ಉಡುಪಿ: ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ವಿರುದ್ದ ಕರ್ನಾಟಕ ಕಾರ್ಮಿಕರ ವೇದಿಕೆ ಪ್ರತಿಭಟನೆ

Spread the love

ಉಡುಪಿ: ಇಲ್ಲಿನ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ, ಸಿಬಂದಿ ಧೋರಣೆ, ವೈಧ್ಯರ ಅಲಭ್ಯತೆ ಬಗ್ಗೆ ಕರ್ನಾಟಕ ಕಾರ್ಮಿಕರ ವೇದಿಕೆಯು ಸುಭಾಸ್ ನಗರ, ರೋಟರಾಕ್ಟ್, ನಾಗರಿಕರ ವೇದಿಕೆ ಶಾರದ ಆಟೊ ಯೂನಿಯನï ಸಂಘಗಳ ಸಹಕಾರದಲ್ಲಿ  ಜಿಲ್ಲಾ ಆಸ್ಪತ್ರೆಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

karnatak-karmika-vedike-29-01-2016 (2)

ಕಾರ್ಮಿಕ ವೇದಿಕೆ ಇದರ ಅಧ್ಯಕ್ಷ ರವಿ ಶೆಟ್ಟಿ ಮಾತನಾಡಿ ಉಡುಪಿಯಲ್ಲಿ ಖಾಸಗಿ ಆಸ್ಪತ್ರೆಗಳ ಲಾಭಿಯಿಂದಾಗಿ ಸಾಮಾನ್ಯ ನಾಗರಿಕರು ಚಿಕಿತ್ಸೆ ಪಡೆಯುವುದು ದುಸ್ತರವಾಗಿದೆ. ಹೀಗಿರುವಾಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಮಾನ್ಯ ನಾಗರಿಕರು ತೆರಳಿದರೆ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿ ನರಕ ಯಾತನೆಯ ತಾಣವಾಗಿದೆ ಎಂದು ಆರೋಪಿಸಿದರು. ಸ್ವಚ್ಚತೆ, ವೈದ್ಯರ ಕೊರತೆಯಿಂದ ರೋಗಿಗಳ ಸಮಸ್ಯೆ ಹೇಳತೀರವಾಗಿದೆ. ಇಲ್ಲಿಗೆ ಬರುವ ನಾಗರಿಕರು ಸೂಕ್ತ ಚಿಕಿತ್ಸಾ ವ್ಯವಸ್ಥೆ ಇಲ್ಲದೆ ಮತ್ತಷ್ಟು ರೋಗಗಳಿಂದ ಬಳಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

karnatak-karmika-vedike-29-01-2016

ವಾರ್ಡ್ ಹಾಗೂ ಕಾರಿಡಾರಿನಲ್ಲಿ ಸಿಸಿ ಕೆಮರಾ ಅಳವಡಿಕೆ, ಪರಿಣತ ಶಶ್ರೂಕಿಯರ ಮತ್ತು ವೈದ್ಯರ ಲಭ್ಯತೆ ಕಲ್ಪಿಸಬೇಕು, ಆಗಾಗ ನೀರಿನ ಟ್ಯಾಂಕ್ ಶುಚಿಗೊಳಿಸಬೇಕು, ಶುಚಿಯಾದ ಆಹಾರ ಪೊರೈಕೆ, ಹಾಸಲು ಹೊದೆಯಲು ಶುಚಿಗೊಳಿಸಿದ ಬೆಡ್ ಶೀಟ್ ಒದಗಿಸುವಿಕೆ, ಶಿಕ್ಷಣ ಸಂಸ್ಥೆಗಳಿಂದ ನೀಡಲಾದ ರಕ್ತ ನೀಧಿಯನ್ನು ಎಲ್ಲರಿಗೂ ಸಮರ್ಪಕವಾಗಿ ಸಿಗುವಂತೆ ಮಾಡುವುದು. ತುರ್ತು ನಿಗಾ ಘಟಕದಲ್ಲಿ ವೈದ್ಯರ ಲಭ್ಯತೆ, ಆಸ್ಪತ್ರೆ ಆವರಣದ ಕಸ ವಿಲೆವಾರಿ ಸೇರಿದಂತೆ ಒಟ್ಟು ಬೇಡಿಕೆಗಳನ್ನು ತುರ್ತಾಗಿ ಪರಿಹರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ಮನವಿ ಸ್ವೀಕರಿಸಿ ಫೆಬ್ರವರಿ 22 ರ ತನಕ ಸಮಾಯವಕಾಶ ನೀಡುವಂತೆ ಕೋರಿ ಮನವಿಯನ್ನು ಸ್ವೀಕರಿಸಿದರು

ಕಾರ್ಮೀಕರ ವೇದಿಕೆಯ ಉಪಾಧ್ಯಕ್ಷೆ ಚಂದ್ರಿಕ ಶೆಟ್ಟಿ,ಇತರ ಪಧಾದಿಕಾರಿಗಳಾದ ರವಿ ಶಾಸ್ತ್ರಿ ಬನ್ನಂಜೆ,ಪ್ರವೀಣï ಹಿರಿಯಡ್ಕ,ಈರಣ್ಣ ಇರುವತ್ತಿ ಗೌಡರ,  ಚಂದ್ರ ಪೂಜಾರಿ,ನಾಗರಿಕ ವೇದಿಕೆಯ ನಿತ್ಯಾನಂದ ಒಳಕಾಡು,ಶಾರದ ಆಟೊ ಯೂನಿಯನï ನ ಮಣೀಂದ್ರ ಚಕ್ರತೀರ್ಥ ಮೊದಲಾದವರು ಉಪಸ್ಥಿತರಿದ್ದರು.


Spread the love