ಉಡುಪಿ ಎಸ್ಪಿ ಡಾ; ಅರುಣ್ ಕೆ ವರ್ಗಾವಣೆ, ಹರಿರಾಂ ಶಂಕರ್ ನೂತನ ಎಸ್ಪಿ

Spread the love

 ಉಡುಪಿ ಎಸ್ಪಿ ಡಾ; ಅರುಣ್ ಕೆ ವರ್ಗಾವಣೆ, ಹರಿರಾಂ ಶಂಕರ್ ನೂತನ ಎಸ್ಪಿ

ಉಡುಪಿ: ಉಡುಪಿ ಪೊಲೀಸ್ ಅಧೀಕ್ಷಕರಾಗಿದ್ದ ಡಾ. ಅರುಣ್ ಕೆ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ

ಉಡುಪಿ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹರಿರಾಂ ಶಂಕರ್ ಅವರನ್ನು ನೇಮಿಸಿದೆ. ಪ್ರಸ್ತುತ ಹರಿರಾಂ ಶಂಕರ್ ಅವರು ಗುಪ್ತಚರ ಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಉಡುಪಿ ಪೊಲೀಸ್ ಅಧೀಕ್ಷಕರಾಗಿದ್ದ ಡಾ. ಅರುಣ್ ಕೆ ಅವರು ಜಿಲ್ಲೆಯಲ್ಲಿ ದಕ್ಷ ಎಸ್ಪಿ ಎಂಬ ಹೆಸರಿಗೆ ಪಾತ್ರರಾಗಿದ್ದು ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದೆ ಕಟ್ಟುನಿಟ್ಟಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಸದ್ಯ ದಕ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಗಳನ್ನು ತಡೆಗಟ್ಟಲು ಇಂತಹ ಪೊಲೀಸ್ ಅಧೀಕ್ಷಕರ ಅಗತ್ಯತೆ ಇದೆ ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬಂದಿತ್ತು.

ನೂತನ ಎಸ್ಪಿ ಹರಿರಾಂ ಶಂಕರ್ ಅವರು ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಕುಂದಾಪುರ ಎಎಸ್ಪಿಯಾಗಿದ್ದರು. ಅಲ್ಲದ ಮಂಗಳೂರು ನಗರ ಡಿಸಿಪಿಯಾಗಿ, ಹಾಸನ ಜಿಲ್ಲಾ ಎಸ್ಪಿಯಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದರು.


Spread the love