ಉಡುಪಿ : ಹೊರ ರಾಜ್ಯಗಳಿಂದ ಬರಲು ಮತ್ತು ತೆರಳಲು ಸೇವಾಸಿಂಧು ನಲ್ಲಿ ನೊಂದಾಯಿಸಿಕೊಳ್ಳಿ-ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು

Spread the love

ಉಡುಪಿ : ಹೊರ ರಾಜ್ಯಗಳಿಂದ ಬರಲು ಮತ್ತು ತೆರಳಲು ಸೇವಾಸಿಂಧು ನಲ್ಲಿ ನೊಂದಾಯಿಸಿಕೊಳ್ಳಿ-ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು

ಉಡುಪಿ : ಕೋವಿಡ್ -2019 (ಕೊರೋನಾ ವೈರಸ್ ಕಾಯಿಲೆ) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ. ಸೆಕ್ಷನ್ 144(3) ರಂತೆ ನಿರ್ಬಂಧ ವಿಧಿಸಿ ಆದೇಶವನ್ನು ಹೊರಡಿಸಲಾಗಿದ್ದು, ಈಗಾಗಲೇ ಹಲವಾರು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ, ಹೊರರಾಜ್ಯಗಳಿಂದ ಬರುವ ಮತ್ತು ಹೊರರಾಜ್ಯಗಳಿಗೆ ಹೋಗುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ವ್ಯಕ್ತಿಗಳು ಲಾಕ್ಡೌನ್ ಕಾರಣದಿಂದಾಗಿ ಅವರ ಸ್ವಂತ ರಾಜ್ಯಗಳಿಗೆ ತೆರಳಲು ಸಾಧ್ಯವಾಗದೇ ಇಲ್ಲಿಯೇ ಉಳಿದಿದ್ದು, ಅಂತಹವರನ್ನು ಅವರ ರಾಜ್ಯಗಳಿಗೆ ಕಳುಹಿಸಿಕೊಡುವ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ತಿಳಿಸಲಾಗಿದೆ.

ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಸ್ತವ್ಯ ಇರುವ ಹೊರರಾಜ್ಯಗಳ ವಲಸೆ ಕಾರ್ಮಿಕರು, ಯಾತ್ರಿಕರು ,ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ವ್ಯಕ್ತಿಗಳನ್ನು ಅವರವರ ರಾಜ್ಯಗಳಿಗೆ ಹೋಗುವ ಹಿನ್ನೆಲೆಯಲ್ಲಿ ಇಂತಹವರು sevasindhu.karnataka.gov.in ರಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಆದುದರಿಂದ ಉಡುಪಿ ಜಿಲ್ಲೆಗೆ ಹೊರರಾಜ್ಯಗಳಿಂದ ಬರುವ ಮತ್ತು ಹೊರರಾಜ್ಯಗಳಿಗೆ ಹೋಗಲು ಇಚ್ಛಿಸುವವರು ಸದ್ರಿ ವೆಬ್ಸೈಟ್ನಲ್ಲಿ ಅರ್ಜಿಸಲ್ಲಿಸಬಹುದಾಗಿದೆ. ಸದ್ರಿ ವೆಬ್ಸೈಟ್ನಲ್ಲಿ ನಿಗಧಿತ ನಮೂನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ದಾಖಲಿಸುವುದು ಗುರುತಿನ ಬಗ್ಗೆ Voter ID, Aadhar Card, Driving License, PAN Card, Passport ಇವುಗಳಲ್ಲಿ ಯಾವುದಾದರು ಒಂದು ದಾಖಲೆ ಹಾಗೂ ವ್ಯಕ್ತಿಯ ಭಾವಚಿತ್ರವನ್ನು (PDF Formate) Upload ಮಾಡುವುದು. ಈ ಬಗ್ಗೆ ಯಾವುದಾದರೂ ಮಾಹಿತಿ / ಸಹಾಯ ಬೇಕಾಗಿದ್ದಲ್ಲಿ ಈ ಕೆಳಗಿನವರನ್ನು ಅಥವಾ Toll Free No: 1077ನ್ನು ಅಥವ ನಾಗರಾಜ್ ರಾವ್, ಜಿಲ್ಲಾ ಅಂಕಿ ಸಂಖ್ಯಾ ಸಂಗ್ರಹಣಾಧಿಕಾರಿ ಮೊ :-9880278233 ಮತ್ತು ಪ್ರಮೋದ್ ಎಸ್ ಆರ್ E District Project Manager ಮೊ: 9482641973 ಇವರನ್ನು ಸಂಪರ್ಕಿಸುವAತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.


Spread the love

1 Comment

Comments are closed.