ಉಡುಪಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರಣವ್ ಮುಖರ್ಜಿಯವರಿಗೆ ಶ್ರದ್ದಾಂಜಲಿ

Spread the love

ಉಡುಪಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರಣವ್ ಮುಖರ್ಜಿಯವರಿಗೆ ಶ್ರದ್ದಾಂಜಲಿ

ಉಡುಪಿ: ಕಾಂಗ್ರೆಸ್ನ ಹಿರಿಯ ನಾಯಕರಾಗಿದ್ದ ಪ್ರಣವ್ ಮುಖರ್ಜಿಯವರು ಜನಮಾನಸದಲ್ಲಿ ವಿಶಿಷ್ಠ ಸ್ಥಾನವನ್ನು ಪಡೆದವರು. ಉತ್ತಮ ವಾಗ್ಮಿಯಾಗಿ, ಸಂಸದೀಯ ಪಟುವಾಗಿ ರಾಷ್ಟ್ರಪತಿಯಾಗುವ ಮುನ್ನ ಕಾಂಗ್ರೆಸ್ ಸರಕಾರಗಳಲ್ಲಿ ರಕ್ಷಣೆ, ವಿದೇಶಾಂಗ, ವಾಣಿಜ್ಯ, ಹಣಕಾಸು, ಕೈಗಾರಿಕಾ ಇಲಾಖೆಗಳ ಸಚಿವರಾಗಿ ಸಮರ್ಥರಾಗಿ ಕಾರ್ಯ ನಿರ್ವಹಿಸಿ ತಾವು ಕೆಲಸ ಮಾಡಿದ ಇಲಾಖೆಗಳಲೆಲ್ಲಾ ಹೊಸತನ, ಆಡಳಿತ ಸುಧಾರಣೆಗಳನ್ನು ಜಾರಿಗೆ ತಂದವರಾಗಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡ ಮಾಜಿ ರಾಷ್ಟ್ರಪತಿ ಭಾರತ ರತ್ನ ಪ್ರಣವ್ ಮುಖರ್ಜಿಯವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡುತ್ತಿದ್ದರು.

ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಮಾತನಾಡುತ್ತಾ ಪ್ರಣವ್ ಮುಖರ್ಜಿಯವರು ವಿತ್ತ ಸಚಿವರಾಗಿ ಸುಧಾರಣೆಗಳ ಮೂಲಕ ಭಾರತದ ಆರ್ಥಿಕತೆಯ ದಿಕ್ಕನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜಿ.ಎಸ್.ಟಿ. ಪರಿಕಲ್ಪನೆಯನ್ನು ಮೊದಲಿಗೆ ಜಾರಿಗೆ ತಂದ ಹೆಗ್ಗಳಿಕೆ ಅವರದಾಗಿತ್ತು. ಮುಖರ್ಜಿಯವರು ಕಟ್ಟಾ ಕಾಂಗ್ರೆಸ್ಸಿಗರಾದರೂ ಪ್ರತಿಪಕ್ಷ ನಾಯಕರೊಂದಿಗೂ ಉತ್ತಮ ಭಾಂದವ್ಯ ಹೊಂದಿ ಅಜಾತಶತ್ರುವಾಗಿದ್ದರು. ದೇಶದ ಆರ್ಥಿಕ ಸುಧಾರಣೆಗೆ ಪ್ರಣವ್ ಮುಖರ್ಜಿಯವರ ಕೊಡುಗೆ ಅಪಾರ ಎಂದರು.

ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ರವರು ಮಾತನಾಡುತ್ತಾ ಮುಖರ್ಜಿಯವರು ಸುದೀರ್ಘ ಕಾಲ ಆಡಳಿತ ಸ್ಥಾನದಲ್ಲಿದ್ದು ಪ್ರಾಮಾಣಿಕರಾಗಿ ಕಳಂಕ ರಹಿತರಾಗಿ ಸೇವೆ ಸಲ್ಲಿಸಿದ ಸರ್ವಾದಾರಣೀಯ ನಾಯಕರಾಗಿದ್ದರು. ವಿತ್ತ ಸಚಿವರಾಗಿದ್ದಾಗ ವಿತ್ತೀಯ ಕೊರತೆಯನ್ನು ಗಣನೀಯವಾಗಿ ತಗ್ಗಿಸಿ ದೇಶೀಯ ಉತ್ಪನ್ನಗಳನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ದಿದ್ದರು. ಹಾಗಾಗಿ ಅವರು ಭಾರತದ ಆರ್ಥಿಕತೆಯ ಮೊದಲ ಸುಧಾರಕ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಿನೇಶ್ ಪುತ್ರನ್, ಬಿ. ನರಸಿಂಹ ಮೂರ್ತಿ, ವೆರೋನಿಕಾ ಕರ್ನೇಲಿಯೋ, ಹರೀಶ್ ಕಿಣಿ, ಮುರಳಿ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಕುಶಲ್ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಕೇಶವ್ ಕೋಟ್ಯಾನ್, ಬಾಲಕೃಷ್ಣ ಪೂಜಾರಿ, ವಿಶ್ವಾಸ್ ವಿ. ಅಮೀನ್, ಇಸ್ಮಾಯಿಲ್ ಆತ್ರಾಡಿ, ಶಶಿಧರ ಶೆಟ್ಟಿ ಎಲ್ಲೂರು, ಉದ್ಯಾವರ ನಾಗೇಶ್ ಕುಮಾರ್, ಯತೀಶ್ ಕರ್ಕೇರಾ, ಕೃಷ್ಣಮೂರ್ತಿ ಆಚಾರ್ಯ, ಮೀನಾಕ್ಷಿ ಮಾಧವ ಬನ್ನಂಜೆ, ಚಂದ್ರಿಕಾ ಶೆಟ್ಟಿ, ಲೂವಿಸ್ ಲೋಬೋ, ಕಿಶೋರ್ ಎರ್ಮಾಳ್, ಉಪೇಂದ್ರ ಮೆಂಡನ್, ಅಮೃತಾ ಕೃಷ್ಣಮೂರ್ತಿ, ವಿಜಯ ಪೂಜಾರಿ, ರಮೇಶ್ ಕಾಂಚನ್, ಆರ್.ಕೆ. ರಮೇಶ್ ಪೂಜಾರಿ, ನಾರಾಯಣ ಕುಂದರ್, ಪ್ರಶಾಂತ್ ಪೂಜಾರಿ, ಹಮದ್ ಮೊದಲಾದವರು ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ಸ್ವಾಗತಿಸಿ, ಉಡುಪಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಧನ್ಯವಾದವಿತ್ತರು.


Spread the love