ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮಾ 23 ರಿಂದ ದಿನಬಿಟ್ಟು ದಿನ ನೀರು ಸರಬರಾಜು

Spread the love

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮಾ 23 ರಿಂದ ದಿನಬಿಟ್ಟು ದಿನ ನೀರು ಸರಬರಾಜು

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹದ ಮಟ್ಟ ತೀರ ಕುಸಿದಿರುವುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 2 ವಿಭಾಗಗಳನ್ನಾಗಿ ಮಾಡಿ ಮಾರ್ಚ್ 23 ರಿಂದ ದಿನ ಬಿಟ್ಟು ದಿನ ಬೆಳಿಗ್ಗೆ 6 ಗಂಟೆಯಿಂದ ನೀರು ಸರಬರಾಜು ಮಾಡಲಾಗುತ್ತದೆ ಎಂದು ನಗರಸಭಾ ಪೌರಾಯುಕ್ತ ಡಿ ಮಂಜುನಾಥಯ್ಯ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಪೌರಾಯುಕ್ತರು, ಮಾರ್ಚ್ 23 ರಂದು ಈ ಮುಂದಿನ ವಾರ್ಡುಗಳಿಗೆ ನೀರು ಸರಬರಾಜು ಮಾಡಲಾಗುವುದು. ಕುಂಜಿಬೆಟ್ಟು, ತೆಂಕಪೇಟೆ, ಒಳಕಾಡು, ಬೈಲೂರು, ಕಿನ್ನಿಮೂಲ್ಕಿ, ಅಜ್ಜರಕಾಡು, ಅಂಬಲಪಾಡಿ, ಬನ್ನಂಜೆ ಶಿರಿಬೀಡು, ಕೊಳ, ವಡಭಾಂಡೇಶ್ವರ, ಕಲ್ಮಾಡಿ, ಇಂದಿರಾನಗರ, ಚಿಟ್ಪಾಡಿ, ಬಡಗಬೆಟ್ಟು, ಕೊಡವೂರು, ಕಸ್ತೂರ್ಬಾನಗರ, ಮಲ್ಪೆ ಸೆಂಟ್ರಲ್, ಇಂದ್ರಾಳಿ ಸಗ್ರಿ, ಮೂಡುಪೆರಂಪಳ್ಳಿ ವಾರ್ಡ್.

ಮಾರ್ಚ್ 24 ರಂದು ಈ ಮುಂದಿನ ವಾರ್ಡುಗಳಿಗೆ ನೀರು ಮಾಡಲಾಗುವುದು, ಸರಳೆಬೆಟ್ಟು, ಈಶ್ವರನಗರ, ಮಣಿಪಾಲ, ಕಕ್ಕುಂಜೆ, ಕರಂಬಳ್ಳಿ, ಮೂಡಬೆಟ್ಟು, ಕೊಡಂಕೂರು, ನಿಟ್ಟೂರು, ಸುಬ್ರಹ್ಮಣ್ಯನಗರ, ಗೋಪಾಲಪುರ, ಕಡಿಯಾಳಿ, ಗುಂಡಿಬೈಲು, ಸೆಟ್ಟಿಬೆಟ್ಟು, ಪರ್ಕಳ ವಾರ್ಡ್.
ದಿನ ಬಿಟ್ಟು ದಿನ ನೀರು ಸರಬರಾಜು ಇದೇ ಮಾದರಿಯಲ್ಲಿ ಮಾಡಲಾಗುವುದು. ನಳ್ಳಿ ನೀರು ಬಂದ ದಿನ ಆಯಾ ವಾರ್ಡುಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾದಲ್ಲಿ ಆ ದಿನ ಮಾತ್ರ ನೀರು ಸರಬರಾಜಾಗದಿದ್ದ ನಿರ್ದಿಷ್ಟ ಮನೆಗಳಿಗೆ ಮಾತ್ರ ಟ್ಯಾಂಕರಿನಿಂದ ಕುಟುಂಬಕ್ಕೆ ತಲಾ 500 ಲೀಟರ್ ನೀರನ್ನು ಸರಬರಾಜು ಮಾಡಲಾಗುವುದು.

ತಮ್ಮ ದೂರುಗಳಿಗೆ ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದು. 8496989248, 8496989166, 8496989184, 8496989122 ಈ ಮೇಲಿನ ಯಾವುದೇ ಮೊಬೈಲ್ ನಂಬ್ರಗಳು ತಮ್ಮ ದೂರಿಗೆ ಸ್ಪಂದಿಸದಿದ್ದಲ್ಲಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೆ ಗಣೇಶ್ (8496989759), ಹಾಗೂ ಪರಿಸರ ಅಭಿಯಂತರರಾದ ರಾಘವೇಂದ್ರ ಬಿ ಎಸ್ (9448507244) ರಿಗೆ ಕರೆ ಮಾಡಬಹುದು. ಜೀವಜಲ ನೀರಿನ ಸಂರಕ್ಷಣೆ ಹಾಗೂ ಮಿತವಾದ ಬಳಕೆಗೆ ನಾಗರಿಕರುಆದ್ಯತೆ ನೀಡಿ ನೀರಿನ ಅಭಾವ ಇರುವ ಈ ಸಮಯದಲ್ಲಿ ನಗರಸಭೆಯೊಂದಿಗೆ ಸಹಕರಿಸಬೇಕಾಗಿ ಪೌರಾಯುಕ್ತುರ ವಿನಂತಿಸಿದ್ದಾರೆ.


Spread the love