ಉಡುಪಿ| ವ್ಯಕ್ತಿ ಮೃತ ; ಸಂಬಂಧಿಕರಿಗೆ ಸೂಚನೆ

Spread the love

ಉಡುಪಿ| ವ್ಯಕ್ತಿ ಮೃತ ; ಸಂಬಂಧಿಕರಿಗೆ ಸೂಚನೆ

ಉಡುಪಿ: ಕೆಲವು ಸಮಯಗಳ ಹಿಂದೆ ಉಡುಪಿ ಅಲೆವೂರಿನ ಶಂಕರ ಭಂಡಾರಿ (ಸವಿತಾ ಸಮಾಜ)ಯವರು (65ವರ್ಷ) ಮಂಗಳೂರಿನಲ್ಲಿ ಅಸಹಾಯಕರಾಗಿದ್ದು, ಮಂಗಳೂರು ಪೋಲಿಸರ ಸೂಚನೆಯ ಮೇರೆಗೆ ವಿಶುಶೆಟ್ಟಿಯವರು ವ್ಯಕ್ತಿಯನ್ನು ರಕ್ಷಿಸಿ ಕಾರ್ಕಳ ಬೈಲೂರಿನ ಹೊಸ ಬೆಳಕು ಆಶ್ರಮಕ್ಕೆ ದಾಖಲಿಸಿದ್ದರು.

ವ್ಯಕ್ತಿಯು ಮೂಲತಃ ಉಡುಪಿಯವರಾಗಿದ್ದು ಮಕ್ಕಳು ಹಾಗೂ ಸಂಬಂಧಿಕರು ಇದ್ದಾರೆ ಎನ್ನುವ ಮಾಹಿತಿ ಇತ್ತು. ಇದೀಗ ವ್ಯಕ್ತಿ ಮೃತರಾಗಿದ್ದು, ಸಂಬಂಧಿಕರು ಹೊಸಬೆಳಕು ಆಶ್ರಮವನ್ನು ಸಂಪರ್ಕಿಸಬೇಕೆಂದು ವಿಶುಶೆಟ್ಟಿಯವರು ವಿನಂತಿಸಿದ್ದಾರೆ.

ಹೊಸಬೆಳಕು ಆಶ್ರಮದ ದೂರವಾಣಿ ಸಂಖ್ಯೆ – 9636477710


Spread the love