ಇನ್ನೆಷ್ಟು ಅತ್ಯಾಚಾರ ಸಹಿಸಬೇಕು..? ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಎಸ್ ಐ ಓ ಪ್ರತಿಭಟನೆ

Spread the love

ಇನ್ನೆಷ್ಟು ಅತ್ಯಾಚಾರ ಸಹಿಸಬೇಕು..? ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಎಸ್ ಐ ಓ ಪ್ರತಿಭಟನೆ

ಉಡುಪಿ : ಜಮ್ಮು ಕಾಶ್ಮೀರದ ಕಟ್ವಾ ಜಿಲ್ಲೆಯಲ್ಲಿ ಎಂಟರ ಹರೆಯದ ಆಸೀಫಾಳ ಅತ್ಯಾಚಾರ ಮತ್ತು ಬರ್ಬರವಾಗಿ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಹಾಗೂ ಊನಾವೂ ಅತ್ಯಾಚಾರ ಪೀಡಿತೆಗೆ ನ್ಯಾಯ ಕೋರಿ ಇಂದು ಉಡುಪಿಯ ಜಾಮೀಯ ಮಸೀದಿ ವಠಾರದಲ್ಲಿ “ಜೆಸ್ಟೀಸ್ ಫಾರ್ ಆಸಿಫಾ ಜೆಸ್ಟೀಸ್ ಫಾರ್ ಊನಾವೋ ವಿಕ್ಟೀಮ್” ಎಂಬ ಘೋಷ ವಾಕ್ಯದೊಂದಿಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ವತಿಯಿಂದ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಈ ಸಭೆಯಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಲಾಯಿತು ಹಾಗೂ ಇತ್ತೀಚೆಗೆ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಕೋಮು ಭಾವನೆ ಕೆರಳಿಸಿ ಅನ್ಯ ಧರ್ಮದವರು ಎಂಬ ಕಾರಣಕ್ಕೆ ಹಲ್ಲೆಗಳು ವ್ಯಾಪಕವಾಗುತ್ತಿದೆ. ಅದು ಇತ್ತೀಚಗೆ ಅತ್ಯಾಚಾರದಂತಹ ಹೇಯ ಕೃತ್ಯದ ಕಡೆಗೆ ಮುಖ ಮಾಡಿರುವುದು ಅತ್ಯಂತ ಅಮಾನವೀಯ. ಆಸಿಫಾಳೊಂದಿಗೆ ನಡೆದ ದುಷ್ಕೃತ್ಯ ಇನ್ನು ಯಾವುದೇ ಪುಟಣಿಗಳೊಂದಿಗೆ ನಡೆಯದಂತೆ ಸರಕಾರಗಳು ರಾಜಕೀಯ, ಧರ್ಮ ಭೇದವಿಲ್ಲದೆ ಕ್ರಮಗೈಗೊಳ್ಳೇಕೆಂದು ಎಸ್ ಐ ಓ ಉಡುಪಿ ಜಿಲ್ಲೆಯ ಕಾರ್ಯಕರ್ತರು ಆಗ್ರಹಿಸಿದರು.

ಉನಾವುನಲ್ಲಿ ಅತ್ಯಾಚಾರದ ಆರೋಪ ಹೊತ್ತಿರುವ ಶಾಸಕ ಕುಲ್ ದೀಪ್ ಸಿಂಗ್ ಸಿಂಗಾರಿಯನ್ನು ರಕ್ಷಿಸಲು ಉತ್ತರ ಪ್ರದೇಶ ಸರ್ಕಾರ ಪ್ರಯತ್ನಿಸುತ್ತಿದ್ದು ಇಂತಹ ದುಷ್ಕೃತ್ಯದಲ್ಲಿ ಪಾಲ್ಗೊಂಡ ಶಾಸಕನನ್ನು ರಾಜಕೀಯಕರಣ ಗೊಳಿಸದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ ಐ ಓ ಆಗ್ರಹಿಸಿತು.

ಇವತ್ತು ಅತ್ಯಾಚಾರವನ್ನು ಕೋಮು ಧ್ರುವೀಕರಣ ಗೋಳಿಸಿ ಇಂತಹ ದುಷ್ಕೃತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಮರ್ತಿಸುವಂತಹ ಕೆಲವು ವಿಕ್ರತ ಮನಸ್ಥಿತಿಗಳು ವ್ಯಪಕವಾಗುತ್ತಿದೆ ಇದು ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಅತ್ಯಂತ ವಿಷಾದನೀಯ ಸಂಗತಿಯಾಗಿದ್ದು ಇಂತಹ ಮನಸ್ಥಿತಿಯನ್ನು ಎಸ್ ಐ ಓ ಅತ್ಯಂತ ಕಠಿಣ ಶಬ್ದಗಳಿಂದ ಖಂಡಿಸುತ್ತದೆಯೆಂದು ಪ್ರತಿಭಟನೆಯಲ್ಲಿ ಎಸ್ ಐ ಓ ಕಾರ್ಯಕರ್ತರು ಕರೆನೀಡಿದರು.

ಈ ಸಂದರ್ಭದಲ್ಲಿ ಎಸ್ ಐ ಓ ನ ಜಿಲ್ಲಾಧ್ಯಾಕ್ಷರಾದ ಯಾಸೀನ್ ಕೋಡಿಬೆಂಗ್ರೆ, ಜಿಲ್ಲಾ ಕಾರ್ಯದರ್ಶಿ ಅಫ್ವಾನ್ ಹೂಡೆ, ಸದಸ್ಯರಾದ ಫೈಸಲ್ ಮಲ್ಪೆ, ಮಹಮ್ಮದ್ ಶಾರೂಕ್, ಫಾಝೀಲ್ ಉಡುಪಿ, ಬಿಲಾಲ್ ಮಲ್ಪೆ, ಝುಬೇರ್ ಮಣಿಪಾಲ್, ಜಮಾಅತೆ ಇಸ್ಲಾಮೀ ಹಿಂದ್ ಪ್ರೋ ಅಬ್ದುಲ್ ಅಝೀಜ್, ಮಹಮ್ಮದ್ ಝಕೀ, ಯಾಸೀನ್ ಮನ್ನ, ರಾಹೀಲ್, ಫರ್ಹಾನ್ ಶಾನ್ ಹೂಡೆ, ಝುನೈದ್ ಸಾಸ್ತಾನ್ ಮುಂತಾದವರು ಉಪಸ್ಥಿತರಿದ್ದರು.


Spread the love