ಜೂನ್ 14 ರಿಂದ ಗೋವಾದಲ್ಲಿ ಆರನೇ `ಅಖಿಲ ಭಾರತೀಯ ಹಿಂದೂ ಅಧಿವೇಶನ’!

Spread the love

ಜೂನ್ 14 ರಿಂದ ಗೋವಾದಲ್ಲಿ ಆರನೇ `ಅಖಿಲ ಭಾರತೀಯ ಹಿಂದೂ ಅಧಿವೇಶನ’!

ಮಂಗಳೂರು : `ಹಿಂದೂ ರಾಷ್ಟ್ರ’ ಸ್ಥಾಪನೆಗಾಗಿ ಹಿಂದುತ್ವನಿಷ್ಠ ಸಂಘಟನೆಗಳ ರಾಷ್ಟ್ರವ್ಯಾಪಿ ಸಂಘಟನೆಯನ್ನು ಸ್ಥಾಪಿಸುವ ಉದ್ದೇಶದಿಂದ ಜೂನ್ 14 ರಿಂದ ಗೋವಾದಲ್ಲಿ ಆರನೇ `ಅಖಿಲ ಭಾರತೀಯ ಹಿಂದೂ ಅಧಿವೇಶನ’ವು ಆರಂಭವಾಗಲಿದೆ. ಜೂನ್ 17 ರ ವರೆಗೆ ನಡೆಯುವ ಈ ಅಧಿವೇಶನಕ್ಕೆ ಭಾರತದ 21 ರಾಜ್ಯಗಳ ಸಹಿತ ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಿಂದ 150 ಕ್ಕಿಂತಲೂ ಹೆಚ್ಚು ಹಿಂದೂ ಸಂಘಟನೆಗಳ 400 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವರು. ಇದರಲ್ಲಿ ಕರ್ನಾಟಕ ರಾಜ್ಯದಿಂದ ಬಾಗಲಕೋಟೆ, ಊಡುಪಿ, ದಕ್ಷಿಣ ಕನ್ನಡ, ಧಾರವಾಡ, ಬೆಂಗಳೂರು, ಬೆಳಗಾವಿ, ಹಾಸನ, ತುಮಕೂರು ಜಿಲ್ಲೆಗಳು ಸೇರಿದಂತೆ ಒಟ್ಟು 50 ಕ್ಕಿಂತಲೂ ಹೆಚ್ಚು ಹಿಂದುತ್ವವಾದಿಗಳು ಭಾಗವಹಿಸುವರು. ಈ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಒಂದಾಗಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಮಾನ ಕೃತಿಯ ಅಂತರ್ಗತ ವರ್ಷಾದ್ಯಂತದ ಉಪಕ್ರಮ ಮತ್ತು ಆಂದೋಲನಗಳ ದಿಶೆ ನಿಶ್ಚಯಿಸಲಿದ್ದಾರೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ.ಗುರುಪ್ರಸಾದ ಇವರು ಪತ್ರಿಕಾ ಪರಿಷತ್ತಿನಲ್ಲಿ ಮಾಹಿತಿ ನೀಡಿದರು.

