ಆರೋಗ್ಯ ಸೇತು ಆ್ಯಪ್ ತಂದ ಗೊಂದಲ – ಆತಂಕ ಬೇಡ! ಬೆಳಗಾವಿಯಿಂದ ಬೈಂದೂರಿಗೆ ಬಂದ ವ್ಯಕ್ತಿಯ ಕೊರೋನಾ ವರದಿ ನೆಗೆಟಿವ್

Spread the love

ಆರೋಗ್ಯ ಸೇತು ಆ್ಯಪ್ ತಂದ ಗೊಂದಲ – ಆತಂಕ ಬೇಡ! ಬೆಳಗಾವಿಯಿಂದ ಬೈಂದೂರಿಗೆ ಬಂದ ವ್ಯಕ್ತಿಯ ಕೊರೋನಾ ವರದಿ ನೆಗೆಟಿವ್

ಉಡುಪಿ: ಬೆಳಗಾವಿಯಿಂದ ಬೈಂದೂರಿಗೆ ಬಂದ ವ್ಯಕ್ತಿಯೋರ್ವರಿಗೆ ಕೊರೋನಾ ಪಾಸಿಟಿವ್ ಸೋಂಕು ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ್ದ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ಪರೀಕ್ಷೆಗೆ ಒಳಪಟ್ಟ ವ್ಯಕ್ತಿಯ ವರದಿ ನೆಗೆಟಿವ್ ಎಂದು ಬಂದಿರುತ್ತದೆ.

ಬೆಳಗಾವಿಯಿಂದ ಬೈಂದೂರಿಗೆ ವ್ಯಕ್ತಿಯೊಬ್ಬ ಶುಕ್ರವಾರ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದು ಆತನಿಗೆ ಆರೋಗ್ಯ ಸೇತು ಆ್ಯಪ್ ನಲ್ಲಿ ಕೊರೊನಾ ಪಾಸಿಟಿವ್ ಎಂದು ಮಾಹಿತಿ ಬಂದಿದ್ದು ಇದರಿಂದ ಆತಂಕಗೊಂಡ ವ್ಯಕ್ತಿ ಬೈಂದೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಬಳಿಕ ಆತನ ವರದಿಯ ಬಗ್ಗೆ ಬೆಳಗಾವಿ ಆರೋಗ್ಯ ಇಲಾಖೆಯಲ್ಲಿ ಎಚ್ಚರಿಸಿದಾಗ ಆತನ ವರದಿ ನೆಗೆಟಿವ್ ಎನ್ನುವುದು ತಿಳಿದು ಬಂದಿದೆ. ಆದ್ದರಿಂದ ಜನರು ಯಾವುದೇ ರೀತಿಯ ಆತಂಕಕ್ಕೆ ಒಳಪಡಬೇಕಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆರೋಗ್ಯ ಸೇತು ಅ್ಯಪ್ ನಲ್ಲಿ ಪಾಸಿಟಿವ್ ಎಂದು ಅಪ್ ಲೋಡ್ ಆಗಿದ್ದು, ಪಾಸಿಟಿವ್ ಬಂದ ವ್ಯಕ್ತಿ ಬೈಂದೂರಿನಲ್ಲಿದ್ದಾನೆ ಎಂದು ಅ್ಯಪ್ ನಲ್ಲಿ ಮಾಹಿತಿ ಬಂದಿದ್ದು ಇದರಿಂದ ಬೈಂದೂರಿನ ಜನರು ಆತಂಕಗೊಂಡಿದ್ದು ಇದರ ಜೊತೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಬೈಂದೂರಿನಲ್ಲಿ ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢಗೊಂಡಿದೆ ಎಂದು ಗಾಳಿ ಸುದ್ದಿಗಳು ಹರಡಿದ್ದವು. ಬೆಳಗಾವಿ ಆರೋಗ್ಯ ಇಲಾಖೆಯಲ್ಲಿ ವಿಚಾರಿಸಿದಾಗ ಈ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆ ನೆಗೆಟಿವ್ ಬಂದಿದೆ ಎಂಬುದು ಖಾತ್ರಿಯಾಗಿದೆ. ಆದರೆ ಮುನ್ನೆಚ್ಚರಿಕೆಯ ಕ್ರಮವಾಗಿ ಉಡುಪಿಯಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಿದ್ದು ಈ ವ್ಯಕ್ತಿ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ


Spread the love