ ಕೇಂದ್ರದಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದ ನಂತರ ಪ್ರಜಾಹಕ್ಕುಗಳ  ನಿರಾಕರಣೆ ಮಿತಿಮೀರಿದೆ. ಸರ್ಕಾರವನ್ನು, ಬಿಜೆಪಿಯನ್ನು ಪ್ರಶ್ನಿಸುವುದನ್ನೇ ದೇಶದ್ರೋಹ ಎಂಬಂತೆ ಬಿಂಬಿಸಲಾಗುತ್ತಿದೆ. ಮಾತ್ರವಲ್ಲ ಬಿಜೆಪಿ ಸರಕಾರವು ಈಗಾಗಲೇ ಸಾವಿರಾರು ಎನ್‍ಜಿಓ ಗಳ ಪರವಾನಿಗೆಯನ್ನು ರದ್ದುಗೊಳಿಸಿದೆ. ಧಾರ್ಮಿಕ  ವಿದ್ವಾಂಸ ಝಾಕೀರ್ ನಾಯಕ್ ರವರ ಐಆರ್‍ಎಫ್ ಸಂಘಟನೆಯನ್ನು ನಿಷೇಧಿಸಿದೆ.  ಮತ್ತಿತರ ಸಂಘಟನೆಗಳು ನಿಷೇಧದ ಹೊಸ್ತಿಲಲ್ಲಿದೆ, ಹೋರಾಟಗಾರ್ತಿ ಟೀಸ್ತಾ ಸೆಟಲ್ವಾಡ್‍ರ ಮೇಲೆ ಸುಳ್ಳಾರೋಪವನ್ನು  ಹೊರಿಸಿ ಕೋರ್ಟು ಕಛೇರಿ ಅಲೆಯುವಂತೆ ಮಾಡಲಾಗಿದೆ. ಒಟ್ಟಿನಲ್ಲಿ ಸರ್ಕಾರವನ್ನು, ಬಿಜೆಪಿಯನ್ನು ವಿರ್ಮಶಿಸುವುದನ್ನೇ ದೇಶದ್ರೋಹವೆಂದು ಬಗೆಯಲಾಗುತ್ತಿದೆ.

ಇದೀಗ ಮಾನವಹಕ್ಕುಗಳ ಉಲ್ಲಂಘನೆಯ ವಿರುದ್ಧ ನಿರಂತರ ಮಾತನಾಡುವ ಮತ್ತು ಬಿಜೆಪಿ ಆರ್‍ಎಸ್‍ಎಸ್ ನ ದ್ವೇಷ ರಾಜಕೀಯ ಮತ್ತು ಕೋಮುವಾದವನ್ನು ನಖಶಿಖಾಂತ ವಿರೋಧಿಸುತ್ತಲೇ ಬಂದಿರುವ ಪಾಪ್ಯುಲರ್ ಫ್ರಂಟ್ ಸಂಘಟನೆಯನ್ನು ಎನ್ ಐ ಎ ತನಿಖಾ ತಂಡವನ್ನು ದುರುಪಯೋಗಪಡಿಸಿ ಕೆಲವೊಂದು ಮಾಧ್ಯಮಗಳ ಮೂಲಕ ಸುಳ್ಳಾರೋಪವನ್ನು ಹೊರಿಸಲಾಗುತ್ತಿದೆ. ಇದನ್ನು ವಿರೋಧಿಸಿ ದೇಶದ ಪ್ರಮುಖ ಕೇಂದ್ರಗಳಲ್ಲಿ  “ನಮಗೂ ಹೇಳಲಿಕ್ಕಿದೆ” ಎಂಬ ಘೋಷಣೆಯೊಂದಿಗೆ ವಿವಿಧ ಕಾರ್ಯಕ್ರಮಗಳ ಸಹಿತ ಬೃಹತ್ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ.

