ಆಪರೇಶನ್ ಸಿಂಧೂರ ಕಾರ್ಯಾಚರಣೆ ಅಣಕಿಸಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಯುವತಿ ವಿರುದ್ದ ಪ್ರಕರಣ ದಾಖಲು
ಮಂಗಳೂರು: ಭಾರತ ಸೇನೆಯ ಆಪರೇಶನ್ ಸಿಂಧೂರ ಕಾರ್ಯಾಚರಣೆಯನ್ನು ಅಣಕಿಸಿ ಇನ್ ಸ್ಟಾಗ್ರಾಂ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ರೇಷ್ಮಾ ಬಾರಿಗ ಎಂಬ ಯುವತಿ ವಿರುದ್ದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಭಾರತ ಸೇನೆಯ “ಆಪರೇಷನ್ ಸಿಂಧೂರ್’ ಎಂಬ ಕಾರ್ಯಚರಣೆಗೆ ಸಂಬಂಧಿಸಿದಂತೆ reshma_bariga ಎಂಬ ಹೆಸರಿನ ಇನ್ನಾ ಗ್ರಾಮ್ ಖಾತೆಯಲ್ಲಿ ರೇಷ್ಮಾ ಎಂಬವರು ಭಾರತ ಸೇನೆಯ” ಆಪರೇಷನ್ ಸಿಂದೂರ್ ” ಎಂಬ ಕಾರ್ಯಚರಣೆಯ ಬಗ್ಗೆ, ತನ್ನ reshma_bariga ಎಂಬ ಇನ್ಮಾಗ್ರಾಮ್ ಖಾತೆಯಲ್ಲಿ. ‘ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ ಅಲ್ಲಿ, ನಂದಿ ಹೋಯಿತು ಬೆಳಕು ಅವನ ಮನೆಯ ಬೆಳಕಿಗೆ ನನೊಳಗಿನ ದೀಪ… ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದ್ದು ಕತ್ತಲು… ಎಲೆ.,ಲೂ, ថ្ម…! #dikkaraoperationsindura ಎಂದು ಪೋಸ್ಟ್ ಮಾಡಿರುವ ಆಧಾರದಲ್ಲಿ ಕೊಣಾಜೆ ಪೊಲೀಸ್ : 59/2025 20. 192, 196, 353(1)(b),353(2) ಭಾರತೀಯ ನ್ಯಾಯ ಸಂಹಿತೆ ಯಂತೆ ಪ್ರಕರಣ ದಾಖಲಿಸಿದ್ದು, ಸದ್ರಿ ಪ್ರಕರಣವನ್ನು ಮುಂದಿನ ತನಿಖೆಯ ಸಲುವಾಗಿ ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಸದಿ ಪ್ರಕರಣದಲ್ಲಿ ತನಿಖೆ ಕೈಗೊಂಡು ಪ್ರಚೋದನಕಾರಿಯಾದ ಸಂದೇಶವನ್ನು ‘ಇನ್ನಾ ಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ರೇಷ್ಮಾ ಬೆಳಾಲ್ ಅಂಚೆ ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಎಂಬವರನ್ನು ಪತ್ತೆ ಮಾಡಿದ್ದು ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ಮುಂದುವರೆಸಲಾಗಿದೆ.