ಆರೋಗ್ಯ ಸಹಾಯಕರಿಗೆ ವೇತನ ಬಿಡುಗಡೆಗೊಳಿಸಿ: ಮೇಲ್ಮನೆ ಸದಸ್ಯ ಆಯನೂರು ಮಂಜುನಾಥ್

Spread the love

ಆರೋಗ್ಯ ಸಹಾಯಕರಿಗೆ ವೇತನ ಬಿಡುಗಡೆಗೊಳಿಸಿ: ಮೇಲ್ಮನೆ ಸದಸ್ಯ ಆಯನೂರು ಮಂಜುನಾಥ್

ಶಿವಮೊಗ್ಗ: ಕೊರೊನಾ ಸೋಂಕಿಗೊಳಾಗಿರುವ ಹಾಗೂ ರೋಗಿಗಳ ಶುಶ್ರೂಷೆ ಮಾಡುತ್ತಿರುವ ಆರೋಗ್ಯ ಸಹಾಯಕರಿಗೆ ಆದಷ್ಟು ಬೇಗ ವೇತನ ಬಿಡುಗಡೆಗೊಳಿಸುವಂತೆ ಮಾಜಿ ಸಂಸದರು ಹಾಗೂ ಮೇಲ್ಮನೆಯ ಬಿಜೆಪಿ ಸದಸ್ಯರು ಆಗಿರುವ ಆಯನೂರು ಮಂಜುನಾಥ್ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಒತ್ತಾಯಿಸಿದ್ದಾರೆ.

ಶನಿವಾರ ಸಂಜೆ ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಆರೋಗ್ಯ ಸಹಾಯಕ,ಸಹಾಯಕಿಯರು ಅಳಲು ತೋಡಿಕೊಂಡಿದ್ದು, ಕಳೆದ ಮೂರು ತಿಂಗಳಿನಿಂದ ವೇತನ‌‌ ಬಿಡುಗಡೆಯಾಗಿಲ್ಲಮ ಮಹಾಮಾರಿ ಕೊರೊನಾ ವೈರಸ್ ರೋಗ ಹೆಚ್ಚುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಆರೋಗ್ಯ ಸಹಾಯಕರು ಹಗಲು-ರಾತ್ರಿ ಎನ್ನದೇ ಸೇವೆ ಸಲ್ಲಿಸುತ್ತಿದ್ದಾರೆ.

ಸಾಕಷ್ಟು ಕಷ್ಟನಷ್ಟಗಳ ನಡುವೆಯೂ ಈ ಆರೋಗ್ಯ ಸಹಾಯಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಅದೆಷ್ಟೋ ಸಹಾಯಕರು ಮನೆಗೂ ಹೋಗದೇ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಸಂಕಷ್ಟದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಕೈಹಿಡಿದಿರುವ ಆರೋಗ್ಯ ಸಹಾಯಕರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಬಿಡುಗಡೆಯಾಗದಿರುವುದು ವಿಷಾದನೀಯ. ಇದು ಕೇವಲ ಶಿವಮೊಗ್ಗ ಸರ್ಕಾರಿ ಆಸ್ಪತ್ರೆಗಳ ಸಹಾಯಕರ ಅಳಲಷ್ಟೇ ಆಗಿರದೇ ರಾಜ್ಯದ ಹಲವು ಆಸ್ಪತ್ರೆಗಳ ಸಹಾಯಕರ ನೋವು ಸಹ ಆಗಿದೆ.

ಆದ್ದರಿಂದ ಸರ್ಕಾರದ ಆರ್ಥಿಕ ಇಲಾಖೆಯಿಂದ ಆರೋಗ್ಯ ಸಹಾಯಕರಿಗೆ ಬಿಡುಗಡೆಯಾಗಬೇಕಿರುವ ವೇತನವನ್ನು ಬಿಡುಗಡೆಗೊಳಿಸುವಂತೆ ಆಯನೂರು ಮಂಜುನಾಥ್ ಮನವಿ ಮಾಡಿದ್ದಾರೆ.


Spread the love