ಉಡುಪಿಯಲ್ಲಿ 3ನೇ ಕರಾವಳಿ ಕಿರುಚಿತ್ರೋತ್ಸವ-2018 ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆ- ಪ್ರಶಸ್ತಿ ಪ್ರದಾನ

Spread the love

ಉಡುಪಿಯಲ್ಲಿ 3ನೇ ಕರಾವಳಿ ಕಿರುಚಿತ್ರೋತ್ಸವ-2018 ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆ- ಪ್ರಶಸ್ತಿ ಪ್ರದಾನ

ಉಡುಪಿ: ಯುನಿಸೆಫ್ ಪ್ರಸಾರ ಭಾರತಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್ (ರಿ.) ಕಟಪಾಡಿ-ಉಡುಪಿ, ಕರ್ನಾಟಕ ಚಲನಚಿತ್ರ ಅಕಾಡೆಮಿ (ರಿ.) ಬೆಂಗಳೂರು, ಬಡಗುಬೆಟ್ಟು ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಉಡುಪಿ ಇವರ ವತಿಯಿಂದ 3ನೇ ಕರಾವಳಿ ಕಿರುಚಿತ್ರೋತ್ಸವ-2018 ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆ- ಪ್ರಶಸ್ತಿ ಪ್ರದಾನ ಸಮಾರಂಭ ಜೂ. 24ರಂದು ಬೆಳಗ್ಗೆ 9.00ರಿಂದ ಮಧ್ಯಾಹ್ನ1.00ರತನಕ ಉಡುಪಿಯ ಬಡಗುಬೆಟ್ಟು ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಜಗನ್ನಾಥ ಸಭಾಭವನದಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ-9.00ಕ್ಕೆ ಉದ್ಯಮಿ ಸಖಾರಾಮ್ ಶೆಟ್ಟಿ ದೆಂದೂರು ಕಿರುಚಿತ್ರೋತ್ಸವವನ್ನು ಉದ್ಘಾಟಿಸಲಿರುವರು. ಹಿರಿಯ ಚಿಂತಕ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆವಹಿಸುವರು.

ಮುಖ್ಯಅತಿಥಿಗಳಾಗಿ ಉಡುಪಿಯ ಉದ್ಯಮಿ ಅರ್ನಾಲ್ಡ್ ಡಿಸಿಲ್ವ ಮದರ್ ಕೇರ್, ಶಿರ್ವ ರೋಟರಿ ಕ್ಲಬ್ ಅಧ್ಯಕ್ಷ ದಯಾನಂದ್ ಶೆಟ್ಟಿ ದೆಂದೂರು, ಬೆಳ್ಳಿಸಾಕ್ಷಿ ಉಡುಪಿ ಜಿಲ್ಲಾ ಘಟಕದ ನಿಕಟಪೂರ್ವ ಸಂಚಾಲಕ ಪ್ರೇಮಾನಂದ ಕಲ್ಮಾಡಿ, ಕತ್ತಲೆಕೋಣೆ ಚಿತ್ರ ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ, ಪ್ರೈಮ್ ಟಿವಿ ನಿರ್ದೇಶಕ ರೂಪೇಶ್ ವಿ.ಕಲ್ಮಾಡಿ,ಯುವ ಉದ್ಯಮಿ ನವೀನ್ ಅಮೀನ್ ಶಂಕರಪುರ, ಟೈಮ್ಸ್ ಆಫ್ ಕುಡ್ಲ ತುಳುಪತ್ರಿಕೆಯ ಪ್ರಧಾನ ವ್ಯವಸ್ಥಾಪಕಿ ಯಶೋಧ ಕೇಶವ್ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ರಾಜ್ಯಪ್ರಶಸ್ತಿ ವಿಜೇತ ನೃತ್ಯನಿರ್ದೇಶಕ ವೃಜ ಕಿಶೋರ್ ಆಚಾರ್ಯ ಉಡುಪಿ ಅವರನ್ನು ಸನ್ಮಾನಿಸಲಾಗುವುದು.

