ಉಚ್ಚಿಲದಲ್ಲಿ ಆರೋಗ್ಯ ಕಾರ್ಯಕರ್ತೆಗೆ ಬೆದರಿಕೆ – ಪೊಲೀಸ್ ಠಾಣೆಗೆ ದೂರು

Spread the love

ಉಚ್ಚಿಲದಲ್ಲಿ ಆರೋಗ್ಯ ಕಾರ್ಯಕರ್ತೆಗೆ ಬೆದರಿಕೆ – ಪೊಲೀಸ್ ಠಾಣೆಗೆ ದೂರು

ಉಡುಪಿ: ಒಂದೆಡೆ ಕೋವಿಡ್-19 ಭಯ, ಇನ್ನೊಂದೆಡೆ ನಿತ್ಯ ಸುದ್ದಿಯಾಗುತ್ತಿರುವ ಹಲ್ಲೆ, ಬೆದರಿಕೆ ಪ್ರಕರಣಗಳು. ಈ ಭಯದ ಮಧ್ಯೆಯೂ ಗಲ್ಲಿಗಲ್ಲಿಗೆ ಹೋಗಿ ಸಮೀಕ್ಷೆ ಮಾಡಬೇಕಾದ ಸ್ಥಿತಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರದ್ದು.

ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಬುಧವಾರ ಉಚ್ಚಿಲದಲ್ಲಿ ಆರೋಗ್ಯ ಕಾರ್ಯಕರ್ತೆಗೆ ಕಿರಿಕಿರಿ ಉಂಟು ಮಾಡಿದ ಘಟನೆ ನಡೆದಿದೆ. ಉಚ್ಚಿಲ ಆರೋಗ್ಯ ಉಪಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಶ್ಯಾಮಲಾ ಎಂಬವರು ಪಕ್ಕದ ಮನೆಯವರಿಗೆ ಪಕ್ಕದ ಮನೆಯವರಿಗೆ ಬುದ್ದಿವಾದ ಹೇಳಿದ್ದೇ ತಪ್ಪಾಗಿದೆ.

ಶ್ಯಾಮಲಾ ಅವರ ನೆರೆಮನೆಯ ಮುಮ್ತಾಜ್ ಅವರ ಮನೆಗೆ ಪ್ರತಿನಿತ್ಯ ಎಂಬಂತೆ ಅತಿಥಿಗಳು ಬರುತ್ತಿದ್ದರು ಎನ್ನಲಾಗಿದ್ದು, ಕೋರೋನಾ ಇದೆ ಎಚ್ಚರವಹಿಸಿ ಮನೆಗೆ ಹೊರಗಿನ ಜನರು ಬಂದ್ರೆ ಅಪಾಯ ಅಂತ ಎಚ್ಚರಿಸಿದ್ದಕ್ಕೆ ಮಮ್ತಾಜ್ ಮತ್ತು ಆಕೆಯ ಸಹೋದರ ಮನ್ಸೂರ್ ನಿಂದ ಶ್ಯಾಮಲಾ ಅವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಈ ಕುರಿತು ಶ್ಯಾಮಲಾ ಅವರು ಪಡುಬಿದ್ರೆ ಠಾಣೆಗೆ ದೂರು ನೀಡಿದ್ದು ಪಡುಬಿದ್ರೆ ಪೊಲೀಸರು ಮುಮ್ತಾಜ್ ಕುಟುಂಬದವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ.


Spread the love