ಉಡುಪಿ ಧರ್ಮಪ್ರಾಂತ್ಯ ಮಟ್ಟದ ಚಾರಿತ್ರಿಕ ಸಮ್ಮೇಳನ ಸಮುದಾಯೋತ್ಸವ-2020 ಅದ್ದೂರಿ ಚಾಲನೆ

Spread the love

ಉಡುಪಿ ಧರ್ಮಪ್ರಾಂತ್ಯ ಮಟ್ಟದ ಚಾರಿತ್ರಿಕ ಸಮ್ಮೇಳನ ಸಮುದಾಯೋತ್ಸವ-2020 ಅದ್ದೂರಿ ಚಾಲನೆ

ಉಡುಪಿ : “ಹಲವಾರು ಕಾರಣಗಳಿಗೆ ಪ್ರಜಾಪ್ರಭುತ್ವದ ಬೇರುಗಳು ದುರ್ಬಲಗೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಗ್ಗೂಡುವ ಅಗತ್ಯವಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಕೆಥೊಲಿಕ್ ಉಡುಪಿ ಪ್ರದೇಶ್ ಇದರ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ 2020 ಜನವರಿ 19ರಂದು ಕಲ್ಯಾಣಪುರದ ಮೌಂಟ್ ರೋಜರಿ ಚರ್ಚಿನ ಮೈದಾನದಲ್ಲಿ ಆಯೋಜಿಸಿರುವ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಚಾರಿತ್ರಿಕ ಸಮ್ಮೇಳನ ಸಮುದಾಯೋತ್ಸವ-2020 ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ದೇಶದಲ್ಲಿ ವಸ್ತುಗಳ ಬೆಲೆ ಏರುತ್ತಿದ್ದು ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಕಳೆದ 25 ವರ್ಷಗಳಿಗೆ ಹೋಲಿಸಿದರೆ ನಮ್ಮ ಧರ್ಮಪ್ರಾಂತ್ಯದ ಹಿರಿಯರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಕ್ರೈಸ್ತರ ಸಂಖ್ಯೆ ಕಡಿಮೆಯಾಗುತ್ತಿದೆ. ಸಮುದಾಯವಾಗಿ ನಾವು ನಮ್ಮ ಜಿಲ್ಲೆಯಲ್ಲಿ ಬಹುಮತದಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ನಾವು ನಮ್ಮ ಹಿಂಜರಿಯುವ ಗುಣದಿಂದಾಗಿ ನಮ್ಮ ಶಕ್ತಿಯನ್ನು ಅಥವಾ ನಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದೇವೆ. ನಾವು ನಮ್ಮ ದೇಶದ ಪ್ರಜೆಗಳು. ನಾವು ಭಾರತೀಯ ಮೂಲದವರು ಎಂದು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದೇವೆ. ನಾವು ಇನ್ನೂ ಎಲ್ಲದಕ್ಕೂ ಚರ್ಚ್ ಅನ್ನು ಅವಲಂಬಿಸುತ್ತಿದ್ದು ನಾವಾಗಿ ಯಾವುದೇ ನಿರ್ಧಾರ ಕೈಗೊಳ್ಳೂವ ನಿಟ್ಟಿನಲ್ಲಿ ಶಕ್ತರಾಗದಿರುವವುದು ಬೇಸರದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಘಟಿತರಾಗಬೇಕಾಗಿದೆ ಎಂದರು.”