ಇದೇ ಬರುವ ಆಕ್ಟೋಬರ್ 15 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಹಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಆಪ್ರಯುಕ್ತ  ಅಪರಾಹ್ನ 1 ಗಂಟೆಗೆ ಸರಿಯಾಗಿ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಮಧ್ಯಾಹ್ನ 2.00 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷರಾದ ಮುಹಮ್ಮದ್ ಶಾಕಿಬ್ ಅಧ್ಯಕ್ಷತೆಯಲ್ಲಿ ಚೆಯರ್‍ಮೆನ್ ಇ. ಅಬೂಬಕರ್ ಮಹಾ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಸಮಾವೇಶದಲ್ಲಿ ಎಚ್.ಡಿ ದೇವೆಗೌಡ (ಮಾಜಿ ಪ್ರಧಾನಿಗಳು) ಆಸ್ಕರ್ ಫೆರ್ನಾಂಡಿಸ್(ಮಾಜಿ ಕೇಂದ್ರ ಸಚಿವ) ಮೌಲಾನಾ ಮುಹಮ್ಮದ್ ಉಮರೈನ್ ಮೆಅರೂಫ್ ರಹ್ಮಾನೀ (ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಕಾರ್ಯದರ್ಶಿ) ಜ್ಞಾನಪ್ರಕಾಶ್ ಸ್ವಾಮೀಜಿ (ಉರಿಲಿಂಗ ಪೆದ್ದಿಮಠ ಮೈಸೂರು) ಕೆ,ಎಸ್ ಪುಟ್ಟಣ್ಣಯ್ಯ, (ಶಾಸಕರು ಮೇಲುಕೋಟೆ) ಝಮೀರ್ ಅಹ್ಮದ್ (ಶಾಸಕರು ಚಾಮರಾಜಪೇಟೆ) ನಸೀರ್ ಅಹ್ಮದ್ (ಅಧ್ಯಕ್ಷರು, ಅಲ್ಪ ಸಂಖ್ಯಾತ ಆಯೋಗ ಕರ್ನಾಟಕ ಸರ್ಕಾರ) ಬಿ.ಟಿ ಲಲಿತಾ ನಾಯಕ್ (ಮಾಜಿ ಸಚಿವೆ) ಎ.ಕೆ ಸುಬ್ಬಯ್ಯ (ಮಾಜಿ ಶಾಸಕರು) ಎನ್  ಮಹೇಶ್ (ರಾಜ್ಯಾಧ್ಯಕ್ಷರು, ಬಿಎಸ್‍ಪಿ ಕರ್ನಾಟಕ) ಬಂಜಗೆರೆ ಜಯಪ್ರಕಾಶ್ (ಮಾಜಿ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ) ಕೋಡಿಹಳ್ಳಿ ಚಂದ್ರಶೇಖರ್ (ರಾಜ್ಯಾಧ್ಯಕ್ಷರು, ರಾಜ್ಯ ರೈತ ಸಂಘ, ಹಸಿರು ಸೇನೆ) ಬಿ.ಗೋಪಾಲ್ (ಅಧ್ಯಕ್ಷರು, ಪ್ರಜಾ ಪರಿವರ್ತನಾ ಪಕ್ಷ) ಎಲ್ ಹನುಮಂತಯ್ಯ  (ಮಾಜಿ ವಿಧಾನ ಪರಿಷತ್ ಸದಸ್ಯರು) ಮೊಹನ್ ರಾಜ್ (ರಾಜ್ಯಾಧ್ಯಕ್ಷರು, ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ) ಬಿ.ಅರ್ ಬಾಸ್ಕರ್ ಪ್ರಸಾದ್, (ರಾಜ್ಯ ಸಂಚಾಲಕರು, ದಲಿತ ದಮನಿತರ ಸ್ವಾಭಿಮಾನಿ ವೇದಿಕೆ) ಮೊದಲಾದ ಗಣ್ಯರು ಈ ಸಮಾವೇಶದಲ್ಲಿ  ಭಾಗವಹಿಸಲಿದ್ದಾರೆ.


Spread the love