ಉಡುಪಿ: ಕರ್ನಾಟಕ ಕಾರ್ಮಿಕ ವೇದಿಕೆಗೆ ವರ್ಷದ ಸಂಭ್ರಮ; ಅಂಬುಲೆನ್ಸ್ , ವಿಮಾ ಕಾರ್ಡ್ ಬಿಡುಗಡೆ

Spread the love

ಉಡುಪಿ: ಸಂಸ್ಥಾಪಕ ಅಧ್ಯಕ್ಷರಾದ ಎಚ್. ಬಿ. ನಾಗೇಶ್ ಸಾರಥ್ಯದ, ಜಿಲ್ಲಾಧ್ಯಕ್ಷ ರವಿ ಶೆಟ್ಟಿ ನೇತೃತ್ವದಲ್ಲಿ ಕರ್ನಾಟಕ ಕಾರ್ಮಿಕ ವೇದಿಕೆ ಉಡುಪಿ ಜಿಲ್ಲೆ ಇದರ ಪ್ರಥಮ ವಾರ್ಷಿಕ ಸಭೆಯು ದಿನಾಂಕ 22-02-2016 ರಂದು ಕಾರ್ಮಿಕರ ವೇದಿಕೆಯ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ನಡೆಯಿತು.

20160224-karnataka-karmika-vedike 20160224-karnataka-karmika-vedike-001 20160224-karnataka-karmika-vedike-002

ವಾರ್ಷಿಕೋತ್ಸವದ ಪ್ರಯುಕ್ತ ಕಾರ್ಮಿಕರಿಗೆ ಅಂಬುಲೆನ್ಸ್ ಸೇವೆಯನ್ನು ಉಡುಪಿ ನಗರ ಸಭಾ ಸದಸ್ಯರಾದ   ಸೆಲಿನಾ ಕರ್ಕಡ ಉದ್ಘಾಟಿಸಿದರು. ಉಡುಪಿ ಕಾರ್ಮಿಕರಿಗಾಗಿ ಇಲಾಖಾ ವತಿಯಿಂದ ಹೈಟೆಕ್ ಆಸ್ಪತ್ರೆ ಉಡುಪಿ ಇವರ ಸಹಯೋಗದಿಂದ ಉಚಿತ ಆರೋಗ್ಯ ಕಾರ್ಡನ್ನು ವಿತರಿಸಲಾಯಿತು. ಅದೇ ರೀತಿ ಸರಕಾರದಿಂದ ಸಿಗುವ ಕಾರ್ಮಿಕ ವಿಮಾ ಕಾರ್ಡ್‍ನ್ನು ಸಹ ವಿತರಿಸಲಾಯಿತು.

ಉಡುಪಿ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ರಾಮ್ ಮೂರ್ತಿಯವರು ಕಾರ್ಮಿಕರಿಗೆ ಸರಕಾರದಿಂದ ಸಿಗುವಂತಹ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವುದರ ಮೂಲಕ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು   ಚಂದ್ರಿಕಾ ಶೆಟ್ಟಿ,  ಮುಖ್ಯ ಅತಿಥಿಗಳಾಗಿ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಚಿತ್ರರಂಜನ್‍ದಾಸ್, ಶಾರದಾ ಆಟೋ ಯೂನಿಯನ್ ಅಧ್ಯಕ್ಷರಾದ ಮಣೀಂದರ್ ಚಕ್ರತೀರ್ಥ, ಕಾರ್ಮಿಕ ವೇದಿಕೆಯ ಪದಾಧಿಕಾರಿಗಳಾದ, ರಾಘವೇಂದ್ರ ಕುಂದರ್, ಚಂದ್ರ ಪೂಜಾರಿ, ಹಾಗೂ ಸುರೇಶ್ ಸೇರಿಗಾರ್, ರೋಹಿತ್ ಕರಂಬಳ್ಳಿ ಇತರ ಗಣ್ಯರು ಉಪಸ್ಥಿತರಿದ್ದರು.


Spread the love