ಉಡುಪಿ : ಕ್ರೇನ್ ತೊಟ್ಟಿಲಿನಿಂದ ಉರುಳಿಬಿದ್ದು ವ್ಯಕ್ತಿ ಮೃತ್ಯು, ಮಹಿಳೆ ಗಂಭೀರ 

Spread the love

ಉಡುಪಿ : ಕ್ರೇನ್ ತೊಟ್ಟಿಲಿನಿಂದ ಉರುಳಿಬಿದ್ದು ವ್ಯಕ್ತಿ ಮೃತ್ಯು, ಮಹಿಳೆ ಗಂಭೀರ 

ಉಡುಪಿ: ಕ್ರೇನ್ ಬಳಸಿಕೊಂಡು, ಅದರ ತೊಟ್ಟಿಲಿನಲ್ಲಿ ಮನೆಯ ಸ್ಲಾಬ್ ಸೋರಿಕೆ ಸ್ಥಳವನ್ನು ಪರೀಕ್ಷಿಸಲು ಹೋಗಿದ್ದ ಇರ್ವರು ತೊಟ್ಟಿಲು ವಾಲಿಕೊಂಡಿದರಿಂದ ಇರ್ವರು ನೆಲಕ್ಕುರುಳಿ ಬಿದ್ದಿರುವ ದುರ್ಘಟನೆ ಕೋರ್ಟ್ ಹಿಂಬಾಗ ರಸ್ತೆಯ ಲೋಕೋಪಯೋಗಿ ಇಲಾಖೆ ಕಛೇರಿ ಸಮೀಪದಲ್ಲಿ ಶನಿವಾರ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಫ್ರಾನ್ಸಿಸ್ ಫುರ್ಟಾಡೊ (65) ಎಂದು ಗುರುತಿಸಲಾಗಿದೆ. ಕೆಲಸದಾಕೆ ಕಲ್ಮಾಡಿ ಸಮೀಪದ ನಿವಾಸಿ ಶಾರದಾ (35) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಫ್ರಾನ್ಸಿಸ್ ಫುರ್ಟಾಡೊ ಅವರು ತಮ್ಮ ಸಹೋದರನ ಮನೆಯಲ್ಲಿ ಸ್ಲ್ಯಾಬ್ ಸೋರಿಕೆಯಾಗುತ್ತಿದ್ದು ಇದರ ಪರೀಕ್ಷೆಗಾಗಿ ಕ್ರೇನ್ ಕರೆಸಿದ್ದು ಅದರ ತೊಟ್ಟಿಲಿ(ಬಕೆಟ್)ನಿಂದ ಕೆಲಸದಾಕೆ ಶಾರದಾ ಅವರೊಂದಿಗೆ ಮೇಲೆರಿದ್ದು ಈ ವೇಳೆ ಕ್ರೇನ್ ತೊಟ್ಟಿಲಿನ ಒಂದು ಕಡೆಯ ಬೆಲ್ಟ್ ತುಂಡಾಗಿ ವಾಲಿಕೊಂಡಿದ್ದು ಇಬ್ಬರೂ ಕೂಡ ಆಯತಪ್ಪಿ ನೆಲಕ್ಕುರಿಳಿದ್ದಾರೆ ಎನ್ನಲಾಗಿದೆ.

ಘಟನೆಯ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು ತಮ್ಮ ಅಂಬುಲೆನ್ಸ್ ನಲ್ಲಿ ಇಬ್ಬರನ್ನು ಕೂಡ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಗೆ ತರುವ ದಾರಿಯಲ್ಲೆ ಫ್ರಾನ್ಸಿಸ್ ಫುರ್ಟಾಡೊ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕೆಲಸದಾಕೆ ಶಾರದಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಆಕೆಯ ಪರಿಸ್ಥಿತಿ ಕೂಡ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಘಟನೆ ನಡೆದು ಇಬ್ಬರೂ ಕೂಡ ಬಿದ್ದು ನರಳಾಡುತ್ತಿದ್ದರೂ ಕ್ರೇನ್ ಚಾಲಕ ಗಾಯಾಳುಗಳ ರಕ್ಷಣೆಗೆ ಬಾರದೆ ಕ್ರೇನ್ ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Subscribe
Notify of

0 Comments
Inline Feedbacks
View all comments