ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದಿಂದ ‘ಯಶಸ್ಸಿಗಾಗಿ ಕೌಶಲ್ಯ’ ಕಾರ್ಯಗಾರ

????????????????????????????????????
Spread the love

ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದಿಂದ ‘ಯಶಸ್ಸಿಗಾಗಿ ಕೌಶಲ್ಯ’ ಕಾರ್ಯಗಾರ

ಮೂಡುಬಿದಿರೆ: ಬದುಕಿನಲ್ಲಿ ಏನಾದರು ಸಾಧಿಸಬೇಕೆಂದರೆ ಶ್ರಮದ ಜತೆ ಸಂಕಲ್ಪವೂ ಮುಖ್ಯ. ಇದನ್ನು ಅರಿತವನು ನಿಜವಾಗಿಯೂ ಸಾಧಕನಾಗಬಲ್ಲ ಎಂದು ಜೆಸಿ ತರಬೇತುದಾರ ವೇಣು. ಜಿ. ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ಪಿ.ಜಿ ಸೆಮಿನರ್ ಹಾಲ್‍ನಲ್ಲಿ ವಾಣಿಜ್ಯ ವಿಭಾಗದಿಂದ ಸಿ.ಎ(ಇಂಟರ್) ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಯಶಸ್ಸಿಗಾಗಿ ಕೌಶಲ್ಯ’ ಎಂಬ ಕಾರ್ಯಗಾರದಲ್ಲಿ ಮಾತನಾಡಿದರು.

ನಾವು ಮಾಡುವ ಕೆಲಸದಲ್ಲಿ ಎಷ್ಟು ಅಳವಡಿಸಿಕೊಳ್ಳುತ್ತೇವೋ, ಅಷ್ಟು ಕಲಿಯಲು ಸಾಧ್ಯ. ವಿದ್ಯಾರ್ಥಿಗಳು ಸಾಧನೆಯ ಕನಸು ಮಾತ್ರ ಕಾಣುವುದಲ್ಲದೇ ಅದಕ್ಕಾಗಿ ಶ್ರಮಿಸಬೇಕು. ಆಗ ನಿಜವಾಗಿಯೂ ಭವಿಷ್ಯದಲ್ಲಿ ಉನ್ನತಿ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕುರಿಯನ್ ಕಾರ್ಯಕ್ರಮವನ್ನು ಮಾತನಾಡಿ ನಾವು ಮುಂದೆ ಏನಾಗಬೇಕೆಂಬುವುದನ್ನು ಇತರರಿಗೆ ಪ್ರದರ್ಶಿಸುತ್ತೇವೆಯೋ, ಆಗ ನಮ್ಮ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಆಗ ನಾವು ಅಂದುಕೊಂಡತೆ ಯಶಸ್ಸನ್ನು ಕಾಣಬಹುದು ಎಂದರು.

ಕಾರ್ಯಕ್ರಮದಲ್ಲಿ 2018-19ರಲ್ಲಿ ಸಿಎ ( ಇಂಟರ್) ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುಷ್ಮಾ ಎನ್, ತೇಜಸ್, ದೀಕ್ಷಾ, ಅನಿತಾ ಕೆ ಹೆಗ್ಡೆ, ಭರತ್ ಜಿ ಹೆಗ್ಡೆ, ಧೀರಜ್ ಬಿ .ಎನ್, ಪವಿತ್ರಾ ವಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಎಮ್.ಡಿ, ವೃತ್ತಿಪರ ಕೋರ್ಸನ ಸಂಯೋಜಕರಾದ ಅಶೋಕ ಕೆ.ಜಿ., ಕಾರ್ಯಕ್ರಮದ ಸಂಯೋಜಕಿ ಅಪರ್ಣ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಗಳಾದ ಶ್ವೇತಾ ನಿರೂಪಿಸಿ,ಕೀರ್ತನಾ ಸ್ವಾಗತಿಸಿ ಹಾಗೂ ನಿಖಿತಾ ವಂದಿಸಿದರು.


Spread the love