ಉಡುಪಿ ನಗರಸಭೆ ಕಚೇರಿಗೆ ಇಲ್ಲದ ಸೂಕ್ತ ಪಾರ್ಕಿಂಗ್ ವ್ಯವಸ್ಥೆ: ಸಾರ್ವಜನಿಕರ ಪರದಾಟ

Spread the love

ಉಡುಪಿ ನಗರಸಭೆ ಕಚೇರಿಗೆ ಇಲ್ಲದ ಸೂಕ್ತ ಪಾರ್ಕಿಂಗ್ ವ್ಯವಸ್ಥೆ: ಸಾರ್ವಜನಿಕರ ಪರದಾಟ

ಉಡುಪಿ: ನಗರದ ಹೃದಯಭಾಗದಲ್ಲಿರುವ ನಗರಸಭೆ ಕಟ್ಟಡದ ಎದುರು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುತ್ತಿದ್ದು, ನಗರಸಭೆ ಆಡಳಿತದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ನಗರಸಭೆಯನ್ನು ನಗರಪಾಲಿಕೆ ಮಾಡುವ ಪ್ರಕ್ರಿಯೆ ಈಗ ಚಾಲ್ತಿಯಲ್ಲಿದೆ. ಆದರೆ ಬಹಳ ವರ್ಷಗಳಿಂದ ನಗರಸಭೆ ಕಚೇರಿಗೇ ಒಂದು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ . ನಗರದ ಪ್ರಮುಖ ರಸ್ತೆ ಕೆ.ಎಂ ಮಾರ್ಗ್ ನಲ್ಲಿ ನಗರಸಭೆ ಕಚೇರಿ ಇದ್ದು ನಿತ್ಯ ನೂರಾರು ಜನ ನಗರಸಭೆಗೆ ತಮ್ಮ ಕೆಲಸಕ್ಕಾಗಿ ಬರುತ್ತಾರೆ.

ಇನ್ನು ನಗರಸಭೆ ಸದಸ್ಯರು ,ಕಚೇರಿ ಸಿಬ್ಬಂದಿ ಸೇರಿ ಹಲವರು ಭೇಟಿ ಕೊಡುವ ಸ್ಥಳ ನಗರಸಭೆಗೆ ಇಷ್ಟೆಲ್ಲ ಜನರ ಕಾರು ,ಬೈಕ್ ಗಳನ್ನು ನಿಲ್ಲಿಸಲು ನಗರಸಭೆಯಲ್ಲಿ ಪಾರ್ಕಿಂಗೇ ಇಲ್ಲ. ಕೆ.ಎಂ ಮಾರ್ಗ್ ನಲ್ಲೇ ಇವಿಷ್ಟೂ ವಾಹನಗಳನ್ನು ಅರ್ಧಂಬಂರ್ಧ ಪಾರ್ಕ್ ಮಾಡಲಾಗುತ್ತದೆ. ಇದರಿಂದಾಗಿ ಜನರಿಗೆ ಅತ್ತಿಂದಿತ್ತ ಓಡಾಡಲು ಬಹಳ ಕಷ್ಟವಾಗುತ್ತಿದೆ. ವಾಹನಗಳಿಗೂ ಸರಾಗವಾಗಿ ಸಂಚರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ನಗರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲ್ಪಡುವ ನಗರಸಭೆಯ ಸ್ಥಿತಿಯೇ ಈ ರೀತಿ ಇದೆ. ಇನ್ನು ನಗರದ ಬೇರೆ ಪ್ರದೇಶಗಳ ಕತೆ ಕೇಳಲು ಸಾಧ್ಯವಿಲ್ಲ. ಇದು ಇಂದು ನಿನ್ನೆಯ ಸಮಸ್ಯೆ ಅಲ್ಲ. ನಗರಸಭೆ ಕಟ್ಟಡ ಬೇರೆಡೆಗೆ ಸ್ಥಳಾಂತರಗೊಳ್ಳಲಿದೆ ಎನ್ನಲಾಗುತ್ತಿದೆ. ಅಲ್ಲಿಯವರೆಗೆ ನಗರದ ಜನರು ಇದೇ ರೀತಿ ಸಮಸ್ಯೆ ಅನುಭವಿಸುತ್ತಿರಬೇಕೇ? ಇದಕ್ಕೆ ನಗರಸಭಾ ಆಡಳಿತ ಮತ್ತು ಅಧಿಕಾರಿಗಳೇ ಇದಕ್ಕೆ ಉತ್ತರ ನೀಡಬೇಕಾಗಿದೆ,

ಪಾದಚಾರಿಗಳ ಸಂಚಾರವೂ ಕಷ್ಟಕರವಾಗಿದೆ. ಸಂಚಾರ ವ್ಯವಸ್ಥೆಯನ್ನು ಕೇಳುವವರಿಲ್ಲ, ವೃದ್ಧರು, ಮಹಿಳೆಯರು ಮಕ್ಕಳು ನಗರ ಸಭೆಯ ಎದುರಿನ ರಸ್ತೆಯಲ್ಲಿ ನಡೆದಾಡಲು ಕಿರಿಕಿರಿಯಾಗುತ್ತಿದೆ. ಅಪಘಾತಗಳಿಗೆ ಈಡಾಗಿ ಗಾಯ ಗೊಂಡಿರುವ ಪ್ರಕರಣ ಸಾಕಷ್ಟಿವೆ. ಪಾದಾಚಾರಿ ಮಾರ್ಗದಲ್ಲೂ ಎಲ್ಲೆಂದರಲ್ಲಿ ವಾಹನ ನಿಂತಿರುವುದು ಸಂಚಾರಕ್ಕೆ ಸಮಸ್ಯೆಯಾಗಿದೆ. ಇನ್ನು ಮುಂದಾದರೂ ಟ್ರಾಫಿಕ್ ಸಮಸ್ಯೆಗೆ ಕಡಿ ವಾಣಕ್ಕೆ ಅಧಿಕಾರಿಗಳು ಮುಂದಾಗುತ್ತಾರಾ ಎಂದು ಕಾದು ನೋಡಬೇಕಾಗಿದೆ


Spread the love
Subscribe
Notify of

0 Comments
Inline Feedbacks
View all comments