ಉಡುಪಿ : ‘ತಿಮ್ಮಕ್ಕನಿಗೆ ಕರ್ನಾಟಕ ರತ್ನ ನೀಡಿ’ ಅಭಿಯಾನಕ್ಕೆ ಕರ್ನಾಟಕ ಕಾರ್ಮಿಕರ ವೇದಿಕೆ ಬೆಂಬಲ

Spread the love

ಉಡುಪಿ : ಸಾಲು ಮರದ ತಿಮ್ಮಕ್ಕನಿಗೆ ಇಂದಿಗೆ 106 ವರ್ಷಗಳು. ತನ್ನ 10ನೇ ವಯಸ್ಸಿನಲ್ಲಿ ಕೂಲಿ ಕೆಲಸಗಳನ್ನು ಆರಂಭಿಸಿದ ತಿಮ್ಮಕ್ಕನವರು ಜೀವನ ಪೂರ್ತಿ ಜೀವನ ಪೂರ್ತಿ ಆರ್ತಿಕ ಸ್ಥಿತಿಯಲ್ಲಿ ಬಳಲುತ್ತಿರುವ ಕರ್ನಾಟಕದ ಹೆಣ್ಣು. ತನ್ನ ಮದುವೆಯಾದ ನಂತರ ಗಂಡ ಬಿಕ್ಕವಿ ಚಿಕ್ಕಯ್ಯನೊಂದಿಗೆ ಹೊಲಕ್ಕೆ ಹೊಗಿ ಗಿಡಗಂಟಿಗಳನ್ನು ಕೀಳುವ , ವ್ಯವಸಾಯ ಮಾಡುವಕೆಲಸವನ್ನು ಆರಂಭಿಸಿದರು.

salumarathimma_KKV

20 ವರ್ಷಗಳಾದರೂ ತಮಗೆ ಮಕ್ಕಳ ಫಲವಿಲ್ಲವೆಂದು ಕೊರಗಿ, ಒಮ್ಮೆ ತಿಮ್ಮಕ್ಕನವರು ಜನರ ಮಾತುಗಳನ್ನು ಕೇಳಲಾರದೆ ಆತ್ಮಹತ್ಯೆಗೂ ಕೂಡ ಯತ್ನಿಸಿದ್ದರು. ಇದನ್ನರಿತ ಪತಿ ಬಿಕ್ಕವಿ ಚಿಕ್ಕಯ್ಯನವರು ಗಿಡಗಳನ್ನು ಬೆಳೆಸಿ ಅದರಲ್ಲಿಯೇ ಮಕ್ಕಳ ಮಮತೆಯನ್ನು ಕಾಣಲು ಪ್ರಾರಂಭಿಸಿದರು. ಹೀಗೆ ಅವರ ಪರಿಸರ ಪ್ರೇಮ ಆರಂಭವಾಯಿತು.

ಆಲದ ಮರದ ಕೊಂಬೆಗಳನ್ನು ಕಡಿದು ಅದನ್ನು ನೆಡಲು ಆರಂಭಿಸಿದರು. ನೀರಿಲ್ಲದೆ ದಿನವೂ ಜನರೊಂದಿಗೆ ಚರ್ಚಿಸಿ ನೀರನ್ನು ಗಿಡಗಳಿಗೆ ಹಾಕಲು ಅನೇಕ ಕೆರೆಗಳ, ಹೊಲಗಳ, ಹೊಂಡಗಳ ಮತ್ತು ಯಜಮಾನರುಗಳ ಅನುಮತಿ ಪಡೆದುಕೊಂಡು ದಿನಲೂ ಗಡಿಗೆಯಲ್ಲಿ ನೀರನ್ನು ಹೊತ್ತುಕೊಂಡು ಸುಮಾರು 4 ಕಿ.ಮೀ. ವರೆಗೆ ಸುಲಿಕಲ್‍ನಿಂದ ನಡೆದುಕೊಂಡು ಹೋಗಿ ಗಿಡಗಳನ್ನು ಪೋಷಿಸಲು ಆರಂಭಿಸಿದರು.

ಅದರಂತೆ ಸರಿಸುಮಾರು 384 ಆಲದ ಮರಗಳನ್ನು ನೆಟ್ಟು 1000 ಇತರ ಮರಗಳನ್ನು ಕುದ್ದು ಸ್ವತಃ ತಿಮ್ಮಕ್ಕನವರೇ ಪೋಷಿಸಿ ಬೆಳೆಸಿದ್ದಾರೆ. ಭಾರತದಾದ್ಯಂತ ಸಂಚರಿಸಿ ಲಕ್ಷಗಟ್ಟಲೆ ಮರಗಳನ್ನು ಬೆಳೆಸಿದ ಕೀರ್ತಿ ನಮ್ಮ ಕರ್ನಾಟಕದ ಹೆಣ್ಣಿಗೆ ಸಲ್ಲುತ್ತದೆ.

