ಉಡುಪಿಯಲ್ಲಿ ಪೋಲಿಸರಿಗೆ ಕೊರೋನಾ ; ವಾಸವಿದ್ದ ವಸತಿಗೃಹ, ಪೊಲೀಸ್ ಠಾಣೆ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಣೆ

Spread the love

ಉಡುಪಿಯಲ್ಲಿ ಪೋಲಿಸರಿಗೆ ಕೊರೋನಾ ; ವಾಸವಿದ್ದ ವಸತಿಗೃಹ, ಪೊಲೀಸ್ ಠಾಣೆ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಣೆ

ಉಡುಪಿ: ಉಡುಪಿ ಜಿಲ್ಲೆಯಯಲ್ಲಿ 3 ಪೊಲೀಸರಿಗೆ ಕೊರೋನಾ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರುಗಳು ಪೊಲೀಸರು ವಾಸವಿದ್ದ ಕ್ವಾಟ್ರಸ್ ಗಳನ್ನು ಜಿಲ್ಲಾಡಳಿತ ಕಂಟೈನ್ಮೆಂಟ್ ಪ್ರದೇಶವಾಗಿ ಮಾರ್ಪಡಿಸಿದೆ.

ಉಡುಪಿ ತಾಲೂಕಿನ ಗರಡಿಮಜಲು ಎಂಬಲ್ಲಿ ಇರುವ ಪೊಲೀಸ್ ವಸತಿ ಗೃಹದಲ್ಲಿ ಅಜೆಕಾರಿನ ಪೊಲೀಸ್ ವಾಸ್ತವ್ಯವಿದ್ದರು ಆದ್ದರಿಂದ ಪೊಲೀಸ್ ವಸತಿ ಗೃಹದ ಬಿ ಸಿ ಬ್ಲಾಕ್ ಕ್ಲೋಸ್ ಡೌನ್ ಮಾಡಲಾಗಿದೆ. ಅಲ್ಲದೆ ಇಲ್ಲಿರುವ 7 ಮನೆಗಳ ನಿವಾಸಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು 14 ದಿನಗಳ ಕಾಲ ಮನೆ ಬಿಟ್ಟು ಹೊರ ಹೋಗದಂತೆ ಆದೇಶ ನೀಡಲಾಗಿದೆ. ಮತ್ತು ವಸತಿ ಗೃಹದ ಒಂದು ಕಿಲೋಮೀಟರ್ ಸುತ್ತಳತೆಯಲ್ಲಿ ಬಫರ್ ಝೋನ್ ಘೋಷಣೆ ಮಾಡಲಾಗಿದೆ. ಅಲ್ಲದೆ ಕಾರ್ಕಳ ಹಾಗೂ ಬ್ರಹ್ಮಾವರದ ಪೊಲೀಸ್ ಸಿಬಂದಿ ವಾಸವಾಗಿದ್ದ ಪ್ರದೇಶಗಳಿಗೂ ಕೂಡ ಪ್ರವೇಶ ನಿರ್ಭಂಧಿಸಲಾಗಿದೆ.

ಭಾನುವಾರ ಸಂಜೆ ಕಾರ್ಕಳ ಪೊಲೀಸ್ ಸಿಬಂದಿ ವಾಸವಾಗಿದ್ದ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲನೆ ನಡೆಸಿದರು. ಅಲ್ಲದೆ ಅಧಿಕಾರಿಗಳಿಗೆ ಹಲವು ಸಲಹೆಗಳನ್ನು ನೀಡಿದರು. ಕಾರ್ಕಳದಲ್ಲಿರುವ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಕಾರ್ಕಳ ಗ್ರಾಮಾಂತರ, ನಗರ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಇರುವ ಪ್ರದೇಶವನ್ನು ಕಂಟೈನ್ ಮೆಂಟ್ ಝೋನ್ ಆಗಿ ಘೋಷಣೆ ಮಾಡಿದ್ದಾರೆ.


Spread the love