ಇತಿಹಾಸ ಸ್ರಷ್ಟಿಸಿದ ಸ್ಪಂದನ ಮಸ್ಕತ್

Spread the love

ಇತಿಹಾಸ ಸ್ರಷ್ಟಿಸಿದ ಸ್ಪಂದನ ಮಸ್ಕತ್

ಉಲ್ಲಾಸ ಮತ್ತು ಉತ್ಸಾಹ (ZEAL & ZEST ) ಎನ್ನುವ ಕನ್ನಡ ಮತ್ತು ತುಳು ಹಾಡುಗಳಿಂದ ಕೂಡಿದ ಸಂಗೀತ ಆಲ್ಬಮ್ ಅನ್ನು “ಸ್ಪಂದನ ಮಸ್ಕತ್” ಬಿಡುಗಡೆ ಗೊಳಿಸುವ ಮೂಲಕ ಕಳೆದ ವಾರ ಒಮಾನ್ ನಲ್ಲಿ ಇತಿಹಾಸ ಸೃಷ್ಟಿಸಿದೆ.

ನಟ, ನಿರ್ದೇಶಕ, ಸಾಹಿತ್ಯ ರಚನೆಕಾರ, ಕಥೆಗಾರ ಮತ್ತು ಸಂಗೀತ ನಿರ್ದೇಶಕ ಶ್ರೀ ರವಿಬಸ್ರೂರ್ ರವರು ತಮ್ಮ ಮುಂದಿನ ಚಿತ್ರಗಳಿಗೆ, ಒಮಾನ್ ನ ಸುಂದರ ಲೋಕೇಶನ್ ಸ್ಥಳ ಗಳನ್ನು ನೋಡಲು ೩-೪ ದಿನಗಳ ಮಟ್ಟಿಗೆ ಮಸ್ಕತ್ ಗೆ ಬಂದಿದ್ದರು, ಆದರೆ ತಮ್ಮ ಮೂಲ ಉದ್ದೇಶವನ್ನು ಬದಿಗೊತ್ತಿ, ಮಸ್ಕತ್ ನಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಕೇವಲ ೩ ದಿನದೊಳಗೆ, ಗೀತೆಗಳನ್ನು ಬರೆದು ಸಂಗೀತ ಸಂಯೋಜಿಸಿ, ಉದಯೋನ್ಮುಖ ಪ್ರತಿಭಾವಂತ ಹಾಡುಗಾರರನ್ನು ಆಯ್ಕೆಮಾಡಿ, ಹಾಡಿಸಿ, ರೆಕಾರ್ಡ್ ಮಾಡಿ, “ಸ್ಪಂದನ ಮಸ್ಕತ್” ನ ಮುಂದಾಳುತ್ವದಲ್ಲಿ ಇತಿಹಾಸ ನಿರ್ಮಿಸಿದರು.