ಮಧ್ಯಾಹ್ನ:12.00ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಚೇತನ್ ಕುಮಾರ್ ಶೆಟ್ಟಿ ಬ್ರಹ್ಮಾವರ ಪ್ರಶಸ್ತಿ ವಿತರಣೆ ಮಾಡುವರು. ಬಡಗುಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆವಹಿಸುವರು. ಮುಖ್ಯಅತಿಥಿಗಳಾಗಿ ಚಲನಚಿತ್ರನಟ ಪೃಥ್ವಿ ಅಂಬರ್, ಚಲನಚಿತ್ರನಟಿ ಶಿಲ್ಪಾ ಸುವರ್ಣ, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ಚಲನಚಿತ್ರ ನಿರ್ದೇಶಕರಾದ ಕೃಷ್ಣಪ್ರಸಾದ್ ಬೆಂಗಳೂರು, ರಂಜಿತ್ ಸುವರ್ಣ, ಚಲನಚಿತ್ರನಟಿ ಜೆನಿಫರ್ ಸ್ನೇಹ, ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ರಮೀಝ ಹುಸೇನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಯುವಪ್ರತಿಭಾವಂತ ಸಿನೆಮಾಟೋಗ್ರಾಫರ್ ಭುವನೇಶ್ ಪ್ರಭು ಹಿರೇಬೆಟ್ಟು ಅವರಿಗೆ ಯುವಸಾಧನಾ ಪುರಸ್ಕಾರ ನೀಡಿ ಗೌರವಿಸಲಾಗುವುದು.

10ನಿರ್ದೇಶಕರ 10 ಕಿರುಚಿತ್ರಗಳು: 3ನೇ ಕರಾವಳಿ ಕಿರುಚಿತ್ರೋತ್ಸವಕ್ಕೆ ಒಟ್ಟು 52 ಕಿರುಚಿತ್ರಗಳು ಪ್ರವೇಶಪಡೆದಿದ್ದು, ಅಂತಿಮವಾಗಿ 10ಮಂದಿ ಯುವ ನಿರ್ದೇಶಕರ 10 ಕಿರುಚಿತ್ರಗಳು ಸ್ಪರ್ಧೆಗೆ ಆಯ್ಕೆಯಾಗಿವೆ.
ಸತೀಶ್ ಎನ್ ನಿರ್ದೇಶನದ ನೈದಿಲೆ, ಪ್ರಶಾಂತ್ ಕುಲಾಲ್ ನಿರ್ದೇಶನದ ಸಾವಿನ ಮುಖ, ಸಂದೇಶ್ ಆಚಾರ್ಯ ನಿರ್ದೇಶನದ ಜಾತಿಪ್ರೀತಿ, ಎಚ್.ಭೀಮ್‍ರಾವ್ ನಿರ್ದೇಶನದ ಅನುಮಾನ, ಭುವನೇಶ್ ಪ್ರಭು ನಿರ್ದೇಶನದ ಶ್..ಮತ್ತೆ ಬರುವೆ, ಸಂದೀಪ್ ಕಾಮತ್ ನಿರ್ದೇಶನದ ಕೆ.ಫಾರ್ ಕರ್ತವ್ಯ, ಭವಿಷ್ ನಿರ್ದೇಶನದ ರಿಯಲ್ ಹೀರೋಸ್, ಆಸೀಫ್ ನಿರ್ದೇಶನದ ಅಣ್ತಮ್ಮ, ರಾಜೇಶ್ ಪಕ್ಕಲ ನಿರ್ದೇಶನದ ಉರ್ಲು, ನಿರ್ದೇಶನದ ಗುರುಪ್ರಸಾದ್ ನಾೈಕ್ ಕಲಾಕಾರ್ ಚಿತ್ರಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.


Spread the love