ಆಗೋಸ್ಟ್ 13 ಮುಂಬಾಯಿಯಲ್ಲಿ ಪಟ್ಲ ಸಂಭ್ರಮ

Spread the love

ಆಗೋಸ್ಟ್ 13 ಮುಂಬಾಯಿಯಲ್ಲಿ ಪಟ್ಲ ಸಂಭ್ರಮ
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂಬಯಿ ಘಟಕದ ಮಂಗಳೂರು ವತಿಯಿಂದ ಆಗೋಸ್ಟ್ 13ರಂದು ಭಾನುವಾರ ಮುಂಬಯಿಯಲ್ಲಿ ಪಟ್ಲ ಸಂಭ್ರಮವು ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಮುಂಬಯಿಯ ಕಾಂದಿವಲಿ ಪೂರ್ವದ ಹೊಟೇಲ್ ಅವೆನ್ಯೂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂಬಯಿ ಘಟಕದ ವಾóರ್ಷಿಕೋತ್ಸವ ಸಂಭ್ರಮದ ಪೂರ್ವಭಾವಿ ಸಭೆಯಲ್ಲಿ ಮುಂಬಯಿಯಲ್ಲಿ ಪಟ್ಲ ಸಂಭ್ರಮ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಯಕ್ಷಧ್ರುವ ಪಟ್ಲ ಫೌಂಡೇಷನ್ ಮುಂಬಯಿ ಘಟಕದ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಅವರ ನೇತೃತ್ವದಲ್ಲಿ ವಾರ್ಷಿಕೋತ್ಸವ ಸಂಭ್ರಮ ಜರಗಲಿದೆ. ಈ ಸಂದರ್ಭದಲ್ಲಿ ಮುಂಬಯಿ ಘಟಕದ ವತಿಯಿಂದ ದೊಡ್ಡ ಮೊತ್ತದ ನಿಧಿಯನ್ನು ದಾನಿಗಳಿಂದ ಸಂಗ್ರಹಿಸಿ ಫೌಂಡೇಷನ್ ಮುಖಾಂತರ ಅಶಕ್ತ ಕಲಾವಿದರಿಗೆ ನೀಡಿ ಸಹಕರಿಸುವ ಕಾರ್ಯವು ನಮ್ಮಿಂದಾಗಬೇಕು. ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ಪಟ್ಲ ಸತೀಶ್ ಶೆಟ್ಟಿ ಅವರ ಈ ಬೃಹತ್ ಯೋಜನೆಗೆ ಎಲ್ಲರ ಪೆÇ್ರೀತ್ಸಾಹ ಸಹಕಾರ ಬೇಕು. ಈ ನಿಟ್ಟಿನಲ್ಲಿ ಫೌಂಡೇಷನ್‍ನ ಮುಂಬಯಿ ಘಟಕವು ಶ್ರಮಿಸಲಿದೆ ಎಂದು ಸುರೇಶ್ ಭಂಡಾರಿ ನುಡಿದರು.
ಕಲಾವಿದನಿಂದ, ಕಲಾವಿದರಿಗಾಗಿ, ಕಲಾವಿದರಿಗೋಸ್ಕರ ಸ್ಥಾಪನೆಗೊಂಡ ಯಕ್ಷಧ್ರುವ ಪಟ್ಲ ಫೌಂಡೇಷನ್ ಮಾಡುತ್ತಿರುವ ಕಲಾಸೇವೆ, ಕಲಾವಿದರ ಸೇವೆಯನ್ನು ಕಂಡಾಗ ಸಂತೋಷವಾಗುತ್ತಿದೆ. ಒಂದು ಸರಕಾರ ಮಾಡದೇ ಇರುವ ಕೆಲಸವನ್ನು ಕಡಿಮೆ ಅವಧಿಯಲ್ಲಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರು ಸ್ಥಾಪಿಸಿದ ಯಕ್ಷಧ್ರುವ ಪಟ್ಲ ಫೌಂಡೇಷನ್ ಮಾಡಿ ತೋರಿಸಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಷನ್ ಮುಂಬಯಿ ಘಟಕದ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ತಿಳಿಸಿದರು.
ಫೌಂಡೇಷನ್‍ನ ಸ್ಥಾಪಕ ಯಕ್ಷಚಕ್ರೇಶ್ವರ ಪಟ್ಲ ಸತೀಶ್ ಶೆಟ್ಟಿ ಅವರು ಪಾಲ್ಗೊಂಡು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಮುಂಬಯಿ ಘಟಕದ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಅವರ ನೇತೃತ್ವದ ಈ ಘಟಕದಿಂದ ಫೌಂಡೇಷನ್ ಬಹಳಷ್ಟು ನಿರೀಕ್ಷೆಯನ್ನು ಹೊಂದಿದ್ದು, ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ನನ್ನ ಹಾಗೂ ಫೌಂಡೇಷನ್‍ನ ಮೇಲೆ ಸದಾಯಿರಲಿ ಎಂದು ನುಡಿದರು.
ಸಭೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಉಪಾಧ್ಯಕ್ಷರು ಹಾಗೂ ಮುಂಬಯಿ ಘಟಕದ ಸಂಚಾಲಕರುಗಳಾದ ಗಣೇಶ್ ಶೆಟ್ಟಿ ಐಕಳ, ಅಶೋಕ್ ಶೆಟ್ಟಿ ಪೆರ್ಮುದೆ ಅಶೋಕ್ ಇಂಡಸ್ಟ್ರೀಸ್, ಮುಂಬಯಿ ಘಟಕದ ಉಪಾಧ್ಯಕ್ಷರುಗಳಾದ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಅಶೋಕ್ ಪಕ್ಕಳ, ಗೌರವ ಕೋಶಾಧಿಕಾರಿಗಳಾದ ಬಾಬು ಶೆಟ್ಟಿ ಪೆರಾರ ಮತ್ತು ಸಿಎ ಸುರೇಂದ್ರ ಶೆಟ್ಟಿ, ಜತೆ ಕಾರ್ಯದರ್ಶಿ ಅಜೆಕಾರು ಬಾಲಕೃಷ್ಣ ಶೆಟ್ಟಿ, ಗೌರವ ಸಲಹೆಗಾರ ರವೀಂದ್ರನಾಥ್ ಎಂ. ಭಂಡಾರಿ ಅವರು ಉಪಸ್ಥಿತರಿದ್ದು ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಸುರೇಶ್ ಶೆಟ್ಟಿ ಮರಾಠ, ಕಲಾಜಗತ್ತು ಹರೀಶ್ ಶೆಟ್ಟಿ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಮಿತಿಯ ಉಪಾಧ್ಯಕ್ಷ ಅಶೋಕ್ ಪಕ್ಕಳ ವಂದಿಸಿದರು.
ಅಶಕ್ತ ಕಲಾವಿದರಿಗೆ ನೆರವು
ಆಗಸ್ಟ್ 13 ರಂದು ಅಪರಾಹ್ನ 2 ರಿಂದ ರಾತ್ರಿ 9 ರವರೆಗೆ ಯಕ್ಷಧ್ರುವ ಪಟ್ಲ ಫೌಂಡೇಷನ್ ಮುಂಬಯಿ ಘಟಕದ ವತಿಯಿಂದ ‘ಮುಂಬಯಿಯಲ್ಲಿ ಪಟ್ಲ ಸಂಭ್ರಮ’ ವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೆ ಮುಂಬಯಿಯ ಅಶಕ್ತ ಕಲಾವಿದರನ್ನು ಗುರುತಿಸಿ ಅವರಿಗೆ ಸಹಕರಿಸುವ ಹಾಗೂ ಕಲೆ, ಕಲಾವಿದರ ಶ್ರೇಯೋಭಿವೃದ್ದಿಗೆ ಸಂಬಂಧಿಸಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
‘ಗಾನ ವೈಭವ’ ಹಾಗೂ ‘ನಾಟ್ಯ ವೈಭವ’,
ಅಡ್ಯಾರ್‍ನಲ್ಲಿ ನಡೆದ ಪಟ್ಲ ಸಂಭ್ರಮವು ದೇಶ-ವಿದೇಶಗಳಲ್ಲಿ ನೆಲೆಸಿರುವ ಕಲಾಭಿಮಾನಿಗಳನ್ನು ಆಕರ್ಷಿಸಿರುವ ರೀತಿಯಲ್ಲೇ ‘ಮುಂಬಯಿಯಲ್ಲಿ ಪಟ್ಲ ಸಂಭ್ರಮ’ ವು ಹಲವಾರು ವಿಶೇಷತೆಗಳಿಂದ ಕೂಡಿರಲಿದೆ. ಯಕ್ಷಗಾನ ಕಲೆ-ಕಲಾವಿದರನ್ನು ಒಂದೇ ವೇದಿಕೆಯಡಿಗೆ ತರುವ ಪ್ರಯತ್ನ ಇದಾಗಲಿದೆ. ಸಾಂಸ್ಕøತಿಕ ಕಾರ್ಯಕ್ರಮವಾಗಿ ತೆಂಕು-ಬಡಗು ತಿಟ್ಟಿನ ಪ್ರಸಿದ್ಧ ಭಾಗವತರಿಂದ ‘ಗಾನ ವೈಭವ’ ಹಾಗೂ ‘ನಾಟ್ಯ ವೈಭವ’, ಕರಾವಳಿಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಇನ್ನಿತರ ಕಾರ್ಯಕ್ರಮಗಳು ಮುಂಬಯಿಯಲ್ಲಿ ಪಟ್ಲ ಸಂಭ್ರಮದಲ್ಲಿ ಝೇಂಕರಿಸಲಿದೆ.


Spread the love