ಶ್ರೀ ರವಿ ಬಸ್ರೂರ್ ರವರು ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆ ಮಾಡುತಿದ್ದಾರೆ. ಅವರು ಬರೆದು ಸಂಗೀತ ಸಂಯೋಜಿಸಿದ ಹಲವಾರು ಹಾಡುಗಳು ಸೂಪರ್ ಹಿಟ್ ಆಗಿವೆ. ಒಟ್ಟು ೮೦ ಚಲನಚಿತ್ರಗಳಿಗೆ ಅವರು ವಿವಿಧ ರೂಪದಲ್ಲಿ ಕೆಲಸ ಮಾಡಿದ್ದಾರೆ. ಇವರ ಸಾಧನೆ ಯನ್ನು ಗುರುತಿಸಿ, ಈ ಸಂಧರ್ಭ ದಲ್ಲಿ ಅವರನ್ನು ಸ್ಪಂದನ ಮಸ್ಕತ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ, ಪ್ರಾಯೋಜಕರು, ಸ್ಥಳೀಯ ಗಾಯಕರು ಮತ್ತು ಸ್ಪಂದನ ಮಸ್ಕತ್ ದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಕೆಲ ಆತ್ಮೀಯ ಬಳಗದವರು ಬಂದಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ರವಿಬಸ್ರೂರ್ ರವರಿಗೆ, ಹೂಗುಚ್ಚ ನೀಡಿ, ಹೂವಿನ ಹಾರ ಹಾಕಿ, ಶಾಲು ಹೊದಿಸಿ ಮತ್ತು , ಹಣ್ಣಿನ ಬುಟ್ಟಿ ಹಾಗೂ ಸ್ಮರಣ ಫಲಕ ನೀಡಿ ಸಾಂಪ್ರದಾಯಿಕ ಶೈಲಿಯಲ್ಲಿ ಸನ್ಮಾನಿಸಲಾಯಿತು. ಸ್ಥಳೀಯ ಪ್ರತಿಭೆಗಳು ಕರವೊಕೆಯಲ್ಲಿ ಸುಮಧುರ ಕನ್ನಡ / ಹಿಂದಿ ಚಿತ್ರ ಗೀತೆ ಗಳನ್ನು ಹಾಡಿ ಸಂಗೀತ ಪ್ರೇಮಿಗಳನ್ನು ಮನರಂಜಿಸಿದರು. ಗಾಯಕರ ಉತ್ಸಾಹ ಮತ್ತು ಉಲ್ಲಾಸದ ಪ್ರತಿಭೆ ಯನ್ನು ಕಂಡು, ಇವರಿಂದ ಸಂಗೀತ ಆಲ್ಬಮ್ ಅನ್ನು ಮಾಡಬಹುದಲ್ವ ಎಂದು ಸ್ಪಂದನ ಮಸ್ಕತ್ ರವರಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಇದಕ್ಕೆ ತಡ ಮಾಡದೆ, ಸ್ಪಂದನ ಮಸ್ಕತ್ ಬಳಗದವರು ಕಾರ್ಯಕ್ರಮಕ್ಕೆ ಬೇಕಾದ ಆಡಿಷನ್ ಸ್ಥಳ, ರೆಕಾರ್ಡಿಂಗ್, ಇತ್ಯಾದಿ ವ್ಯವಸ್ಥೆಗಳನ್ನು ಮಾಡಿಕೊಟ್ಟರು. ರಾತ್ರೋರಾತ್ರಿ ಹಾಡಿನ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿ, ಆಡಿಶನ್ ನಡೆಸಿ ಗಾಯಕರನ್ನು ಆಯ್ಕೆ ಮಾಡಿಕೊಂಡು ಕೇವಲ 3 ದಿನ 4 ಗಂಟೆ ಮತ್ತು 20 ನಿಮಿಷಗಳಲ್ಲಿ ಆಲ್ಬಮ್ ಅನ್ನು ರೆಕಾರ್ಡ್ ಮಾಡಿದರು. ಶರತ್, ನವೀನ್ ಆಚಾರ್ಯ ಮತ್ತು ನಿರಂಜನ್ ಅವರು ಗಿಟಾರ್, ತಬಲ ಮತ್ತು ಸಾಹಿತ್ಯದೊಂದಿಗೆ ಸಹಾಯ ಮಾಡಿದರು. ಆಲ್ಬಮ್ ಬಿಡುಗಡೆ ಸಮಾರಂಭವನ್ನು ಫೇಸ್ಬುಕ್ನಲ್ಲಿ ನೇರ ಪ್ರಸಾರ ಮಾಡಲಾಯಿತು.

ನಿರೀಕ್ಷೆಯಂತೆ ಸುಮಾರು 35-40ರಷ್ಟು ಗಾಯಕರು ಆಡಿಷನ್ಗಾಗಿ ಬಂದಿದ್ದರು ಅವರಲ್ಲಿ 20 ಗಾಯಕರು ಆಯ್ಕೆಯಾದರು. ಇವರೆಲ್ಲರಿಗೂ ಕನ್ನಡ / ತುಳು ಸಂಗೀತದ ಆಲ್ಬಮ್ ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಯಿತು.

