Spread the love
ಆರ್ ಟಿಒ ಕಚೇರಿಗೆ ಬಾಂಬ್ ಬೆದರಿಕೆ ಕರೆ , ಐದು ಕಡೆಗಳಲ್ಲಿ ಬಾಂಬ್ ಇಡುವುದಾಗಿ ಇ-ಮೇಲ್ ಸಂದೇಶ
ಮಂಗಳೂರು: ಮಂಗಳೂರು ಆರ್ ಟಿಒ ಕಚೇರಿಗೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಲಾಗಿದೆ. ಕಿಡಿಗೇಡಿಗಳು ಈ ಬಗ್ಗೆ ಆರ್ ಟಿಒ ಕಚೇರಿಗೆ ಇ-ಮೇಲ್ ಮಾಡಿದ್ದಾರೆ.
ಮಂಗಳೂರಿನ ನೆಹರೂ ಮೈದಾನ ಬಳಿ ಇರುವ ಆರ್ ಟಿಒ ಕಚೇರಿಗೆ ರವಿವಾರ ರಾತ್ರಿ ವೇಳೆ ಕಚೇರಿಯ ಅಧಿಕೃತ ಮೇಲ್ ಐಡಿಗೆ ಬಾಂಬ್ ಬೆದರಿಕೆಯ ಇ ಮೇಲ್ ಬಂದಿದೆ. ಮೇಲ್ ಬಂದಿದೆ. ಐದು ಕಡೆಗಳಲ್ಲಿ ಬಾಂಬ್ ಇಡುವುದಾಗಿ ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ. ಸೋಮವಾರ ಅಪರಾಹ್ನ 12 ಗಂಟೆಯ ವೇಳೆ ಆರ್ ಟಿಒ ಅಧಿಕಾರಿಯ ಈ ಇ-ಮೇಲ್ ಗಮನಿಸಿದ್ದಾರೆ. ತಕ್ಷಣ ಅವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಂಗಳೂರು ನಗರ ಎಎಸ್ ಸಿ ಮತ್ತು ಬಿಡಿಡಿಎಸ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರ್ ಟಿಒ ಕಚೇರಿ ಹಾಗೂ ಕಚೇರಿ ಆವರಣದಲ್ಲಿ ಪರಿಶೀಲನೆ ಮಾಡಲಾಗಿದೆ.
Spread the love