ಪರಿಸರ ತಜ್ಷರ ಪ್ರಕಾರ ಒಂದು ಆಲದ ಮರದ ಇಂದಿನ ಬೆಲೆ 1,75,000 ರೂ.ಗಳು. ಅದರಂತೆ ಸಾವಿರಾರು ಮರಗಳ ಒಟ್ಟು ಬೆಲೆಯನ್ನು ಎಣಿಸಿದಾಗ ಅದರ ಸಂಖ್ಯೆ ದುಪ್ಪಟ್ಟು.

ಅರ್ದ ದಿನ ಕೂಲಿ ಇನ್ನರ್ಧ ದಿನ ಗಿಡಗಳನ್ನು ನೆಟ್ಟು ಪೋಷಿಸುವುದು ಇವರ ಕೆಲಸವಾಗಿತ್ತು. ಯಾರ ಹಂಗಿಲ್ಲದೆ, ಯಾವುದೇ ಪ್ರಚಾರಕ್ಕೆ ಎಡೆಕೊಡದೆ ಗಿಡಗಳನ್ನು ಸಾಕಿದ ಮಹಾನ್ ತಾಯಿ. ಈಗಲೂ ಇಂತಹ ತಾಯಿಗೆ ಆರ್ಥಿಕ ಸಮಸ್ಯೆಯು ದಿನೇ ದಿನೇ ಹೆಚ್ಚುತ್ತಿದೆ. ಆದರೂ ಕೊಡ ಯಾರ ಹಂಗಿಲ್ಲದೆ ಬದುಕುತ್ತಿದ್ದಾರೆ. ಕೋಟಿಗಟ್ಟ್ಲೆ ಬೆಲೆಬಾಳುವ ಗಿಡ-ಮರಗಳನ್ನು ಸರಕಾರಕ್ಕೆ ವಹಿಸಿಕೊಟ್ಟಿದ್ದಾರೆ. ಇಂತಹ ಕರುನಾಡಿಕ ಹೆಮ್ಮೆಯ ಕನ್ನಡತಿಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಚಳುವಳಿ ಆರಂಭಿಸಿರುವುದು ಹೆಮ್ಮೆಯ ವಿಷಯ. ಚಳುವಳಿಯ ಆರಂಭದಿಂದಲೂ ಹಿಡಿದು, ತಿಮ್ಮಕ್ಕನಿಗೆ ಕರ್ನಾಟಕ ರತ್ನ ಪ್ರಶಸ್ತಿ ದೊರೆಯುವವರೆಗೂ ಕರ್ನಾಟಕ ಕಾರ್ಮಿಕರ ವೇದಿಕೆಯು ಸಂಪೂರ್ಣ ಬೆಂಬಲ ನೀಡುತ್ತದೆ.

ಅಂತೆಯೆ ಸಾಮಾಜಿಕ ಹೋರಾಟಗಾರ್ತಿ ಕುಮಾರಿ ನೇತ್ರಾವತಿ ಸೊರಣಗಿ ನಡೆಸುತ್ತಿರುವ “ತಿಮ್ಮಕ್ಕನಿಗೆ ಕರ್ನಾಟಕ ರತ್ನ ನೀಡಿ” ಅಭಿಯಾನಕ್ಕೆ ಕರ್ನಾಟಕ ಕಾರ್ಮಿಕರ ವೇದಿಕೆಯ ಉಡುಪಿ ಜಿಲ್ಲಾ ಘಟಕವು ಬೆಂಬಲ ನೀಡಿ ಮಾನ್ಯ ಜಿಲ್ಲಾಧಿಕಾರಿಯ ಮುಖಾಂತರ ಘನ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ್ತಿ ಕುಮಾರಿ ನೇತ್ರಾವತಿ ಸೊರಣಗಿ, ವೇದಿಕೆಯ ಜಿಲ್ಲಾಧ್ಯಕಷ ರವಿ ಶೆಟ್ಟಿ, ಮಹಿಳಾ ಜಿಲ್ಲಾಧ್ಯಕ್ಷೆ ಚಂದ್ರಿಕಾ ಶೆಟ್ಟಿ ಸ್ವಯಂ ಸೇವಕ ಮುಖಂಡ ಸಂದೀಪ್ ಕೊಡಂಕೂರು, ರೈತ ಮುಖಂಡ ವೀರಣ್ಣ ಕುರುವತ್ತಿ ಗೌಡರ್, ಮಹಮದ್ ಇರ್ಫಾನ್, ಸಂತೋಷ್, ನಾರಾಯಣ, ಮತ್ತಿತರರು ಹಾಜರಿದ್ದರು.


Spread the love