ಪ್ರಮುಖರಾಗಿ, ಸಾಕ್ಷಿ ಭಾಗವತ್, ಸುಮನ ಶಶಿಧರ್, ಕಿಶನ್ ಉದ್ಯಾವರ್, ರವಿ ಪ್ರಕಾಶ್, ಪ್ರೇಮಾ ಉಮೇಶ್, ರಿಯಾ ಕಿರಣ್, ಸಾತ್ವಿಕ್ ಮತ್ತು ಲಕ್ಷ್ಮಿ ವೆಂಕಟೇಶ್, ವಿಜಯ್ ಸಾಲ್ಯಾನ್, ರಾಜ್ ಸನಿಲ್, ಅನನ್ಯಾ ಮತ್ತು ಅನುಪಮಾ ಪ್ರಸಾದ್, ನಿಶಾ ಅನಿಲ್ ಮತ್ತು ಪಾವನ ಎನ್. ಶೆಟ್ಟಿ. ಇವರೊಂದಿಗೆ ಪ್ರತಿಭಾವಂತ ಮಕ್ಕಳು ಮತ್ತು ಮಹತ್ವಾಕಾಂಕ್ಷೀ ಗಾಯಕರು, ಅಂದರೆ. ಪ್ರವೀತ್ ಮತ್ತು ಪ್ರಣೀತ್ ಪ್ರಭಾಕರ್, ಸ್ಪರ್ಶ ಶೆಟ್ಟಿ, ಮತ್ತು ಅಯತಿ ಹಾಗು ಸ್ಪಂದನ ಮಸ್ಕತ್ನ ಅಧ್ಯಕ್ಷರಾದ ಪ್ರಕಾಶ್ ನಾಯ್ಕ್ ಕೂಡಾ ಕೋರಸ್ ಗಾಯಕರಾಗಿ ಭಾಗವಹಿಸಿದರು.

ನಿರ್ಮಾಣ ತಂಡದಲ್ಲಿ ರವಿ ಬಸ್ರೂರ್ , ವಿಜಯ್ ಕುಮಾರ್, ಪ್ರಕಾಶ್ ನಾಯ್ಕ್, ರಿಯಾಜ್ ಬಿ.ಎಚ್., ನಾಗೇಶ್ ಶೆಟ್ಟಿ ಮತ್ತು ಉಮೇಶ್ ಬಂಟ್ವಾಳ ರವರುಗಳು ಜವಬ್ದಾರಿ ವಹಿಸಿಕೊಂಡಿದ್ದರು.

ಸಂವಾದದ ಸಮಯದಲ್ಲಿ, ರವಿ ಬಸ್ರೂರ್ ರವರು, ತಮ್ಮ ಜೀವನದ ಅನುಭವದ ಕಥೆಯನ್ನು ಗಾಯಕರು ಮತ್ತು ಸದಸ್ಯರಿಗೆ ಸೊಗಸಾಗಿ ಮನಮುಟ್ಟುವಂತೆ ಹೇಳಿದರು. ಸಮಾಜದಲ್ಲಿ ಹೊಸ ಬದಲಾವಣೆಯನ್ನು ತರಲು ವಿಭಿನ್ನವಾಗಿ ಏನಾದರೂ ಮಾಡಲು ಅವರ ಮಾತುಗಳು ಪ್ರೇರೇಪಿಸುವಂತಿತ್ತು.

ಯಾರೂ ಊಹಿಸಲಾಗದ, ಅತಿ ಕಡಿಮೆ ಸಮಯದಲ್ಲಿ ಸಂಗೀತ ಆಲ್ಬಮ್ ಬಿಡುಗಡೆ ಮಾಡುವ ಮುಖಾಂತರ ಮಸ್ಕತ್ ಸಂಗೀತ ಪ್ರೇಮಿಗಳ ಮನಗೆದ್ದ ರವಿ ಬಸ್ರೂರ್ ರವರ ಈ ಮಹತ್ಕಾರ್ಯಕ್ಕೆ ಸ್ಪಂದನ ಮಸ್ಕತ್ ತಂಡ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿತು.

