ಉಡುಪಿ: ಪರಿಷತ್ ಚುನಾವಣೆ ; ಜಿಲ್ಲಾ ಕಾಂಗ್ರೆಸ್‍ನಲ್ಲಿ ಭುಗಿಲ್ಲೆದ್ದ ಭಿನ್ನಮತ;  ಮಾಜಿ ಜಿಪಂ ಅಧ್ಯಕ್ಷ ಭುಜಂಗ ಶೆಟ್ಟಿ ಪಕ್ಷೇತರರಾಗಿ ಸ್ಪರ್ಧೆ

Spread the love

ಉಡುಪಿ: ಡಿಸೆಂಬರ್ 27 ರಂದು ನಡೆಯುವ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಕಳೆದ 18 ವರ್ಷಗಳಿಂದ ಪಕ್ಷದ ವರಿಷ್ಠರಲ್ಲಿ ಟಿಕೇಟ್ ಕೇಳುತ್ತಾ ಬಂದರೂ ಕಾರ್ಯಕರ್ತರ ಬಗ್ಗೆ ವರಿಷ್ಠರು ತೋರಿರುವ ನಿರ್ಲಕ್ಷ್ಯತನಕ್ಕೆ ಬೇಸತ್ತು ಪಕ್ಷೇತರರನಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಮಾಜಿ ಜಿಲ್ಪಾ ಪಂಚಾಯತ್ ಅಧ್ಯಕ್ಷ ಭುಜಂಗ ಶೆಟ್ಟಿ ಹೇಳೀದ್ದಾರೆ.

Bhujangashetty_MLC_electionPmeet 16-02-2006 09-34-40 Bhujangashetty_MLC_electionPmeet 16-02-2006 09-34-47

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷದಲ್ಲಿ ಕಳೆದ 30 ವರ್ಷಗಳಿಂದ ನಿಷ್ಟಾವಂತನಾಗಿ ಕೆಲಸ ಮಾಡಿಕೊಂಡು ಬಂದಿದ್ದು, ಕಳೆದ 18 ವರ್ಷಗಳಿಂದ ಪಕ್ಷದಲ್ಲಿ ಸರಿಯಾದ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಾ ಬಂದರೂ ಎರಡನೇ ಹಂತದ ನಾಯಕರಿಗೆ ಬೆಳೆಯಲು ಪಕ್ಷದ ಮೊದಲನೇ ಹಂತದ ನಾಯಕರು ಅಡ್ಡಕಾಲು ಹಾಕುತ್ತಿದ್ದಾರೆ. ತಾನು ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಕಳೆದ ಚುನಾವಣೆಯ ಸಂದರ್ಭದಲ್ಲಿಯೇ ಹಾಲಿ ಪರಿಷತ್ ಸದಸ್ಯ ಪ್ರತಾಪ್‍ಚಂದ್ರ ಶೆಟ್ಟಿ ಹೇಳಿದರೂ ಪಕ್ಷದ ವರಿಷ್ಠರು ಪುನಃ ಅವರಿಗೆ ಟಿಕೇಟ್ ನೀಡಲು ಹೊರಟಿರುವುದು ಪಕ್ಷದ ಕಾರ್ಯಕರ್ತರಿಗೆ ಬೇಸರ ತಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 2 ಸೀಟು ಇರುವ ಸ್ಥಳೀಯ ಸಂಸ್ಥೆಯಲ್ಲಿ ಒಂದೆ ಸೀಟಿಗೆ ಅಭ್ಯರ್ಥಿಯನ್ನು ನಿಲ್ಲಿಸಿ ಎರಡು ರಾಷ್ಟ್ರೀಯ ಪಕ್ಷಗಳು ರಾಜಿ ಸೂತ್ರ ಅನುಸರಿಸುತ್ತಿರುವುದು ಖಂಡನೀಯ.

