ಆದಿತ್ಯ ರಾವ್ ನನ್ನು ಉಡುಪಿಗೆ ಕರೆತಂದು ವಿಚಾರಣೆ; ಬ್ಯಾಂಕಿನ ಲಾಕರ್ ನಿಂದ ದಾಖಲೆ ವಶ

Spread the love

ಆದಿತ್ಯ ರಾವ್ ನನ್ನು ಉಡುಪಿಗೆ ಕರೆತಂದು ವಿಚಾರಣೆ; ಬ್ಯಾಂಕಿನ ಲಾಕರ್ ನಿಂದ ದಾಖಲೆ ವಶ

ಉಡುಪಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಪ್ರಕರಣದ ಆರೋಪಿ ಆದಿತ್ಯ ರಾವ್ ನನ್ನು ಮಹಜರು ನಡೆಸುವ ಉದ್ದೇಶದಿಂದ ಮಂಗಳೂರು ಪೊಲೀಸರು ಶನಿವಾರ ಉಡುಪಿಗೆ ಕರೆತಂದಿದ್ದು ವಿವಿಧ ಕಡೆಗಳಲ್ಲಿ ಮಹಜರು ನಡೆಸಿದರು.

ಮಂಗಳೂರು ಉತ್ತರ ವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಆದಿತ್ಯ ರಾವ್ ನನ್ನು ಉಡುಪಿಗೆ ಕರೆತಂದಿದ್ದು ಈತ ಕಡಿಯಾಳಿಯಲ್ಲಿರುವ ಕರ್ಣಾಟಕ ಬ್ಯಾಂಕ್ ನಲ್ಲಿ ಲಾಕರ್ ಪಡೆದಿದ್ದ ಹಿನ್ನೆಲೆಯಲ್ಲಿ ಆದಿತ್ಯ ರಾವ್ ನನ್ನು ಬ್ಯಾಂಕಿನೊಳಗೆ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ವಿಚಾರಣೆಯ ವೇಳೆ ಲಾಕರಿನಲ್ಲಿ ವಿವಿಧ ದಾಖಲೆ ಪತ್ರಗಳು ಹಾಗೂ ಒಂದು ಬಾಕ್ಸ್ ಲಭಿಸಿದ್ದು ಅದನ್ನು ಎಫ್ ಎಸ್ ಎಲ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲಿಂದ ಬಳಿಕ ಆದಿತ್ಯ ರಾವ್ ನನ್ನು ಮಲ್ಪೆ ವಡಭಾಂಡೇಶ್ವರಕ್ಕೆ ಪೊಲೀಸ್ ಅಧಿಕಾರಿಗಳು ಕರೆದೊಯ್ದು ವಿಚಾರಣೆ ನಡೆಸಿದರು.

ಹೊರಗಡೆ ಬ್ಯಾಂಕ್ ಶೆಟರ್ ಹಾಕಿ ಪೊಲೀಸರು ಆದಿತ್ಯ ಲಾಕರ್ ನಲ್ಲಿಟ್ಟಿದ್ದ ದಾಖಲೆಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.


Spread the love