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉತ್ತರಾಖಂಡದ ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಘಟನಾವಳಿಗಳ ಕುರಿತು ಖೇದ ವ್ಯಕ್ತಪಡಿಸಿ ಮಾತನಾಡಿ ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರದಲ್ಲಿ ದೇಶದಲ್ಲಿ ಉಂಟಾಗಿರುವ ಹಲ್ಲೆ ಪ್ರತಿಭಟನೆಗಳು ದೇಶದ ಅಭಿವೃದ್ಧಿಗೆ ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿ ಪ್ರಸ್ತುತ ನೇರವಾಗಿ ಅಲ್ಲವಾದರೂ ಕ್ರೈಸ್ತ ಸಮುದಾಯವನ್ನು ವಿವಿಧ ರೀತಿಯಲ್ಲಿ ಬೆದರಿಸುವ ವ್ಯವಸ್ಥೆ ನಡೆಯುತ್ತಿದೆ. ಇದಕ್ಕೆ ನೇರ ಉದಾಹರಣೆ ಎಂಬಂತೆ ಕನಕಪುರದ ಕ್ರಿಸ್ತ ಪ್ರತಿಮೆ ನಿರ್ಮಾಣದಲ್ಲಿ ನಡೆಯುತ್ತಿರುವ ರಾಜಕೀಯ ನಾಚಿಕೆಗೀಡು. ಇಂದು ದೇಶದಲ್ಲಿ ಪ್ರತಿಯೊಬ್ಬರ ಪ್ರತಿಮೆಗಳನ್ನು ನಿರ್ಮಾಣ ಮಾಡಲು ಯಾವುದೇ ವಿರೋಧ ಇಲ್ಲ ಆದರೆ ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಮಾತ್ರ ವಿರೋಧ ಯಾಕೆ ಎಂದು ಆಳ್ವಾ ಪ್ರಶ್ನಿಸಿದರು.

ದೇಶದಲ್ಲ ಅಚ್ಚೇ ದಿನ್ ತರುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಒಂದು ಸರಕಾರ ಇಂದು ಕೇವಲ ಸರ್ವಾಧಿಕಾರಿ ಧೋರಣೆ ಮಾಡಿದ್ದು ಬಿಟ್ಟರೆ ಬಡ ಜನರ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿ ಪ್ರಯತ್ನಿಸಿಲ್ಲ ಎನ್ನುವುದು ಖೇದಕರ.

ಇತ್ತೀಚೆಗೆ ಹೊಸದಾಗಿ ಪೌರತ್ವ ನೋಂದಣಿ ಕಾಯ್ದೆಯ ಮೂಲಕ ದೇಶದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಹೊಸ ಪೌರತ್ವ ನೋಂದಣಿ ಕಾಯಿದೆಯ ಪ್ರಕಾರ ನಮ್ಮ ಅಜ್ಜ ಮತ್ತು ಪೂರ್ವಜರ ಜನನ ಪ್ರಮಾಣ ಪ್ರತ್ರ ನೀಡಲು ಕೇಳುತ್ತಾರೆ. ಈ ಕಾಯಿದೆ ಕ್ರೈಸ್ತರು ಮತ್ತು ಮುಸ್ಲಿಂರಿಗೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ ಎಲ್ಲಾ ಭಾರತೀಯರಿಗೆ ಸಂಬಂಧಿಸಿದೆ. ನಾನು ಭಾರತೀಯಳಾಗಿ ಜನಸಿದ್ದು ಮತ್ತೊಮ್ಮೆ ಇದನ್ನು ಸಾಬೀತುಪಡಿಸಬೇಕಾಗಿಲ್ಲ ಅದಕ್ಕಾಗಿ ಮತ್ತೊಮ್ಮೆ ಅದಕ್ಕಾಗಿ ಯಾವುದೇ ಅರ್ಜಿಯನ್ನು ಭರ್ತಿ ಮಾಡುವುದಿಲ್ಲ. ನಮ್ಮ ಪೌರತ್ವವನ್ನು ಸಾಬೀತು ಪಡಿಸಲು ಹೇಳುತ್ತಿರುವ ಪ್ರಧಾನಿ, ಗೃಹಮಂತ್ರಿ ಅಮಿತ್ ಶಾ ಯಾವ ಹೋರಾಟಗಾರರು ಎಂದು ಪ್ರಶ್ನಿಸಿದ ಆಳ್ವ ದೇಶದ ಪ್ರಧಾನಿಯ ಬಿ ಎ ಪ್ರಮಾಣಪತ್ರವನ್ನು ಇನ್ನೂ ಕೂಡ ಹುಡುಕಲು ಸಾಧ್ಯವಾಗಿಲ್ಲ. ಇಂತಹ ಅನಕ್ಷರಸ್ಥ ನಾಯಕರು ನಮ್ಮ ಏನೂ ತಿಳಿಯದ ಬಡ ಜನರ ಪ್ರಮಾಣ ಪತ್ರಗಳನ್ನು ಕೇಳುವುದು ಸರಿಯಲ್ಲ ಎಂದರು.

