ಉಡುಪಿ: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

Spread the love

ಉಡುಪಿ:– ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ ಇವರು ಏ 24 ರಿಂದ 26 ರವರೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಪ್ರವಾಸ ಕಾರ್ಯಕ್ರಮದ ವಿವರ ಇಂತಿವೆ.

ಏ. 24 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರ ಜೊತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.  ಅಂದು ರಾತ್ರಿ 9.30ಕ್ಕೆ ಉಡುಪಿಯಲ್ಲಿ ವಾಸ್ತವ್ಯ ಮಾಡುವರು.

ಏ.25 ರಂದು ಬೆಳಗ್ಗೆ 8.00 ಗಂಟೆಗೆ ಹಿರಿಯಡ್ಕ ಶಾಸಕರ ಕಛೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು. 10.00 ಗಂಟೆಗೆ ಮುಲ್ಕಿ ಸುಂದರ್ ರಾಂ ಶೆಟ್ಟಿ ಇವರ ಹುಟ್ಟು ಹಬ್ಬದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. 11.00 ಗಂಟೆಗೆ ಉಡುಪಿ ಅಜ್ಜರಕಾಡುವಿನಲ್ಲಿ ನಿಮರ್ಾಣಗೊಂಡ ನೂತನ ಜಿಲ್ಲಾ ಈಜು ಕೊಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. 12.30 ಗಂಟೆಗೆ ಹೆಬ್ರಿ ಗ್ರಾಮ ಪಂಚಾಯತ್-ಬಹುಗ್ರಾಮ ನೀರಿನ ಯೋಜನೆ ಮತ್ತು ಸುವರ್ಣ ಗ್ರಾಮ ಯೋಜನೆಯ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 4.00 ಗಂಟೆಗೆ ಮೂಡುತೋನ್ಸೆ ಮೂಡು ಕುದ್ರು ಶ್ರೀ ದುಗರ್ಾಪರಮೇಶ್ವರಿ ಭಜನಾ ಮಂದಿರದಲ್ಲಿ ನಡೆಯುವ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 6.00 ಗಂಟೆಗೆ ಮುಲ್ಕಿ ಚಿತ್ರಾಪುನಲ್ಲಿ ಅಮೀನ್ ಮೂಲಸ್ಥಾನದ ವತಿಯಿಂದ ನಡೆಯುವ ಅಷ್ಟಪವಿತ್ರ ನಾಗಮಂಡಲೋತ್ಸವ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. 7.30 ಗಂಟೆಗೆ ಜನಸಂಪರ್ಕ ಜನ ಸೇವಾ ವೇದಿಕೆ ಕಳ್ತೂರು-ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 8.00 ಗಂಟೆಗೆ ಕೊಟ್ಟಾರಿಕಟ್ಟೆ ಅಶ್ವತ್ಥಕಟ್ಟೆ ಕಳತ್ತೂರು ಇಲ್ಲಿ ಜನ ಸಂಪರ್ಕ ಜನಸೇವಾ ವೇದಿಕೆ ವತಿಯಿಂದ ನಡೆಯುವ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಸಾಧಕರಿಗೆ ಸನ್ಮಾನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಉಡುಪಿಯಲ್ಲಿ ವಾಸ್ತವ್ಯ ಮಾಡುವರು.

ಏ.26 ರಂದು ಬೆಳಗ್ಗೆ 8.00 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಭವನ ಉಡುಪಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು. 10.30 ಗಂಟೆಗೆ ಮುಲ್ಕಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. 12.00 ಗಂಟೆಗೆ ಹೆಜಮಾಡಿ ಕನ್ನಂಗಾರು ಮೊಗವೀರ ಸಭಾ ಜಾರಂದಾಯ ದೈವಸ್ಥಾನ ಭಂಡಾರದ ಮನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. 1.00 ಗಂಟೆಗೆ ಶ್ರೀ ರಾಮ ಭಜನಾ ಮಂಡಳಿ ಕುಕ್ಕಡೆ ಹಾರಾಡಿಯಲ್ಲಿ ಜರುಗುವ 50 ನೇ ವರ್ಷದ ಭಜನೆ ಮಂಗಲೋತ್ಸವದ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. 4.00 ಗಂಟೆಗೆ ಕಟಪಾಡಿ ಶ್ರೀ ಕಾಳಿಕಾಂಬ ದೇವಸ್ಥಾನ ಯುವಕ ಸೇವಾದಳದ ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 5.00 ಗಂಟೆಗೆ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ(ರಿ) ಕುಳಾಯಿ-ಅಮೃತಾ ಶಿಲಾ ಮೂತರ್ಿ ಪ್ರತಿಷ್ಠೆ ಧಾಮರ್ಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು. 5.30 ಗಂಟೆಗೆ ಫಲಿಮಾರು ಸಾಲಿಯಾನ್ ಆದಿ ಮೂಲಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶಾಭಿಷೇಕ, ಅಷ್ಟಪವಿತ್ರ ನಾಗ ಬ್ರಹ್ಮಮಂಡಲೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. 6.30 ಗಂಟೆಗೆ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳ ವಠಾರ ಇಲ್ಲಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘ(ರಿ) ಉಚ್ಚಿಲ ಇವರ ರಜತೋತ್ಸವ ಸಮಾರೋಪದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರ 8.00 ಗಂಟೆಗೆ ಎಮರ್ಾಳು ತೆಂಕ-ಬ್ರಹ್ಮ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಮಂದಿರದಲ್ಲಿ ನಡೆಯುವ ವಿದ್ಯಾಥರ್ಿವೇತನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಉಡುಪಿಯಲ್ಲಿ ವಾಸ್ತವ್ಯ ಮಾಡುವರು.


Spread the love