“ಎಲ್ಲಾ ಮೊಗ್ಗುಗಳು ಹೂವಾಗುವುದಿಲ್ಲ ಮತ್ತು ಎಲ್ಲಾ ಹೂಗಳು ಹಣ್ಣುಗಳಾಗಿ ಮಾರ್ಪಾಡಾಗುವುದಿಲ್ಲ” ಎನ್ನುವ ಕಟುಸತ್ಯ ಅರಿತಿರುವ ಸ್ಪಂದನ ಮಸ್ಕತ್ ತಂಡವು. ಕಳೆದ ಕೆಲವು ವರ್ಷಗಳಲ್ಲಿ, ನಿಜವಾದ ಅರ್ಹ ಕಲಾವಿದ ಪ್ರತಿಭೆಗಳನ್ನು ಗುರುತಿಸಿ ಅವರು, ಸಂಗೀತಗಾರರು, ವಾದ್ಯಗಾರರು ಅಥವಾ ಯಕ್ಷಗಾನ ಮುಂತಾದ ಕಲೆಗಳ ಕಲಾವಿದರು ಅವರ್ಯಾರೆ ಆಗಿದ್ದರು ಅವರಿಗೆ ಅವಕಾಶ ಮತ್ತು ಅಂತರರಾಷ್ಟ್ರೀಯ ಮಟ್ಟದ ವೇದಿಕೆ ಯನ್ನು ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ, . ಇದಲ್ಲದೆ, ಸ್ಪಂದನ ಮಸ್ಕತ್ ರಕ್ತದಾನ, ಚಾರಿಟಿ, ಅಗತ್ಯವಿರುವ ಆರ್ಥಿಕ ದುರ್ಬಲತೆ ಹೊಂದಿದ ಜನರಿಗೆ ಹಣ ಸಹಾಯ ಮಾಡುವಂತಹ ವಿವಿಧ ಮಾನವೀಯ ಕಾರ್ಯಗಳಲ್ಲಿ ತೊಡಗಿಕೊಂಡಿದೆ.

ಕಳೆದ ಕೆಲವು ವರ್ಷಗಳಲ್ಲಿ ಸ್ಪಂದನ ಮಸ್ಕತ್ ಪ್ರಸ್ತುತ ಪಡಿಸಿದ ಕೆಲ ಪ್ರಮುಖ ಕಾರ್ಯಕ್ರಮಗಳು:
2011 ರಲ್ಲಿ “ಸಂಗೀತ ಲಹರಿ” – ರವೀಂದ್ರ ಪ್ರಭು ಮತ್ತು ಅನಿತಾ ಡಿಸೋಜ ರವರಿಂದ,
2012 ರಲ್ಲಿ “ಯಾದೊಂಕಿ ಬಾರಾತ್ (ನೆನಪಿಂನಂಗಳ )”. ಪದ್ಮಭೂಷಣ ಡಾ ರಾಜ್ ಕುಮಾರ್ ಹಾಗು ಪದ್ಮಶ್ರೀ ಮೊಹಮ್ಮದ್ ರಫಿ ಯವರ ನೆನಪಿನಲ್ಲಿ – ಟಾಗೋರ್ ದಾಸ್, ನವೀನ್ ಕೊಪ್ಪ ಮತ್ತು ಸಂಗೀತ ಬಾಲಚಂದ್ರನ್ ರವರಿಂದ,
2013 ರಲ್ಲಿ ರಾಗ್ ಅನುರಾಗ್ – ಸುನಿತಾ ಮತ್ತು ಶ್ರೀನಾಥ್ ಅವರೊಂದಿಗೆ ವಿಶೇಷ ಮ್ಯಾಜಿಕ್ ಶೋ ಓಂ ಗಣೇಶ್ ರವರಿಂದ.
ಹಾಗೂ ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್ ಅವರ ಖಾಸಗಿ ಭೇಟಿಯಲ್ಲಿ, ಒಂದು ಸಂಗೀತ ಕಚೇರಿ ಹಾಗೂ ಸನ್ಮಾನ ಸಮಾರಂಭ.
2014 ರಲ್ಲಿ ಮೆಗಾ ” ರಕ್ತದಾನ ಶಿಬಿರ”
2015 ರಲ್ಲಿ “ಶಾಮ್-ಏ -ಸರ್ಗಮ್” – ಪ್ರಾರ್ಥನಾ ಚೌಧರಿ ಮತ್ತು ನವೀನ್ ಕುಮಾರ್ ರವರಿಂದ,
2017 ರಲ್ಲಿ “ಯೆ ಶಾಮ್ ಮಸ್ತಾನಿ” – ಶ್ರೀ ರಾಮ್ ಕಾಸರ್, ಐಶ್ವರ್ಯಾ ರಂಗನಾಥನ್ ಮತ್ತು ಶ್ರೀ ರಕ್ಷಾ (ZEE ಕನ್ನಡ ಸಾ ರೇ ಗ ಮ ಪ ಫ್ಯೆನಲಿಸ್ಟ್ಸ್) ರೊಂದಿಗೆ.

ವರದಿ: ಶ್ರೀ ರಂಗನಾಥ್
Pic: Suresh Hegde

Click here for Photo Album


Spread the love