ಶ್ರೀ ಗುರುಪ್ರಸಾದ ಇವರು ಮುಂದೆ ಮಾತನಾಡುತ್ತಾ, ಹಿಂದುತ್ವನಿಷ್ಠ ಪಕ್ಷ ಅಧಿಕಾರದಲ್ಲಿದ್ದರೂ ಕಳೆದ ಅನೇಕ ವರ್ಷಗಳಿಂದ ಬಾಕಿ ಇರುವ ಹಿಂದೂಗಳ ಬೇಡಿಕೆಗಳನ್ನು ಇದು ವರೆಗೆ ಪೂರ್ಣವಾಗಿಲ್ಲ. ಕಾಶ್ಮೀರಿ ಹಿಂದೂಗಳ ಪುನರ್‍ವಸತಿ, ಕಲಂ 370 ರದ್ದುಗೊಳಿಸುವುದು, ಗೋವಂಶ ಹತ್ಯೆ ನಿಷೇಧ, ರಾಮಮಂದಿರದ ಪುನರ್‍ನಿರ್ಮಾಣ ಮುಂತಾದ ವಿಷಯಗಳ ಬಗ್ಗೆ ಸರಕಾರವು ಯಾವುದೇ ದೃಢ ನಿಲುವನ್ನು ಹೊಂದಿಲ್ಲ. ಸೈನಿಕರ ಮೇಲಿನ ಕಲ್ಲು ತೂರಾಟ, ಅವರ ಹತ್ಯೆ ಇಂದಿಗೂ ತಡೆಯಲು ಆಗಿಲ್ಲ ಅಥವಾ ಸೈನಿಕರ ಮೇಲಿನ ಕಲ್ಲುತೂರಾಟವನ್ನು ರಾಜದ್ರೋಹವೆಂದು ನಿರ್ಧರಿಸಲಾಗುತ್ತಿಲ್ಲ. ಹಾಗಾಗಿ ಹಿಂದೂ ಸಂಘಟನೆಗಳು ಈಗ ಮುಂದಾಳತ್ವ ವಹಿಸಿ ಹಿಂದೂ ರಾಷ್ಟ್ರದ ಉದ್ಘೋಷವನ್ನು ಜನರ ವರೆಗೆ ತಲುಪಿಸಲು ಈ ಅಧಿವೇಶನದ ಮಾಧ್ಯಮದಿಂದ ನಿರ್ಧರಿಸಲಾಗುವುದು. ಕಳೆದ 5 ರಾಷ್ಟ್ರೀಯ ಅಧಿವೇಶನಗಳಲ್ಲಿ ನಿರ್ಧರಿಸಿದಂತೆ ಕರ್ನಾಟಕ ರಾಜ್ಯದ ಮಂಗಳೂರು, ಉಡುಪಿ, ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ವಿಜಯಪುರ ಸೇರಿದಂತೆ ಹಲವೆಡೆ ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವವರ ವಿರುಧ್ದ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಬೇಕು ಹಾಗೆಯೇ ಸೇನೆಗೆ ಸರ್ವಾಧಿಕಾರ ನೀಡಬೇಕು ಎಂದು ಆಗ್ರಹಿಸಿ ಆಂದೋಲನ ಮಾಡಲಾಯಿತು ಹಾಗೂ ಸಮೀಪದ ಮಣಿಪಾಲದ ಶಿವಪಾಡಿಯಲ್ಲಿ 2016 ರ ಡಿಸೆಂಬರ್ 11 ಮತ್ತು 12 ಈ ಅವಧಿಯಲ್ಲಿ ಸ್ಥಳೀಯ ಸಂಘಟನೆಗಳ ಸಂಘಟನೆ ಮಾಡಲು ಪ್ರಾಂತೀಯ ಹಿಂದೂ ಅಧಿವೇಶನವನ್ನು ಆಯೋಜಿಸಲಾಯಿತು. ಈ ಕಾರ್ಯಕ್ಕೆ ಇನ್ನಷ್ಟು ವೇಗ ನೀಡುವ ಪ್ರಯತ್ನವನ್ನು ಆರನೇ ಅಧಿವೇಶನದ ಮೂಲಕ ಆಗುವುದು.
ಈ ಅಧಿವೇಶನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ವಕೀಲರಾದ ಶ್ರೀ ಉದಯ್ ಕುಮಾರ್ ಬಿ.ಕೆ, ಶ್ರೀ ಜಯರಾಜ್ ಸಾಲಿಯಾನ್ ಕಾನರ್ಪ, ಶ್ರೀ ಮಧುಸೂಧನ ಅಯ್ಯರ್, ಮಂಗಳೂರಿನ ಉದ್ಯಮಿಗಳಾದ ಶ್ರೀ ಅನಂತ ಕಾಮತ್ ಸೇರಿದಂತೆ ಹಲವು ಗಣ್ಯರು ಸಹಭಾಗಿಯಾಗುವರು.

ಈ ಪತ್ರಿಕಾ ಪರಿಷತ್ತಿನಲ್ಲಿ ನ್ಯಾಯವಾದಿಗಳಾದ ಕು.ದಿವ್ಯಾ ಬಾಳೆಹಿತ್ತಲು, ನಾಗರೀಕ ಹಿತರಕ್ಷಣಾ ವೇದಿಕೆಯ ಅದ್ಯಕ್ಷರಾದ ಶ್ರೀ.ಹನುಮಂತ ಕಾಮತ್,ಉದ್ಯಮಿಗಳಾದ ಶ್ರೀ.ಸತೀಶ ಕಿಣಿ ಮತ್ತು ಸನಾತನ ಸಂಸ್ಥೆಯ ಸೌ. ಮಂಜುಳಾ ಗೌಡ ಉಪಸ್ಥಿತರಿದ್ದರು.


Spread the love