ಪ್ರತಾಪ್ ಚಂದ್ರ ಶೆಟ್ಟಿಯವರು ಚುನಾವಣೆಗೆ ನಿಲ್ಲುವುದಿಲ್ಲ ಎಂದ ಬಳಿಕ ಜಿಲ್ಲಾ ಕಾಂಗ್ರೆಸ್ ಸಭೆಯ ತೀರ್ಮಾನದಂತೆ ಟಿಕೇಟ್ ಆಕಾಂಕ್ಷಿಗಳಾದ ಭುಜಂಗ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ, ಶಂಕರ್ ಕುಂದರ ಸೇರಿದಂತೆ 10 ಜನರ ಪಟ್ಟಿಯನ್ನು ಕೆಪಿಸಿಸಿಗೆ ಜಿಲ್ಲಾ ಕಾಂಗ್ರೆಸ್ ಕಳುಹಿಸಿತ್ತು. ಅದರಂತೆ 10 ಮಂದಿಯೂ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದು, ಎಲ್ಲಿಯೂ ಪ್ರತಾಪ್‍ಚಂದ್ರ ಶೆಟ್ಟಿಯವರು ಅರ್ಜಿ ಸಲ್ಲಿಸಿರಲಿಲ್ಲ. ಅರ್ಜಿ ನೀಡಿದವರನ್ನು ಪಕ್ಷ ಪರಿಗಣಿಸದೆ ಅರ್ಜಿ ನೀಡದೆ ಇರುವವರನ್ನು ಪಕ್ಷ ಪರಿಗಣಿಸಿರುವುದು ನೋಡಿದರು ಜಿಲ್ಲೆಯಲ್ಲಿ ಪಕ್ಷ ಮುಂದೆ ಬೆಳೆಯಬೇಕು ಎನ್ನುವ ಯಾವುದೇ ರೀತಿಯ ಆಸೆಯನ್ನು ಪಕ್ಷದ ವರಿಷ್ಠರು ಇಟ್ಟುಕೊಂಡಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಟಿಕೇಟ್ ಹಂಚಿಕೆ ವಿಚಾರದಲ್ಲಿ ಎಲ್ಲಾ ಆಕಾಂಕ್ಷಿಗಳನ್ನು ಒಟ್ಟಿಗೆ ಕರೆದು ಕೂರಿಸಿ ಮಾತನಾಡುವ ಕನಿಷ್ಠ ಸೌಜನ್ಯವನ್ನು ಕೂಡ ಪಕ್ಷದ ಹಿರಿಯ ನಾಯಕರು ಮಾಡಲಿಲ್ಲ ಇದರಿಂದ ಕಾರ್ಯಕರ್ತರಿಗೆ ತೀವೃ ನೋವಾಗಿದ್ದು, ಈ ಕುರಿತು ಗುರುವಾರ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಬೆಂಬಲಿಗರು ಸಭೆ ನಡೆಸಿ ಪಕ್ಷೇತರರಾಗಿ ಸ್ಪರ್ಧಿಸುವ ತೀರ್ಮಾನವನ್ನು ಕೈಗೊಂಡಿದ್ದೇವೆ. ಪಕ್ಷೇತರರಾಗಿ ಸ್ಪರ್ಧಿಸಿದ್ದಕ್ಕೆ ಪಕ್ಷದಿಂದ ಹೊರಹಾಕಿದರೂ ಕೂಡಾ ಸಾವಿರಾರು ಮಂದಿ ಕಾರ್ಯಕರ್ತರು ಸಾಮೂಹಿಕವಾಗಿ ಹೊರ ನಡೆಯಲು ಸಿದ್ದರಿದ್ದೇವೆ. ಆದರೆ ನಾವಾಗಿಯೇ ಎಂದು ಪಕ್ಷಕ್ಕೆ ರಾಜಿನಾಮೆ ನೀಡುವುದಿಲ್ಲ ಎಂದರು. ತಾನು ಡಿಸೆಂಬರ್ 7 ರಂದು ಪಕ್ಷೇತರನಾಗಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸದ್ದೇನೆ ಎಂದರು. ಜಯಪ್ರಕಾಶ್ ಹೆಗ್ಡೆ ಕೂಡ ಸದ್ಯವೇ ತಮ್ಮ ತೀರ್ಮಾನವನ್ನು ತಿಳೀಸಲಿದ್ದು ಒಮ್ಮತದಿಂದ ಸ್ಪರ್ಧಿಸಲಿದ್ದೇವೆ ಎಂದರು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಮಾತನಾಡಿ ಕಳೆದ 35 ವರ್ಷಗಳಿಂದ ಪಕ್ಷದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶೀಯಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ವಿರಪ್ಪ ಮೊಯ್ಲಿ ಮುಖ್ಯವiಂತ್ರಿ ಆಗಿದ್ದ ವೇಳೆ ಮೀನುಗಾರಿಕಾ ನಿಗಮದ ಅಧ್ಯಕ್ಷ ಹುದ್ದೆ ನೀಡುವುದಾಗಿ ಬಳಿಕ ದಿ ವಸಂತ ಸಾಲಿಯಾನ್ ಅವರ ಕ್ಷೇತ್ರದ ವ್ಯಕ್ತಿಗೆ ಅದ್ಯಕ್ಷ ಹುದ್ದೆ ನೀಡಿ ನನಗೆ ಮೋಸ ಮಾಡಿದ್ದಾರೆ. ಈ ಬಾರಿ ಮತ್ತೆ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಪಕ್ಷದ ನಾಯಕರು ಎರಡನೇ ಹಂತದ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ. ಈ ಬಾರಿ ಚುನಾವಣೆಗೆ ನಿಲ್ಲುವ ಬಗ್ಗೆ ಶೀಘ್ರ ನಿರ್ಣಯ ಕೈಗೊಳ್ಳುತ್ತೇನೆ. ಭುಜಂಗ ಶೆಟ್ಟಿ ಮತ್ತು ಜಯಪ್ರಕಾಶ್ ಹೆಗ್ಡೆ ನಿಂತಲ್ಲಿ ಅವರಿಗೆ ಬೆಂಬಲ ನೀಡಲಿದ್ದೇನೆ ಎಂದರು.


Spread the love