ಕಾರ್ಯಕ್ರಮದಲ್ಲಿ ಎಡ್ವರ್ಡ್ ಲಾರ್ಸನ್ ಡಿಸೋಜಾ ಅವರ ನಮ್ಮ ಸಂವಿಧಾನ ಮತ್ತು ಹಕ್ಕುಗಳು ಇದರ ಕೊಂಕಣಿ ಪುಸ್ತಕ ಹಾಗೂ ಡಾ|ಜೆರಾಲ್ಡ್ ಪಿಂಟೊ ರಚಿತ ಕೆಥೊಲಿಕ್ ಸಭಾ ಚರಿತ್ರೆಯ ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು.

ಕ್ರೈಸ್ತ ಸಮುದಾಯದ ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ದೃಷ್ಟಿಕೋನ ವಿಚಾರದಲ್ಲಿ ಮಾಜಿ ಶಾಸಕ ಹಾಗೂ ನಿವೃತ್ತ ಕೆ ಎಸ್ ಅಧಿಕಾರಿ ಜೆ ಆರ್ ಲೋಬೊ ಪ್ರಧಾನ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಕೆ ಎ ಎಸ್ ಅಧಿಕಾರಿ ಅ್ಯಂಟನಿ ಮೆಂಡೊನ್ಸಾ, ನ್ಯಾಯಾವಾದಿ ವಂ|ಫ್ರಾನ್ಸಿಸ್ ಆಸ್ಸಿಸಿ ಆಲ್ಮೇಡಾ, ಹಿರಿಯ ಪತ್ರಕರ್ತ ಗ್ಯಾಬ್ರಿಯಲ್ ವಾಸ್, ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ|ವಿನ್ಸೆಂಟ್ ಆಳ್ವ, ಮುಂಬೈ ಮಾಡೆಲ್ ಬ್ಯಾಂಕಿನ ಆಲ್ಬರ್ಟ್ ಡಿಸೋಜಾ, ಎಐಸಿಯು ಕಾರ್ಯದರ್ಸಿ ಜೆನೆಟ್ ಡಿಸೋಜಾ, ಎ ಐ ಸಿಯು ಅಧ್ಯಕ್ಷ ಆಸ್ಸಿಸಿ ಗೊನ್ಸಾಲ್ವಿಸ್, ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ರೋಲ್ಫಿ ಡಿಕೊಸ್ತಾ, ಜಾನ್ ಡಿಸಿಲ್ವಾ, ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ, ಕೆಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಪ್ರಮೀಳಾ ಡೆಸಾ, ಎಲಿಯಾಸ್ ಡಿಸೋಜಾ ಸಂತೆಕಟ್ಟೆ, ಕೆಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ, ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ನಿಯೋಜಿತ ಅಧ್ಯಕ್ಷ ರೋಬರ್ಟ್ ಮಿನೇಜಸ್, ನಿಕಟಪೂರ್ವ ಅಧ್ಯಕ್ಷ ವಲೆರೀಯನ್ ಫೆರ್ನಾಂಡಿಸ್, ಸಮುದಾಯೋತ್ಸವ ಸಂಚಾಲಕ ಎಲ್ ರೋಯ್ ಕಿರಣ್ ಕ್ರಾಸ್ಟೊ, ವಲಯಗಳ ಅಧ್ಯಕ್ಷರಾದ ರೊನಾಲ್ಡ್, ಹೆರಿಕ್, ಐಡಾ ಕರ್ನೆಲಿಯೊ, ಹಾಗೂ ಇತರರು ಉಪಸ್ಥಿತರಿದ್ದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿ, ಸಮುದಾಯೋತ್ಸವ ಕಾರ್ಯದರ್ಶಿ ಮೇರಿ ಡಿಸೋಜಾ ವಂದಿಸಿದರು. ಲೆಸ್ಲಿ ಆರೋಜಾ, ಎಡ್ವರ್ಡ್ ಲಾರ್ಸನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.


Spread the love