ಉಡುಪಿ ನಗರಸಭೆಯ ಇಬ್ಬರು ಮಹಿಳಾ ಕೌನ್ಸಿಲರ್ ಗಳಿಗೆ ಕೊರೋನಾ ಪಾಸಿಟಿವ್

Spread the love

ಉಡುಪಿ ನಗರಸಭೆಯ ಇಬ್ಬರು ಮಹಿಳಾ ಕೌನ್ಸಿಲರ್ ಗಳಿಗೆ ಕೊರೋನಾ ಪಾಸಿಟಿವ್

ಉಡುಪಿ : ಉಡುಪಿ ನಗರಸಭೆಯ ಇಬ್ಬರು ಮಹಿಳಾ ಸದಸ್ಯೆಯ ರಿಗೆ ಕೊರೋನ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ.

ಒರ್ವ ಸದಸ್ಯೆ ಅನಾರೋಗ್ಯದ ಕಾರಣದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು ಅವರಿಗೆ ಬುಧವಾರ ಪಾಸಿಟಿವ್ ದೃಢಪಟ್ಟಿದೆ ಅಲ್ಲದೆ ಇನ್ನೋರ್ವ ನಗರಸಭಾ ಸದಸ್ಯೆಗೆ ಕೂಡ ಪಾಸಿಟಿವ್ ಧೃಢಪಟ್ಟಿದ್ದು ಇಬ್ಬರನ್ನೂ ಕೂಡ ಕೋವಿಡ್-19 ಆಸ್ಪತ್ರೆಗೆ ವರ್ಗಾಯಿಸಲಾಗಿದೆ.

ಆರೋಗ್ಯ ಅಧಿಕಾರಿಗಳು ಇಬ್ಬರು ಸೋಂಕಿತ ನಗರ ಸಭಾ ಸದಸ್ಯೆಯರ ಸೋಂಕಿನ ಮೂಲವನ್ನು ಪತ್ತೆಹಚ್ಚುತ್ತಿದ್ದಾರೆ.

ಈಗಾಗಲೇ ನಗರಸಭೆಯ ಸಿಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿರುವ ಹಿನ್ನಲೆಯಲ್ಲಿ ನಗರಸಭೆಯನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಜ್ ಮಾಡಲಾಗಿದೆ.


Spread the love